For Quick Alerts
  ALLOW NOTIFICATIONS  
  For Daily Alerts

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು, ರಿಯಾ ಅಮ್ಮನಂತೆ ನೋಡಿಕೊಳ್ಳುತ್ತಿದ್ದರು ಎಂದ ವೈದ್ಯೆ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಅವರ ಸಾವಿನ ಸಂದರ್ಭದಿಂದಲೂ ಪ್ರತಿಪಾದಿಸಲಾಗುತ್ತಿದೆ. ಆದರೆ ಅವರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅವರಿಗೆ ಯಾವ ಖಿನ್ನತೆಯೂ ಇರಲಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಅವರಿಗೆ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ತಿನ್ನಿಸಿ ಅವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು ಎಂದು ಆರೋಪಿಸಲಾಗುತ್ತಿದೆ.

  ಸುಶಾಂತ್ ಸಾವಿನ ಬಳಿಕ ಮತ್ತೊಂದು ವದಂತಿಯೂ ಹರಡಿತ್ತು. ಸುಶಾಂತ್ ಅವರಲ್ಲಿ ಪರೋನೊಯಾ ಮತ್ತು ಬೈಪೊಲಾರ್ ಡಿಸಾರ್ಡರ್ ಎಂಬ ಎರಡು ಭೀಕರ ಕಾಯಿಲೆಗಳಿದ್ದವು ಎಂದು ವರದಿಯಾಗಿತ್ತು. ಈ ಎರಡೂ ಸಮಸ್ಯೆಗಳು ತೀರಾ ಅಪರೂಪದ್ದಾಗಿದ್ದು, ಇದಕ್ಕೆ ತುತ್ತಾದ ವ್ಯಕ್ತಿಯ ಮನಸ್ಸು ಕೆಲವೇ ಸೆಕೆಂಡುಗಳಲ್ಲಿ ಬದಲಾಗುತ್ತಿರುತ್ತದೆ. ತನಿಖಾ ತಂಡದಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಸುಶಾಂತ್ ಅವರಿಗಿದ್ದ ಎರಡು ಗಂಭೀರ ಸಮಸ್ಯೆಗಳ ಕುರಿತು ಹೇಳಿದ್ದರು ಎಂದು ಹೇಳಲಾಗಿತ್ತು. ಅದು ನಿಜ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ. ಮುಂದೆ ಓದಿ...

  ಮಾಹಿತಿ ನೀಡುವುದು ನನ್ನ ಕರ್ತವ್ಯ

  ಮಾಹಿತಿ ನೀಡುವುದು ನನ್ನ ಕರ್ತವ್ಯ

  ಸುಶಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಸುಸಾನ್ ವಾಕರ್ ಮೊಫತ್, ಸುಶಾಂತ್ ಸಿಂಗ್ ರಜಪೂತ್ ಅವರಲ್ಲಿ ಬೈಪೊಲಾರ್ ಡಿಸಾರ್ಡರ್ ಇತ್ತು. ಈ ಸಂದರ್ಭದಲ್ಲಿ ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

  ಈ ಎರಡು ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದರೇ ಸುಶಾಂತ್ ಸಿಂಗ್ ರಜಪೂತ್?ಈ ಎರಡು ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದರೇ ಸುಶಾಂತ್ ಸಿಂಗ್ ರಜಪೂತ್?

  'ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಪ್ಪು ಮಾಹಿತಿ ಮತ್ತು ಸಂಚಿನ ಸಿದ್ಧಾಂತಗಳನ್ನು ಹರಿಬಿಡಲಾಗುತ್ತಿದೆ. ಇದನ್ನು ಕಂಡು ನನ್ನ ಹೇಳಿಕೆ ದಾಖಲಿಸುವುದು ಕರ್ತವ್ಯ ಎಂದು ನಿರ್ಧರಿಸಿದ್ದೇನೆ' ಎಂದು ಸುಸಾನ್ ಹೇಳಿದ್ದಾರೆ.

  ಅನೇಕ ಸಲ ಭೇಟಿಯಾಗಿದ್ದೇನೆ

  ಅನೇಕ ಸಲ ಭೇಟಿಯಾಗಿದ್ದೇನೆ

  'ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಸೈಕೋಥೆರಪಿಸ್ಟ್ ಆಗಿ ನಾನು 2019ರ ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಹಲವು ಬಾರಿ ಸುಶಾಂತ್ ಮತ್ತು ರಿಯಾ ಚಕ್ರವರ್ತಿ ಅವರನ್ನು ಭೇಟಿ ಮಾಡಿದ್ದೇನೆ. ಈ ವರ್ಷ ಜೂನ್‌ನಲ್ಲಿ ಕೂಡ ರಿಯಾ ಜತೆ ಮಾತುಕತೆ ನಡೆಸಿದ್ದೆ' ಎಂದು ತಿಳಿಸಿದ್ದಾರೆ.

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು

  'ಸುಶಾಂತ್ ಬೈಪೊಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದರು. ಇದು ವ್ಯಕ್ತಿಯೊಬ್ಬರನ್ನು ಅತೀವವಾಗಿ ಕಾಡಬಹುದಾದ ಮಾನಸಿಕ ಅನಾರೋಗ್ಯ. ಇದು ಅತಿಯಾದ ಉದ್ವೇಗ, ತೀವ್ರ ಖಿನ್ನತೆ, ವಿಚಿತ್ರ ಆಲೋಚನೆ ಮತ್ತು ಪರೋನಿಯಾವನ್ನು ಒಳಗೊಂಡಿರಬಹುದು. ಮಾನಸಿಕ ಅನಾರೋಗ್ಯ ಉಂಟಾದಾಗ ಅದೊಂದು ಕಳಂಕ ಅಥವಾ ಮುಜುಗರ ಎಂದು ರೋಗಿ ಹಾಗೂ ಕುಟುಂಬದವರು ಭಾವಿಸುತ್ತಾರೆ. ಇದು ನಿಲ್ಲಬೇಕು. ಮಾನಸಿಕ ಅನಾರೋಗ್ಯ ಎನ್ನುವುದು ಕ್ಯಾನ್ಸರ್ ಅಥವಾ ಡಯಾಬಿಟಿಸ್‌ಗಿಂದ ವಿಭಿನ್ನವಲ್ಲ. ಇದು ಯಾರನ್ನು ಬೇಕಾದರೂ ಕಾಡಬಹುದು. ಇದಕ್ಕೆ ವರ್ಗ, ಆರ್ಥಿಕ ಸ್ಥಿತಿ ಮುಂತಾದವು ಮುಖ್ಯವಾಗುವುದಿಲ್ಲ. ಕ್ಯಾನ್ಸರ್ ಬಂದಂತೆಯೇ ಇದು ಕೂಡ' ಎಂದಿದ್ದಾರೆ.

  ಸುಶಾಂತ್ ನನ್ನ ಕೈಗೊಂಬೆ ಎಂದಿದ್ದ ರಿಯಾ: ಹಳೆ ವಿಡಿಯೋ ವೈರಲ್ಸುಶಾಂತ್ ನನ್ನ ಕೈಗೊಂಬೆ ಎಂದಿದ್ದ ರಿಯಾ: ಹಳೆ ವಿಡಿಯೋ ವೈರಲ್

  ರಿಯಾ ಬೆಂಬಲವಾಗಿದ್ದರು

  ರಿಯಾ ಬೆಂಬಲವಾಗಿದ್ದರು

  ಸುಶಾಂತ್ ಖಿನ್ನತೆ ಮತ್ತು ಹೈಪೋಮೇನಿಯಾದಿಂದ ಅತಿಯಾಗಿ ಬಳಲುತ್ತಿದ್ದರು. ಅವರಿಗೆ ರಿಯಾ ಗಟ್ಟಿಯಾಗಿ ಬೆಂಬಲ ನೀಡುತ್ತಿದ್ದರು. ಅವರಿಬ್ಬರು ಮೊದಲ ಬಾರಿ ಜತೆಯಾಗಿ ನೋಡಿದಾಗ, ಅಕೆ ತೋರುತ್ತಿದ್ದ ಕಾಳಜಿ, ಪ್ರೀತಿ ಮತ್ತು ಬೆಂಬಲ ಕಂಡು ಮೆಚ್ಚಿಕೊಂಡಿದ್ದೆ. ಅವರು ಎಷ್ಟು ಹತ್ತಿರವಾಗಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಅವರ ಅಪಾಯಿಂಟ್‌ಮೆಂಟ್‌ಗಳನ್ನೆಲ್ಲ ರಿಯಾ ತೆಗೆದುಕೊಳ್ಳುತ್ತಿದ್ದರು. ಯಾರಿಗಾದರೂ ಇದು ಗೊತ್ತಾದರೆ ಎಂದು ಸುಶಾಂತ್ ಭಯಪಡುವಾಗ ಚಿಕಿತ್ಸೆಗೆ ಒಳಗಾಗಲು ರಿಯಾ ಧೈರ್ಯ ತುಂಬುತ್ತಿದ್ದರು ಎಂದು ಹೇಳಿದ್ದಾರೆ.

  ಅಮ್ಮನಂತೆ ನೋಡಿಕೊಳ್ಳುತ್ತಿದ್ದರು

  ಅಮ್ಮನಂತೆ ನೋಡಿಕೊಳ್ಳುತ್ತಿದ್ದರು

  'ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದಾಗ ಅವರು ರಿಯಾ ಮೇಲೆ ಅವಲಂಬಿತರಾಗಿದ್ದರು. ತಾಯಿಯಂತಹ ಪ್ರೀತಿ ಬೇಕಿತ್ತು. ಆಕೆ ಪ್ರೀತಿ, ಪ್ರೋತ್ಸಾಹ ಮತ್ತು ಸಂಯಮದಿಂದ ಸಂಪೂರ್ಣವಾಗಿ ಆ ಜಾಗವನ್ನು ತುಂಬಿದ್ದರು. ಕುಟುಂಬದ ಸದಸ್ಯರಲ್ಲಿ ಮಾನಸಿಕ ಕಾಯಿಲೆಯಂತಹ ಕ್ರೂರ ಘಟ್ಟವನ್ನು ಎದುರಿಸುತ್ತಿದ್ದ ಆಕೆಗೆ ಅದು ಬಹಳ ಕಠಿಣವಾದ ಸಮಯ ಆಗಿತ್ತು. ಅದನ್ನು ಅವರು ರಹಸ್ಯವಾಗಿರಿಸಿಕೊಳ್ಳಬೇಕಿತ್ತು ಮತ್ತು ಸನ್ನಿವೇಶವನ್ನು ಮೌನದಿಂದ ಸಹಿಸಿಕೊಳ್ಳಬೇಕಿತ್ತು. ಇದು ಮತ್ತೂ ಕಷ್ಟದ ಸಂಗತಿ.

  ಪ್ರೇಯಸಿ ರಿಯಾ ಚಕ್ರವರ್ತಿಗಾಗಿ ಸುಶಾಂತ್ ಖರ್ಚು ಮಾಡಿದ ಹಣ ಎಷ್ಟು? ಬ್ಯಾಂಕ್ ಖಾತೆಯ ವಿವರ ಇಲ್ಲಿದೆಪ್ರೇಯಸಿ ರಿಯಾ ಚಕ್ರವರ್ತಿಗಾಗಿ ಸುಶಾಂತ್ ಖರ್ಚು ಮಾಡಿದ ಹಣ ಎಷ್ಟು? ಬ್ಯಾಂಕ್ ಖಾತೆಯ ವಿವರ ಇಲ್ಲಿದೆ

  ರಿಯಾ ಕಂಡಿರುವುದು ಬೇರೆ ರೀತಿ

  ರಿಯಾ ಕಂಡಿರುವುದು ಬೇರೆ ರೀತಿ

  ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ರಿಯಾ ವಿರುದ್ಧ ನಡೆಯುತ್ತಿರುವ ದಾಳಿ ನನಗೆ ಬಹಳ ಆಘಾತ ಉಂಟುಮಾಡಿದೆ. ಏಕೆಂದರೆ ನಾನು ಆಕೆಯನ್ನು ನೋಡಿದ್ದು ತುಂಬಾ ಕಾಳಜಿ ತೋರಿಸುವ ಮತ್ತು ಸಂವೇದನೆಯುಳ್ಳ ವ್ಯಕ್ತಿಯಾಗಿ. ಸುಶಾಂತ್ ಅವರ ದುಃಖಕರ ಮತ್ತು ಅಕಾಲಿಕ ಸಾವು ನಮಗೆಲ್ಲರಿಗೂ ಮತ್ತೊಂದು ಪಾಠವಾಗಬೇಕು. ಮಾನಸಿಕ ಕಾಯಿಲೆ ಕುರಿತಾದ ಅಂಜಿಕೆ ಮತ್ತು ಭಯ ತೊಲಗಬೇಕು ಎಂದಿದ್ದಾರೆ.

  ಸುಸಾನ್ ವಿರುದ್ಧವೂ ಜನರ ಅನುಮಾನ

  ಸುಸಾನ್ ವಿರುದ್ಧವೂ ಜನರ ಅನುಮಾನ

  ಆದರೆ, ಸುಸಾನ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತ ಅಥವಾ ಬದುಕಿರುವ ವ್ಯಕ್ತಿಯ ಅನಾರೋಗ್ಯದ ಮಾಹಿತಿಯನ್ನು ಅವರ ಕುಟುಂಬದವರ ಅನುಮತಿ ಇಲ್ಲದೆ ಬಹಿರಂಗಪಡಿಸುವಂತಿಲ್ಲ ಎನ್ನುವುದು ಒಂದು ವಾದವಾದರೆ, ಸುಸಾನ್ ಅವರ ವಿಶ್ವಾಸಾರ್ಹತೆಯನ್ನೇ ಅನೇಕರು ಪ್ರಶ್ನಿಸಿದ್ದಾರೆ. ಸುಸಾನ್ ಅವರ ಮಾತುಗಳಲ್ಲಿ ರಿಯಾ ಅವರನ್ನು ರಕ್ಷಿಸುವ ಪ್ರಯತ್ನ ಸ್ಪಷ್ಟವಾಗಿ ಕಾಣಿಸುತ್ತಿದೆ. ಬಾಲಿವುಡ್ ಗುಂಪಿನೊಳಗೆ ಪೊಲೀಸರು, ರಾಜಕಾರಣಿಗಳು ಸೇರಿಕೊಂಡಿರುವಾಗ ವೈದ್ಯರೊಬ್ಬರು ಕೂಡ ಅದರಲ್ಲಿ ಭಾಗಿಯಾಗಿ ಸುಳ್ಳು ಹಬ್ಬಿಸುವುದು ದೊಡ್ಡ ಸಂಗತಿಯೇನಲ್ಲ ಎಂದು ಅನೇಕರು ಹೇಳಿದ್ದಾರೆ.

  English summary
  Sushant Singh Rajput's therapist Susan Walker Moffat said he was suffered from Bipolar Disorder and Rhea was in his support.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X