ಚೀನಾದಲ್ಲಿ ಆಟ ಮುಗಿಸಿದ ಸುಶಾಂತ್ ಸಿಂಗ್ ಸಿನಿಮಾ 'ಛಿಛೊರೆ': ಬಾಕ್ಸಾಫೀಸ್ ರಿಪೋರ್ಟ್ ಏನು?

ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಸಿನಿಮಾ 'ಛಿಛೊರೆ' ಚೀನಾದಲ್ಲಿ ಬಿಡುಗಡೆಯಾಗಿತ್ತು. 2022, ಜನವರಿ 7ರಂದು ಚೀನಾದಲ್ಲಿ ಸುಮಾರು 11 ಸಾವಿರ ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ತೆರೆಕಂಡಿತ್ತು. ವಿಶೇಷ ಅಂದರೆ, ಈ ಸಿನಿಮಾವನ್ನು ಆಮಿರ್ ಖಾನ್ ನಟಿಸಿದ 'ದಂಗಲ್' ಚಿತ್ರದ ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಮಾಸ್ ಆಗದೇ ಹೋದರೂ, ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದವು.

'ಛಿಛೊರೆ' ನೈಜ ಘಟನೆಗಳನ್ನು ಆಧರಿಸಿದ ಕಥೆ. ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಐಐಟಿ ಬಾಂಬೆಯಲ್ಲಿ ಶಿಕ್ಷಣ ಪಡೆಯುವಾಗ ನಡೆದ ಘಟನೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಮಧ್ಯಮ ವರ್ಗದ ವಿಚ್ಛೇದಿತ ಅನಿರುದ್ಧ್. ಈತನ ಮಗ 'ಲೂಸರ್' ಎನ್ನವ ಹಣೆ ಪಟ್ಟಿಯನ್ನು ಹೊತ್ತುಕೊಳ್ಳಲು ಇಚ್ಚಿಸದೆ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆಗ ತನ್ನ ಕಾಲೇಜಿನ ದಿನಗಳನ್ನು ಮತ್ತೆ ಮಗನಿಗೆ ತಿಳಿಸಲು ಮುಂದಾಗುತ್ತಾನೆ. ತನ್ನ ಸ್ನೇಹಿತನ ಕಷ್ಟ ದಿನಗಳನ್ನು ನೆನೆದು ಎಲ್ಲಾ ಸ್ನೇಹಿತರು ಮತ್ತೆ ಒಂದಾಗುವ ಕಥೆ. ಈ ಭಾವನಾತ್ಮಕ ಕಥೆ ಚೀನಾ ಪರದೆ ಮೇಲೆ ಪ್ರದರ್ಶನ ಕಂಡಿತ್ತು.

 ಬಾಲಿವುಡ್‌ ಸಿನಿಮಾಗಳಿಗೆ ಚೀನಾದಲ್ಲಿ ಬೇಡಿಕೆ

ಬಾಲಿವುಡ್‌ ಸಿನಿಮಾಗಳಿಗೆ ಚೀನಾದಲ್ಲಿ ಬೇಡಿಕೆ

ಬದುಕಿನಲ್ಲಿ ಸೋಲು ಗೆಲುವು ಕಾಮನ್. ಆದರೆ, ಅದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎನ್ನುವುದು 'ಛಿಛೊರೆ' ಕಥೆಯ ಎಳೆ. ಸಾಮಾನ್ಯವಾಗಿ ಚೀನಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. ಇದರೊಂದಿಗೆ ಚೀನಾದ ಜನರಿಗೆ ಬಾಲಿವುಡ್‌ನ ಭಾವನಾತ್ಮಕ ಸಿನಿಮಾಗಳು ಇಷ್ಟ ಆಗುತ್ತವೆ. ಹೀಗಾಗಿಯೇ 'ಛಿಛೊರೆ' ಸಿನಿಮಾ ಕೂಡ ಚೀನಾದ ಬಾಕ್ಸಾಫೀಸ್‌ನಲ್ಲಿ ಚಿಂದಿ ಮಾಡುತ್ತೆ ಎಂಬ ನಿರೀಕ್ಷೆಯ ಮೇಲೆ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಸದ್ಯ ಸುಶಾಂತ್ ಸಿಂಗ್ ರಜಪೂತ್ ಸಿನಿಮಾ 'ಛಿಛೊರೆ' ಸಿನಿಮಾದ ಬಹುತೇಕ ಚಿತ್ರಮಂದಿರದಲ್ಲಿ ಆಟ ಮುಗಿಸಿದೆ.

 ಸುಶಾಂತ್ 'ಛಿಛೊರೆ' ಗಳಿಸಿದ್ದು ಎಷ್ಟು?

ಸುಶಾಂತ್ 'ಛಿಛೊರೆ' ಗಳಿಸಿದ್ದು ಎಷ್ಟು?

ಚೀನಾದಲ್ಲಿ 11 ಸಾವಿರ ಸ್ಕ್ರೀನ್‌ಗಳಲ್ಲಿ 'ಛಿಛೊರೆ' ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ಬಗ್ಗೆ ನಿರೀಕ್ಷೆನೂ ಬೆಟ್ಟದಷ್ಟಿತ್ತು. ಆದರೆ, 'ದಂಗಲ್', 'ಸೀಕ್ರೆಟ್ ಸೂಪರ್‌ಸ್ಟಾರ್', ಅಂತಹ ಸಿನಿಮಾಗಳಿಗೆ ಸಿಕ್ಕ ಯಶಸ್ಸು ಈ ಸಿನಿಮಾಗೆ ಸಿಕ್ಕಿಲ್ಲ. ಜನವರಿ 7 ರಿಂದ 'ಛಿಛೊರೆ' ಚೀನಾದ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಕೇವಲ 22.52 ಕೋಟಿ. ಚೀನಾದ 11 ಸಾವಿರ ಸ್ಕ್ರೀನ್‌ಗಳಲ್ಲಿ ಈ ಗಳಿಕೆ ಕಡಿಮೆ ಅಂತಲೇ ಹೇಳಲಾಗುತ್ತಿದೆ.

 'ಛಿಛೊರೆ' ಸೋಲಿಗೆ ಕಾರಣವೇನು?

'ಛಿಛೊರೆ' ಸೋಲಿಗೆ ಕಾರಣವೇನು?

'ಛಿಛೊರೆ' ಅಂತಹ ಭಾವನಾತ್ಮಕ ಸಿನಿಮಾ ಚೀನಾದಲ್ಲಿ ದೊಡ್ಡ ಮಾರುಕಟ್ಟೆಯಲ್ಲಿ ಕಮ್ಮಿ ಅಂದರೂ ನೂರು ಕೋಟಿ ಗಳಿಕೆ ಮಾಡಬೇಕಿತ್ತು. ಇದೇ ಸಿನಿಮಾದ ನಿರ್ದೇಶಕ ನಿತೀಶ್ ತಿವಾರಿ 'ದಂಗಲ್' ಅಂತಹ ಸಿನಿಮಾವನ್ನೂ ನಿರ್ದೇಶಿಸಿದ್ದರು. ಆ ಸಿನಿಮಾ ಚೀನಾದ ಬಾಕ್ಸಾಫೀಸ್‌ನಲ್ಲಿ ಸುಮಾರು 1200 ಕೋಟಿ ಲೂಟಿ ಮಾಡಿತ್ತು. ಆ ಲೆಕ್ಕದಲ್ಲಿ ಈ ಸಿನಿಮಾ ಏನಂದರೆ, ಏನೂ ಇಲ್ಲ. ಈ ನಿರಾಸೆಯ ಪ್ರದರ್ಶನಕ್ಕೆ ಕಾರಣ ಕೊರೊನಾ ಎಂದು ಹೇಳಲಾಗುತ್ತಿದೆ. ಕೊರೊನಾದಿಂದಾಗಿ ಚೀನಾದಲ್ಲಿ ಜನರು ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಇದರ ಜೊತೆ ಜೊತೆನೇ ಹೊಸ ಸಿನಿಮಾಗಳ ಪೈಪೋಟಿ 'ಛಿಛೊರೆ' ಗಳಿಕೆ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ.

 ವ್ಯಾಪಾರದ ಬಗ್ಗೆ ವಿಮರ್ಶಕರು ಏನಂತಾರೆ?

ವ್ಯಾಪಾರದ ಬಗ್ಗೆ ವಿಮರ್ಶಕರು ಏನಂತಾರೆ?

'ಛಿಛೊರೆ' ಚೀನಾದಲ್ಲಿ ಬಾಕ್ಸಾಫೀಸ್‌ನಲ್ಲಿ ತನ್ನ ಆಟ ನಿಲ್ಲಿಸಿದ್ದು, 25 ಕೋಟಿ ದಾಟಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಿನಿಮಾ ಟ್ರೇಡ್ ವಿಮರ್ಶಕರು ಬೇರೆಯದ್ದೇ ಕಾರಣ ನೀಡುತ್ತಾರೆ. ಸದ್ಯ ಪರಿಸ್ಥಿತಿಯಲ್ಲಿ 'ಛಿಛೊರೆ'ಗೆ ಸಿಕ್ಕಿರುವ ಪ್ರತಿಕ್ರಿಯೆ ತುಂಬಾನೇ ದೊಡ್ಡದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾದಿಂದ ಥಿಯೇಟರ್‌ಗಳಿಗೆ ಬರಲು ಹಿಂದೇಟು ಹಾಕುತ್ತಿರುವಾಗ, ಮೂರು ವರ್ಷದ ಹಿಂದೆ ತೆರೆಕಂಡ ಸಿನಿಮಾಗೆ ಪ್ರತಿಕ್ರಿಯೆ ನೀಡಿದ್ದನ್ನು ಕಂಡ ಸಮಾಧಾನ ಪಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
Sushant Singh Rajput starrer Chhichhore ends its run in China Boxoffice. Chhichhore was expected to do well at the boxoffice. It has collected 22.52 crore at the china box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X