For Quick Alerts
  ALLOW NOTIFICATIONS  
  For Daily Alerts

  ವಿಶ್ವದಾಖಲೆ ಬರೆದ ಸುಶಾಂತ್ ಸಿಂಗ್ ನಟನೆಯ 'ದಿಲ್ ಬೇಚಾರಾ' ಚಿತ್ರದ ಟ್ರೇಲರ್

  |

  ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರ 'ದಿಲ್ ಬೇಚಾರಾ' ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಬಹುಶಃ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಅವಕಾಶವಿದ್ದಿದ್ದರೆ ದಾಖಲೆಯ ಗಳಿಕೆ ಕಂಡಿದ್ದರೂ ಅಚ್ಚರಿಯಾಗುತ್ತಿರಲಿಲ್ಲ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದ್ದ ಅದು ಜಗತ್ತಿನ ಯಾವ ಸಿನಿಮಾ ಮಾಡದ ಮತ್ತೊಂದು ದಾಖಲೆ ಬರೆದಿದೆ. ವಿಪರ್ಯಾಸವೆಂದರೆ ತಮ್ಮ ಚಿತ್ರದ ಈ ಸಾಧನೆಗಳನ್ನು ನೋಡಲು ಸುಶಾಂತ್ ನಮ್ಮ ನಡುವೆ ಇಲ್ಲ.

  ಬಿಡುಗಡೆಯಾದ 24 ಗಂಟೆಯೊಳಗೆ 23 ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದ್ದ 'ದಿಲ್ ಬೇಚಾರಾ' ಟ್ರೇಲರ್, 5.1 ಮಿಲಿಯನ್ ಲೈಕ್ ಪಡೆದು ಹೊಸ ದಾಖಲೆ ನಿರ್ಮಿಸಿತ್ತು. ಈಗ ಆ ಟ್ರೇಲರ್ 10 ಮಿಲಿಯನ್, ಅಂದರೆ ಒಂದು ಕೋಟಿ ಲೈಕ್‌ಗಳನ್ನು ಪಡೆದುಕೊಂಡಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಸಿನಿಮಾ ಎನಿಸಿದೆ. ಜಗತ್ತಿನ ಯಾವ ಚಿತ್ರದ ಟ್ರೇಲರ್ ಕೂಡ ಒಂದು ಕೋಟಿ ಲೈಕ್ ಪಡೆದಿರಲಿಲ್ಲ.

  ಹೊಸ ಹಾಡು ಬಿಡುಗಡೆ

  ಹೊಸ ಹಾಡು ಬಿಡುಗಡೆ

  'ದಿಲ್ ಬೇಚಾರಾ' ಜುಲೈ 24ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಜನರಿಗೆ ಬಹಳ ಇಷ್ಟವಾಗಿದೆ. ಎ.ಆರ್. ರೆಹಮಾನ್ ಸಂಗೀತದ ಹಾಡುಗಳು ಸಕತ್ ಸದ್ದು ಮಾಡುತ್ತಿವೆ. ಕುಲ್ಕೆ ಜೀನೆ ಕಾ ಹಾಡು ಭಾನುವಾರ ಬಿಡುಗಡೆಯಾಗಿದ್ದು, ಎರಡೇ ಗಂಟೆಯಲ್ಲಿ ಐದು ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

  ನನ್ನ ಆರೋಪ ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುತ್ತೇನೆ: ಕಂಗನಾ ಸವಾಲುನನ್ನ ಆರೋಪ ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುತ್ತೇನೆ: ಕಂಗನಾ ಸವಾಲು

  ಟೈಟಲ್ ಸಾಂಗ್ ಧಮಾಕಾ

  ಟೈಟಲ್ ಸಾಂಗ್ ಧಮಾಕಾ

  ಜುಲೈ 10ರಂದು ಬಿಡುಗಡೆಯಾಗಿದ್ದ 'ದಿಲ್ ಬೇಚಾರಾ' ಟೈಟಲ್ ಸಾಂಗ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸಿದೆ. 55 ಮಿಲಿಯನ್ ಬಾರಿ ವೀಕ್ಷಣೆಗೆ ಪಡೆದಿರುವ ಈ ಹಾಡು ಐದು ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ದಿಲ್ ಬೇಚಾರಾ ಟ್ರೇಲರ್ 77 ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ.

  ಸಿನಿಮಾ ನೋಡಿದ್ದ ಸುಶಾಂತ್

  ಸಿನಿಮಾ ನೋಡಿದ್ದ ಸುಶಾಂತ್

  ಡಬ್ಬಿಂಗ್ ವೇಳೆ ಸುಶಾಂತ್ ಸಂಪೂರ್ಣ ಸಿನಿಮಾ ನೋಡಿದ್ದರು. ಚಿತ್ರದ ಬಗ್ಗೆ ಅವರು ಬಹಳ ಎಕ್ಸೈಟ್ ಆಗಿದ್ದರು. ದುರದೃಷ್ಟವಶಾತ್ ಅವರಿಗೆ ಫೈನಲ್ ಕಟ್ ನೋಡಲು ಸಾಧ್ಯವಾಗಲಿಲ್ಲ. ಆದರೆ ಸಿನಿಮಾ ಬಗ್ಗೆ ಅವರಿಗೆ ಖುಷಿಯಿತ್ತು. ಮಾರ್ಕೆಟಿಂಗ್ ಮಾಡುವ ವಿಚಾರದಲ್ಲಿ ಚರ್ಚಿಸಿದ್ದರು ಎಂದು ಚಿತ್ರದ ನಿರ್ದೇಶಕ ಮುಕೇಶ್ ಛಾಬ್ರಾ ಹೇಳಿದ್ದಾರೆ.

  ಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ

  ಆನ್‌ಲೈನ್ ಬಿಡುಗಡೆ ಬಗ್ಗೆ ತಿಳಿದಿತ್ತು

  ಆನ್‌ಲೈನ್ ಬಿಡುಗಡೆ ಬಗ್ಗೆ ತಿಳಿದಿತ್ತು

  ಸಿನಿಮಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವ ಸಂಗತಿ ಅವರಿಗೆ ತಿಳಿದಿತ್ತು. ಪ್ರತಿಯೊಬ್ಬರೂ ಸಿನಿಮಾ ನೋಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡುವುದು ಒಳ್ಳೆಯ ಯೋಜನೆ ಎಂದಿದ್ದರು. ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆಯೋ ಯಾರಿಗೂ ಗೊತ್ತಿಲ್ಲ. ಇದು ಸುಶಾಂತ್ ಅವರಿಗೂ ಅರಿವಿತ್ತು. ಹೀಗಾಗಿ ಒಟಿಟಿ ಬಿಡುಗಡೆ ಕುರಿತು ಅವರಿಗೆ ಸಂತೋಷವಿತ್ತು ಎಂದು ಛಾಬ್ರಾ ತಿಳಿಸಿದ್ದಾರೆ.

  ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ...ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ...

  English summary
  Sushant Singh Rajput starrer Dil Bechara movie becomes the first ever movie trailer in the world to get 10 million likes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X