ಲಿಪ್‌ಸ್ಟಿಕ್ ಹಚ್ಚಿ.. ಹಣೆ ಬೊಟ್ಟಿಟ್ಟು.. ಟ್ರಾನ್ಸ್‌ಜೆಂಡರ್‌ ಲುಕ್ ಕೊಟ್ಟ ಸುಶ್ಮಿತಾ ಸೇನ್!

ಮಾಜಿ ಭುವನ ಸುಂದರಿ, ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಬಾಯ್‌ಫ್ರೆಂಡ್, ಮದುವೆ, ಬ್ರೇಕಪ್ ವಿಚಾರಗಳಿಗೆ ಸುಶ್ಮಿತಾ ಸೇನ್ ಕಳೆದ ಒಂದೆರಡು ತಿಂಗಳುಗಳಿಂದ ಸೌಂಡ್ ಮಾಡುತ್ತಲೇ ಇದ್ದರು.

ಆದ್ರೀಗ ಸುಶ್ಮಿತಾ ಸೇನ್ ವಿವಾದಗಳಿಂದ ಅಲ್ಲ. ಬದಲಾಗಿ, ತಮ್ಮ ಹೊಸ ಲುಕ್‌ನಿಂದ ಸುದ್ದಿಯಲ್ಲಿದ್ದಾರೆ. ಸುಶ್ಮಿತಾ ಸೇನ್ ಹೊಸ ವೆಬ್‌ ಸಿರೀಸ್‌ನಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ವೆಬ್‌ ಸಿರೀಸ್‌ನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸದ್ಯ ಬಾಲಿವುಡ್‌ನಲ್ಲಿ ಚರ್ಚೆಯಲ್ಲಿದೆ.

ಟ್ರಾನ್ಸ್‌ಜೆಂಡರ್ ಲುಕ್ ಕೊಟ್ಟ ಸುಶ್ಮಿತಾ ಸೇನ್

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೊಸ ಲುಕ್ ಸಿನಿಪ್ರಿಯರನ್ನು ಬೆರಗು ಕಣ್ಣುಗಳಿಂದ ನೋಡುವಂತೆ ಮಾಡಿದೆ. ಅದಕ್ಕೆ ಕಾರಣ ಸುಶ್ಮಿತಾ ಆಯ್ಕೆ ಮಾಡಿಕೊಂಡಿರುವ ಪಾತ್ರ. ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡು, ಹಣೆಗೆ ಬೊಟ್ಟು ಇಟ್ಟುಕೊಂಡು ಗಂಭೀರವಾಗಿ ನಿಂತಿರುವ ಬಾಲಿವುಡ್‌ ನಟಿಯ ಅವತಾರವೀಗ ಟಾಕ್ ಆಫ್ ದಿ ಟೌನ್ ಆಗಿದೆ.

Sushmita Sen Will Be Seen As Transgender Activist Gauri Sawant In Taali Series

ಹೌದು, ಸುಶ್ಮಿತಾ ಸೇನ್ ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಈ ವೆಬ್‌ ಸಿರೀಸ್‌ ಹೆಸರು 'ತಾಲಿ'. ಅಂದ್ಹಾಗೆ ಈ ಸಿರೀಸ್‌ನಲ್ಲಿ ಸುಶ್ಮಿತಾ ಸೇನ್ ಲೈಂಗಿಕ ಅಲ್ಪ ಸಂಖ್ಯಾತ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗೌರಿ ಸಾವಂತ್ ಯಾರು?

ಗೌರಿ ಸಾವಂತ್ ಪೂನಾದಲ್ಲಿ ಗಣೇಶ್ ಆಗಿ ಜನ್ಮ ತಾಳಿದ್ದರು. ಬೆಳೆದಿದ್ದು ಕೂಡ ಗಣೇಶ್ ಆಗಿಯೇ. ಆದರೆ, ಪ್ರಬುದ್ಧರಾದ ಬಳಿಕ ಗೌರಿ ಸಾವಂತ್ ಆಗಿ ಬದಲಾಗಿದ್ದರು. 2013ರಲ್ಲಿ ಲೈಂಗಿಕ ಅಲ್ಪಸಂಖ್ಯಾತರು ತೃತೀಯ ಲಿಂಗಿಗಳು ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. 2014ರಲ್ಲಿ ಸುಪ್ರೀಂ ಕೋರ್ಟ್ ಈ ದಾವೆಯನ್ನು ಅಂಗೀಕರಿಸಿ ತೀರ್ಪು ನೀಡಿತ್ತು. ಹೀಗೆ ದಾವೆ ಹೂಡಿದ್ದವರಲ್ಲಿ ಪ್ರಮುಖರು ಗೌರಿ ಸಾವಂತ್. ಇವರೇ ಪಾತ್ರದಲ್ಲಿಯೇ ಸುಶ್ಮಿತಾ ಸೇನ್ ಕಾಣಿಸಿಕೊಳ್ಳಿದ್ದಾರೆ.

"ಸವಾಲು ಹಾಗೂ ಕಷ್ಟದಿಂದ ಈ ಜರ್ನಿ ಹೆಮ್ಮೆ ಪಡಲು ಇದಕ್ಕಿಂತ ಇನ್ನೇನು ಬೇಕು ಎನಿಸುತ್ತಿದೆ. ಇದು ಕೇವಲ ಕ್ರಾಂತಿಯನ್ನು ನೋಡಲು ಸಹಕಾರಿಯಾಗಿದೆ." ಎಂದು ಸುಶ್ಮಿತಾ ಸೇನ್ ತಮ್ಮ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Sushmita Sen Will Be Seen As Transgender Activist Gauri Sawant In Taali Series

ಗೌರ ಸಾವಂತ್ ಚರಿತ್ರೆ ಮೇಲೆ ಬೆಳಕು ಚೆಲ್ಲಿದೆ

'ತಾಲಿ' ವೆಬ್ ಸೀರಿಸ್ ಗೌರಿ ಸಾವಂತ್ ಅವರ ಬಾಲ್ಯ, ಅವರಲ್ಲಾದ ಬದಲಾವಣೆ, ಲೈಂಗಿಕ ಅಲ್ಪ ಸಂಖ್ಯಾತರ ಚಳುವಳಿಯಲ್ಲಿ ಅವರು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ಈ ವೆಬ್‌ ಸಿರೀಸ್‌ನಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಓಟಿಟಿ ವಲಯದಲ್ಲಿ ಇದೊಂದು ಕ್ರಾಂತಿ ಎಂದೇ ಹೇಳಬಹುದು.

ಸುಶ್ಮಿತಾ ಸೇನ್ ಈ ಹಿಂದೆ ಓಟಿಟಿಯಲ್ಲಿ 'ಆರ್ಯ' ಅನ್ನೋ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಹೊಸ ಸಿರೀಸ್ 'ತಾಲಿ'ಯಲ್ಲಿ ನಟಿಸುತ್ತಿದ್ದು, ಇದೇ ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಫಸ್ಟ್ ಲುಕ್ ರಿಲೀವ್ ಆಗಿದ್ದು, ಸಿರೀಸ್ ಹೇಗಿರುತ್ತೆ? ಅನ್ನೋದು ಗೊತ್ತಾಗಲಿದೆ.

More from Filmibeat

English summary
Sushmita Sen Will Be Seen As Transgender Activist Gauri Sawant In Taali Series, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X