ಕೋವಿಡ್ 19 ವಿಮೆ ಪಡೆದುಕೊಳ್ಳಲಿದೆ ತಾಪ್ಸಿ ಪನ್ನು ಚಿತ್ರ
ತಾಪ್ಸಿ ಪನ್ನು ನಟನೆಯ 'ಲೂಪ್ ಲಪೆಟಾ' ಚಿತ್ರವು ಬಾಲಿವುಡ್‌ನಲ್ಲಿ ಕೋವಿಡ್ 19 ವಿಮೆ ಪಡೆದ ಮೊದಲ ಚಿತ್ರಗಳಲ್ಲಿ ಒಂದೆನಿಸಿಕೊಳ್ಳಲಿದೆ. ಚಿತ್ರದ ನಿರ್ಮಾಪಕರಾದ ಅತುಲ್ ಕಸ್ಬೇಕರ್ ಮತ್ತು ತನುಜ್ ಗರ್ಗ್ ಈ ಸಂಬಂಧ ಕಾನೂನು ಪರಿಣತರ ಜತೆ ಮಾತುಕತೆ ನಡೆಸುತ್ತಿದ್ದಾರೆ.
Recommended Video
ತಮ್ಮ ಪ್ರಾಜೆಕ್ಟ್‌ಗಳಿಗೆ ಕೋವಿಡ್ 19 ವಿಮೆ ಮಾಡಿಸಲು ಅವರು ಬಯಸಿದ್ದು, ಇದು ಸಾಧ್ಯವಾದರೆ ವಿಮಾ ಯೋಜನೆಗೆ ಒಳಪಡುವ ಬಾಲಿವುಡ್‌ನ ಮೊದಲ ಚಿತ್ರಗಳಲ್ಲಿ ಒಂದು ಎಂದೆನಿಸಿಕೊಳ್ಳಲಿದೆ.
ಇದು 1998ರ ಜರ್ಮನ್‌ನ ಹಿಟ್ ಚಿತ್ರ ಟಾಮ್ ಟೈವರ್ ಅವರ 'ರನ್ ಲೋಲಾ ರನ್'ನ ಬಾಲಿವುಡ್ ಅವತರಣಿಕೆಯಾಗಲಿದೆ. ಈ ಚಿತ್ರದಲ್ಲಿ ತಾಪ್ಸಿ ಜತೆ ತಾಹಿರ್ ರಾಜ್ ಭಾಸಿನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ವಿಮೆಯು ಚಿತ್ರತಂಡಕ್ಕೆ ಸುರಕ್ಷೆ ಒದಗಿಸಲಿದೆ. ಚಿತ್ರತಂಡ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದರೂ ಅವರನ್ನು ಏಕಾಏಕಿ ಬದಲಿಸಲು ಹೋಗುವುದಿಲ್ಲ.

ತಂಡದ ಸದಸ್ಯರಲ್ಲಿ ಕೊರೊನಾ ವೈರಸ್ ಕಂಡುಬಂದರೆ ಇಡೀ ಚಿತ್ರತಂಡವನ್ನು ಕ್ವಾರೆಂಟೈನ್ ಮಾಡಬೇಕಾಗುತ್ತದೆ. ಆಗ ಈ ಸಮಯದಲ್ಲಿ ಕಳೆದುಕೊಳ್ಳುವ ಹಣವನ್ನು ನಿರ್ಮಾಪಕರು ಮರಳಿ ಪಡೆದುಕೊಳ್ಳುತ್ತಾರೆ. ಅಪಘಾತ ವಿಮೆಯಂತೆಯೇ ಕೋವಿಡ್ 19 ವಿಮೆ ಕೂಡ ಅತ್ಯವಶ್ಯಕವಾಗಿದೆ. ಹೀಗಾಗಿ ಅದರ ವಿವರಗಳನ್ನು ಪಡೆದುಕೊಳ್ಳಲು ನಮ್ಮ ಕಾನೂನು ಪರಿಣತರ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.


Click it and Unblock the Notifications











