'ಅಪ್ಪ ಅಮ್ಮ ಒಪ್ಪಲಿಲ್ಲ ಅಂದ್ರೆ ಅಷ್ಟೇ...': ಬಾಯ್‌ ಫ್ರೆಂಡ್‌ಗೆ ಕೈ ಕೊಡ್ತಾರಾ ತಾಪ್ಸಿ?

ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡ ನಟಿ ತಾಪ್ಸಿ ಪನ್ನು, ಈಗ ಬಾಲಿವುಡ್‌ನಲ್ಲಿ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯಿ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದನ್ನು ತಾಪ್ಸಿ ಅಲ್ಲಗಳೆದಿರಲಿಲ್ಲ. ಹಾಗೆಯೇ ಅದನ್ನು ಕದ್ದುಮುಚ್ಚಿಯೂ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಹಾಗೂ ಮಥಿಯಾಸ್ ಬೋಯಿ ಜತೆಗಿನ ಸಂಬಂಧ ಮನೆಯವರಿಗೆ ಚೆನ್ನಾಗಿ ತಿಳಿದಿದೆ. ಬಾಯ್ ಫ್ರೆಂಡ್‌ನ ಇಷ್ಟಕಷ್ಟಗಳ ಅರಿವೂ ಅವರಿಗೆ ಇದೆ. ಅವರನ್ನು ಇಷ್ಟಪಟ್ಟು ಒಪ್ಪಿಕೊಂಡಿದ್ದಾರೆ ಕೂಡ. ಆದರೂ ಹಾಗೊಂದು ವೇಳೆ ಮನೆಯವರು ಆತನನ್ನು ರಿಜೆಕ್ಟ್ ಮಾಡಿದರೆ, ಈ ಸಂಬಂಧ ಸರಿ ಹೊಂದಲ್ಲ ಎನಿಸಿದರೆ ಅಲ್ಲಿಗೇ ಅದು ಅಂತ್ಯಗೊಳ್ಳಲಿದೆ ಎಂದು ತಾಪ್ಸಿ ತಿಳಿಸಿದ್ದಾರೆ. ಮುಂದ ಓದಿ...

ಪ್ರಚಾರಕ್ಕಾಗಿ ಹೇಳುತ್ತಿಲ್ಲ

ಪ್ರಚಾರಕ್ಕಾಗಿ ಹೇಳುತ್ತಿಲ್ಲ

'ನಾನು ಯಾರಿಂದಲೂ ಏನನ್ನೂ ಮುಚ್ಚಿಡಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ಬೇರೊಬ್ಬರ ಹಾಜರಿಯನ್ನು ಒಪ್ಪಿಕೊಳ್ಳುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಆದರೆ ಅದೇ ವೇಳೆ ನಾನು ಅದನ್ನು ಹೆಡ್ಲೈನ್ಸ್‌ಗಾಗಿ ಹೇಳುತ್ತಿಲ್ಲ. ಏಕೆಂದರೆ ಅದು ನಟಿಯಾಗಿ ಮತ್ತು ಇಷ್ಟು ವರ್ಷ ಕಷ್ಟಪಟ್ಟು ಸಂಪಾದಿಸಿದ ನನ್ನ ವಿಶ್ವಾಸಾರ್ಹತೆಯನ್ನು ಕಿತ್ತುಕೊಳ್ಳುತ್ತದೆ. ಹೀಗಾಗಿ ಪ್ರಚಾರಕ್ಕಾಗಿ ನಾನು ಅದನ್ನು ಬಳಸಿಕೊಳ್ಳುವುದಿಲ್ಲ' ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.

ಮನೆಯವರೆಲ್ಲರೂ ಇಷ್ಟಪಟ್ಟಿದ್ದಾರೆ

ಮನೆಯವರೆಲ್ಲರೂ ಇಷ್ಟಪಟ್ಟಿದ್ದಾರೆ

'ನನ್ನ ಬದುಕಿನಲ್ಲಿ ಒಬ್ಬರು ಇದ್ದಾರೆ ಮತ್ತು ಅದು ನನ್ನ ಕುಟುಂಬಕ್ಕೂ ತಿಳಿದಿದೆ. ನಾನು ಯಾವ ವ್ಯಕ್ತಿಯ ಜತೆ ಇದ್ದೆನೋ ಆ ವ್ಯಕ್ತಿಯನ್ನು ಸಹೋದರಿ, ಅಪ್ಪ-ಅಮ್ಮ ಸೇರಿದಂತೆ ಕುಟುಂಬದ ಎಲ್ಲರೂ ಇಷ್ಟಪಟ್ಟಿದ್ದಾರೆ. ಇದು ನನಗೆ ಬಹಳ ಮುಖ್ಯ. ಇಲ್ಲದಿದ್ದರೆ ಇದರಲ್ಲಿ ನಾನು ಮುಂದುವರಿಯಲು ಆಗುತ್ತಿರಲಿಲ್ಲ'.

ಒಪ್ಪಿಕೊಳ್ಳದಿದ್ದರೆ ಕಷ್ಟ

ಒಪ್ಪಿಕೊಳ್ಳದಿದ್ದರೆ ಕಷ್ಟ

'ಅದರ ಬಗ್ಗೆ ನಾನು ಯಾವಾಗಲೂ ತಮಾಷೆ ಮಾಡುತ್ತಾ ಹೇಳುತ್ತಿರುತ್ತೇನೆ, ಒಂದು ವೇಳೆ ಅಪ್ಪ-ಅಮ್ಮ ಒಪ್ಪಿಕೊಳ್ಳದೇ ಇದ್ದರೆ ಈ ಸಂಬಂಧ ಭವಿಷ್ಯದಲ್ಲಿ ಮುಂದುವರಿಯುವುದು ಕಷ್ಟ' ಎಂದು ತಾಪ್ಸಿ ಹೇಳಿದ್ದಾರೆ.

ತಾಪ್ಸಿ ಅಮ್ಮನಿಗೂ ಹುಡುಗ ಇಷ್ಟ

ತಾಪ್ಸಿ ಅಮ್ಮನಿಗೂ ಹುಡುಗ ಇಷ್ಟ

ಮಗಳ ಆಯ್ಕೆಯನ್ನು ಅಮ್ಮ ಕೂಡ ಮೆಚ್ಚಿಕೊಂಡಿದ್ದಾರೆ. 'ಆಕೆಯನ್ನು ಸಂಪೂರ್ಣವಾಗಿ ನಂಬಿದ್ದೇನೆ. ಆಕೆ ತನಗಾಗಿ ಯಾವ ಆಯ್ಕೆ ಮಾಡಿಕೊಂಡಾಗಲೂ ನಮಗೆ ಆ ನಿರ್ಧಾರ ಒಪ್ಪಿಗೆಯಾಗಿದೆ. ನಾವು ಆಕೆಯನ್ನು ಬೆಂಬಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

More from Filmibeat

English summary
Actress Taapsee Pannu said that her family is aware of and likes of her boyfriend, badminton player Mathias Boe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X