Taare Zameen Par ಸಿನಿಮಾದಲ್ಲಿ ಮನಗೆದ್ದಿದ್ದ ನಟ ದರ್ಶೀಲ್ ಸಫಾರಿ; 17 ವರ್ಷಗಳ ಬಳಿಕ ಹೇಗಾಗಿದ್ದಾನೆ ನೋಡಿ!
'ತಾರೆ ಜಮೀನ್ ಪರ್' ಬಾಲಿವುಡ್ ನಿರ್ಮಾಣ ಮಾಡಿದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಸ್ವತ: ಆಮಿರ್ ಖಾನ್ ನಿರ್ಮಾಣ ಮಾಡಿ, ನಿರ್ದೇಶಿಸಿದ್ದ ಈ ಸಿನಿಮಾ ಭಾರತೀಯ ಮೆಚ್ಚುಗೆಗೆ ಪಾತ್ರವಾಗಿತ್ತು. ಡಿಸ್ಲೆಕ್ಸಿಯಾ ಅನ್ನುವ ಸಮಸ್ಯೆಯಿಂದ ಬಳುತ್ತಿರುವ ಬಾಲಕನನ್ನು ಅರ್ಥ ಮಾಡಿಕೊಂಡ ಶಿಕ್ಷಕ ಹೇಗೆ ಆತನನ್ನು ಗೆಲುವಿಗೆ ಕಾರಣನಾಗುತ್ತಾನೆ ಅನ್ನೋದು ಸಿನಿಮಾ ಕಥೆ.
2007ರಲ್ಲಿ ತೆರೆಕಂಡಿದ್ದ 'ತಾರೆ ಜಮೀನ್ ಪರ್' ಸಿನಿಮಾ ತೆರೆಕಂಡಿತ್ತು. ಡಿಸ್ಲೆಕ್ಸಿಯಾ (Word Blindness) ಸಮಸ್ಯೆಯಿಂದ ಬಳಲುತ್ತಿದ್ದ ಇಶಾನ್ ಅವಸ್ಥಿ ಪಾತ್ರದಲ್ಲಿ ದರ್ಶೀಲ್ ಸಫಾರಿ ಕಾಣಿಸಿದ್ದರು. ಅಮೋಲ್ ಗುಪ್ತೆ ಬರೆದ ಕಥೆಯನ್ನು ಇಷ್ಟ ಪಟ್ಟು ಆಮಿರ್ ಖಾನ್ ನಿರ್ಮಾಣಕ್ಕೆ ಮುಂದಾಗಿದ್ದರು. ಅವರೇ ಸಿನಿಮಾಗೆ ಆಕ್ಷನ್ ಕಟ್ ಕೂಡ ಹೇಳಿದ್ದರು. ಈ ಸಿನಿಮಾವನ್ನು 81ನೇ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಕಳುಹಿಸಿಕೊಡಲಾಗಿತ್ತು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ಸಾಧ್ಯವಾಗಿಲ್ಲ.

'ತಾರೆ ಜಮೀನ್ ಪರ್' ಸಿನಿಮಾ ಬಳಿಕ ದರ್ಶೀಲ್ ಸಫಾರಿ ಫೇವರಿಟ್ ನಟನಾಗಿದ್ದ. ಪೋಷಕರು ಮಕ್ಕಳ ಓದಿನ ಮೇಲೆ ಒತ್ತಡ ಹೇರುವುದಕ್ಕೂ ಮುನ್ನ ಅವರಿಗಿರೋ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಬೇಕು ಎಂಬ ಮನೋಭಾವ ಬೆಳೆಸಿ ಸಿನಿಮಾವಿದು. ಹೀಗಾಗಿ ದರ್ಶೀಲ್ ಸಫಾರಿ ಭಾರತೀಯರ ಅಚ್ಚು ಮೆಚ್ಚಿನ ನಟನಾಗಿದ್ದ. ಆದರೆ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರೂ, ದರ್ಶೀಲ್ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಈಗ 17 ವರ್ಷಗಳ ಬಳಿಕ ಅದೇ 'ತಾರೆ ಜಮೀನ್ ಪರ್' ಸಿನಿಮಾ ನಟನನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ, ಫೋಟೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದರ್ಶೀಲ್ ಸಫಾರಿ ಹೀರೋ ಆಗಿಬಿಟ್ಟಿದ್ದಾನೆ ಅಂತ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಇತ್ತೀಚೆಗೆ ಆಮಿರ್ ಖಾನ್ ಪುತ್ರಿ ಐರಾ ಖಾನ್ ಮದುವೆ ಸಮಾರಂಭ ನಡೆದಿತ್ತು. ಆ ಬಳಿಕ ದಂಪತಿಗಳು ಮುಂಬೈನಲ್ಲಿ ಸೆಲೆಬ್ರೆಟಿಗಳಿಗಾಗಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ವೇಳೆ ಬಾಲಿವುಡ್‌ನ ತಾರೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ವೇಳೆ ದರ್ಶೀಲ್ ಸಫಾರಿ ಕೂಡ ಕಾಣಿಸಿಕೊಂಡಿದ್ದಾರೆ. ಸೂಟು, ಬೂಟ್‌ನಲ್ಲಿ 'ತಾರೆ ಜಮೀನ್ ಪರ್' ನಟನನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದರ್ಶೀಲ್ ಸಫಾರಿ 'ತಾರೆ ಜಮೀನ್ ಪರ್' ತೆರೆಕಂಡ 17 ವರ್ಷಗಳ ಬಳಿಕ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ನಟನನ್ನು ನೋಡಿ ವಯಸ್ಸಿನ ಬಗ್ಗೆ ನೆಟ್ಟಿಗರು ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ. 17 ವರ್ಷಗಳ ಬಳಿಕ ದರ್ಶೀಲ್ ಸಫಾರಿ 26 ವರ್ಷದ ಯುವಕನಾಗಿ ಬದಲಾಗಿದ್ದಾರೆಂದು ಕಮೆಂಟ್ ಮಾಡುತ್ತಿದ್ದಾರೆ. ಅಂದಿನ ಹಾಗೂ ಇಂದಿನ ಫೋಟೊ ಇಟ್ಟು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಆಮಿರ್ ಖಾನ್ ಪುತ್ರಿ ಐರಾ ಖಾನ್ ಆರತಕ್ಷತೆಯಲ್ಲಿ ಕಂಡ ದರ್ಶೀಲ್ ಸಫಾರಿ ನೋಡಿ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ನಾನು ನಿನ್ನನ್ನು ನೋಡಿದಾಗ, ನೀವಿನ್ನೂ ಚಿಕ್ಕವರಿದ್ರಿ" ಎಂದು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಈಗ ನೀವು ಬೆಳೆದಿದ್ದೀರಿ.. ಯಾವಾಗ ಬಾಲಿವುಡ್ ಮತ್ತೆ ಎಂಟ್ರಿ ಕೊಡುತ್ತೀರಿ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ, ಫೋಟೊ ಬಳಿಕ ದರ್ಶೀಲ್ ಸಫಾರಿ ಹೀರೊ ಆಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ.


Click it and Unblock the Notifications










