ಪಾಕ್ ಬೆಂಬಲಿಸಿದ ಟರ್ಕಿ, ಅಜರ್​ಬೈಜಾನ್​ಗೆ ಬಾಯ್‌ಕಾಟ್ ಬಿಸಿ; ಶೂಟಿಂಗ್‌ಗೆ ತೆರಳದೆ ಇರಲು ಭಾರತೀಯ ಚಿತ್ರರಂಗ ನಿರ್ಧಾರ

ಪಹಲ್ಗಾಮ್ ಉಗ್ರರ ಅಟ್ಟಹಾಸದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು. ಎರಡೂ ದೇಶಗಳು ಕಾದಕ್ಕೆ ಇಳಿದಿದ್ದವು. ಯುದ್ಧ ಸ್ಥಿತಿ ನಿರ್ಮಾಣ ಆಗಿತ್ತು. ನಿಶಕ್ತಿ ಪಾಕಿಸ್ತಾನಕ್ಕೆ ಭಾರತವನ್ನು ಎದುರಿಸುವ ತಾಕತ್ತು ಇರದೇ ಹೋದರೂ ಅಟ್ಟಾಹಾಸವನ್ನು ಮೆರೆಯುತ್ತಿತ್ತು. ಇಂತಹ ಅಸಹಾಯಕ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಎರಡು ದೇಶಗಳು ಬೆಂಬಲವನ್ನು ಸೂಚಿಸಿದ್ದವು. ಈಗ ಆ ಎರಡು ದೇಶಗಳ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದುವೇ ಟರ್ಕಿ ಹಾಗೂ ಅಜರ್‌ಬೈಜಾನ್.

ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಗೊತ್ತಿದೆ. ಇದರ ವಿರುದ್ಧ ಭಾರತ ಹೋರಾಟಕ್ಕೆ ನಿಂತಿರುವಾಗ ಈ ಎರಡೂ ದೇಶಗಳು ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸಿದ್ದವು. ಟರ್ಕಿ ಸಂಕಷ್ಟದಲ್ಲಿ ಇದ್ದಾಗ, ಭಾರತ ನೆರವು ನೀಡಿದ್ದನ್ನು ಮರೆತು ಸಹಾಯಕ್ಕೆ ಮುಂದಾಗಿದೆ. ಈ ಕಾರಣಕ್ಕೆ ಭಾರತೀಯರ ಈ ದೇಶಗಳ ವಿರುದ್ಧ ಮುನಿಸಿಕೊಂಡಿದ್ದಾರೆ.

The Federation of Western India Cine Employees decided to boycott shooting in Turkey and Azerbaijan

ಅದರಲ್ಲೂ ಭಾರತೀಯ ಚಿತ್ರರಂಗ ಟರ್ಕಿ ಹಾಗೂ ಅಜರ್‌ಬೈಜಾನ್ ಎರಡೂ ದೇಶಗಳ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿತ್ತು. ಸಾಕಷ್ಟು ಸಿನಿಮಾಗಳು ಇಲ್ಲಿ ಶೂಟಿಂಗ್ ಆಗಿವೆ. ಆದರೆ, ಪಾಕಿಸ್ತಾನಕ್ಕೆ ಟರ್ಕಿ ಮತ್ತು ಅಜರ್‌ಬೈಜಾನ್ ಬೆಂಬಲ ನೀಡಿದ ಕ್ಷಣದಿಂದ ಈ ಎರಡು ದೇಶಗಳಿಗೆ ಟಕ್ಕರ್ ಕೊಡುವುದಕ್ಕೆ ಭಾರತೀಯ ಚಿತ್ರರಂಗ ನಿರ್ಧರಿಸಿದೆ.

ಟರ್ಕಿ ಹಾಗೂ ಅಜರ್‌ಬೈಜಾನ್‌ಗೆ ಭಾರತ ರಫ್ತು ಮಾಡುವುದಕ್ಕಿಂತ ಆಮದು ಮಾಡಿಕೊಳ್ಳುವುದೇ ಹೆಚ್ಚು. ಒಂದು ವೇಳೆ ಭಾರತ ಏನಾದರೂ, ವ್ಯಾಪಾರ ವಹಿವಾಟಿನಲ್ಲಿ ಹಿಂದೇಟು ಹಾಕಿದರೆ, ಈ ಎರಡು ದೇಶಗಳಿಗೆ ಪೆಟ್ಟು ಬೀಳುವುದು ಗ್ಯಾರಂಟಿ. ಇನ್ನೊಂದು ಕಡೆ ಈ ಎರಡೂ ದೇಶಗಳ ಆದಾಯ ಟೂರಿಸಂ ಮೇಲೂ ನಿಂತಿದೆ. ಟೈಮ್‌ ಆಫ್‌ ಇಂಡಿಯಾ ವರದಿ ಪ್ರಕಾರ, 2023ರಲ್ಲಿ ಟರ್ಕಿಗೆ 3 ಲಕ್ಷ ಮಂದಿ ಭಾರತೀಯರು ಟ್ರಾವೆಲ್ ಮಾಡಿದ್ದರು. ಅದೇ ಅಜರ್‌ಬೈಜಾನ್‌ಗೆ 2 ಲಕ್ಷ ಮಂದಿ ಪ್ರವಾಸ ಕೈಗೊಂಡಿದ್ದರು.

ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಬಳಿಕ ಟ್ರಾವೆಲಿಂಗ್ ಆಪ್‌ಗಳು ಟರ್ಕಿ ಹಾಗೂ ಅಜರ್‌ಬೈಜಾನ್‌ಗೆ ಟ್ರಾವೆಲ್ ಮಾಡುವುದನ್ನು ಕೈ ಬಿಡುವುದು ಒಳ್ಳೆಯದೆಂದು ಸೂಚನೆಯನ್ನು ನೀಡುತ್ತಿದೆ. ಹೀಗಾಗಿ ಈ ಬಾರಿ ಈ ಎರಡು ದೇಶಗಳಿಗೆ ಟೂರಿಸಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಈಗಾಗಲೇ ಶೇ.60ರಷ್ಟು ಮಂದಿ ಈ ಎರಡು ದೇಶಗಳಿಗೆ ಪ್ರಯಾಣ ಮಾಡುವನ್ನು ಕ್ಯಾನ್ಸಲ್ ಮಾಡಿಕೊಂಡಿರುವ ಬಗ್ಗೆ ಮೇಕ್ ಮೈ ಟ್ರಿಪ್ ಮಾಹಿತಿ ನೀಡಿದ್ದಾಗಿ ಎಕಾಮಿಕ್ ಟೈಮ್ಸ್ ವರದಿಯಲ್ಲಿ ಹೇಳಿಕೊಂಡಿದೆ.

ಇದೇ ಬೆನ್ನಲ್ಲೇ 'ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್' (FWICE)ಕೂಡ ಟರ್ಕಿ ಹಾಗೂ ಅಜರ್‌ಬೈಜಾನ್ ಅನ್ನು ಬಹಿಷ್ಕರಿಸುವುದಕ್ಕೆ ನಿರ್ಧರಿಸಿದೆ. ಇದರ ಅಡಿ ಸುಮಾರು 32 ಅಂಗ ಸಂಸ್ಥೆಗಳು ಬರಲಿವೆ. ಇವೆಲ್ಲವೂ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದ್ದು, ಭಾರತೀಯ ಚಿತ್ರರಂಗದ ನಿರ್ಮಾಪಕರಿಗೆ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ. ಟರ್ಕಿ, ಅಜರ್‌ಬೈಜಾನ್‌ ಎರಡರಲ್ಲೂ ಸಿನಿಮಾ ಶೂಟಿಂಗ್ ಮಾಡುವುದು ಬೇಡವೆಂದು ಮನವಿ ಮಾಡಿಕೊಂಡಿದ್ದಾರೆ.

ಉದ್ಯಮಿ ಹರ್ಷ್ ಗೊಯೆಂಕಾ ಕೂಡ ಈ ಎರಡು ದೇಶಗಳಿಗೆ ಟ್ರಾವೆಲ್ ಮಾಡುವುದನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. 20024ರಲ್ಲಿ ಭಾರತದ ಪ್ರವಾಸಿಗರಿಂದ ಈ ಎರಡು ದೇಶಗಳಿಗೆ 4 ಸಾವಿರ ಕೋಟಿ ಆದಾಯ ಬಂದಿದೆ. ಇದರಿಂದ ಅಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಹೋಟೆಲ್, ಮದುವೆ, ಪ್ಲೈಟ್‌ಗಳ ಬಳಕೆ ಹೆಚ್ಚಾಗಿದೆ. ಭಾರತದಲ್ಲಿಯೇ ಅತೀ ಸುಂದರವಾದ ಪ್ರದೇಶಗಳು ಇವೆ. ದಯವಿಟ್ಟು ಈ ಎರಡು ದೇಶಗಳಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಿ ಎಂದು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದರು. ಈಗ ಸಿನಿಮಾ ಮಂದಿಗೂ ಈ ಎರಡು ದೇಶಗಳನ್ನು ಬಾಯ್‌ಕಾಟ್‌ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

More from Filmibeat

English summary
The Federation of Western India Cine Employees decided to boycott shooting in Turkey and Azerbaijan.
Read more about: boycott movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X