ಕಿಂಗ್, ಬಾದ್‌ಷಾ, ಸುಲ್ತಾನ್ ಇರೋವರೆಗೂ ಹಿಂದಿ ಚಿತ್ರರಂಗ ಮುಳುಗುತ್ತಲೇ ಇರುತ್ತೆ!

ಬಾಲಿವುಡ್‌ ಈಗ ಹಿಂದಿನಂತೆ ಇಲ್ಲ. ಕೊರೊನಾ ಬಳಿಕವಂತೂ ಹಿಂದಿ ಚಿತ್ರರಂಗ ನಷ್ಟದಲ್ಲಿ ನಡೆಯುತ್ತಿದೆ. ಹಲವು ಸಿನಿಮಾಗಳು ಸೋತಿವೆ. ಮತ್ತೆ ಕೆಲವು ಸಿನಿಮಾಗಳು ಗೆದ್ದಿವೆ. ಕಳೆದ 6 ತಿಂಗಳಿಂದ ಬಾಲಿವುಡ್ ಸಿನಿಮಾಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ.

ಕೋವಿಡ್ 19 ಬಳಿಕ ಬಾಲಿವುಡ್ ಚಿತ್ರರಂಗ ಸಂಪೂರ್ಣ ಬದಲಾಗಿದೆ. ಸಿನಿಪ್ರಿಯರ ಆಸಕ್ತಿನೂ ಬದಲಾಗಿದೆ. ಲವ್‌ಸ್ಟೋರಿ, ಕಾಮಿಡಿ ಸಿನಿಮಾಗಳ ಜೊತೆ ಜೊತೆಗೆ ಮಾಸ್ ಆಕ್ಷನ್ ಸಿನಿಮಾಗಳು, ನೈಜ ಘಟನೆಗಳನ್ನು ಆಧರಿಸಿದ ಸಿನಿಮಾಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಹಾಗಂತ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಬೆಲೆ ಕಡಿಮೆ ಆಗಿದೆಯೇ? ಇಂತಹದ್ದೊ ಪ್ರಶ್ನೆ ಹುಟ್ಟಾಕುತ್ತಿರೋದು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ಈ ಹೇಳಿಕೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸೂಪರ್‌ಸ್ಟಾರ್‌ಗಳ ವಿರುದ್ಧ ಹೇಳಿಕೆ ನೀಡಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕನ ಈ ಹೇಳಿಕೆ ಈಗ ಎಲ್ಲೆಡೆ ಸಂಚಲನವನ್ನು ಸೃಷ್ಟಿಸಿದೆ. ಅಷ್ಟಕ್ಕೂ ವಿವೇಕ್ ಅಗ್ನಿಹೋತ್ರಿ ಒಂದು ಟ್ವೀಟ್ ಎಲ್ಲೆಡೆ ಹಲ್‌ಚಲ್ ಎಬ್ಬಿಸಿದೆ.

ಶಾರುಖ್, ಸಲ್ಮಾನ್ ವಿರುದ್ಧ ಟ್ವೀಟ್

ಶಾರುಖ್, ಸಲ್ಮಾನ್ ವಿರುದ್ಧ ಟ್ವೀಟ್

ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಬಾಲಿವುಡ್‌ ಸೂಪರ್‌ಸ್ಟಾರ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಅದೂ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ವಿರುದ್ಧ ಮಾಡಿದ ಟ್ವೀಟ್‌ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇಬ್ಬರು ಸೂಪರ್‌ಸ್ಟಾರ್‌ಗಳಿಂದ ಬಾಲಿವುಡ್ ಮುಳುಗುತ್ತಿದೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಮತ್ತೆ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ವಿವೇಕ್ ಅಗ್ನಿಹೋತ್ರಿ ಟ್ವೀಟ್‌ನಲ್ಲಿ ಏನಿದೆ? ಈ ಹೇಳಿಕೆ ನೀಡಿದ್ದೇಕೆ? ಎಂದು ತಿಳಿಯಲು ಮುಂದೆ ಓದಿ.

ಹಿಂದಿ ಮುಳುತ್ತಲೇ ಇರುತ್ತೆ!

"ಎಲ್ಲಿವರೆಗೂ ಕಿಂಗ್, ಬಾದ್‌ಷಾ ಹಾಗೂ ಸುಲ್ತಾನ್ ಬಾಲಿವುಡ್‌ನಲ್ಲಿ ಇರುತ್ತಾರೋ, ಅಲ್ಲಿವರೆಗೂ ಹಿಂದಿ ಚಿತ್ರರಂಗ ಮುಳುಗುತ್ತಲೇ ಇರುತ್ತೆ. ಸಾಮಾನ್ಯರ ಕಥೆಗಳಿಂದ ಇದು ಸಾಮಾನ್ಯ ಜನರ ಚಿತ್ರರಂಗ ಎಂದು ಅರಿವು ಮೂಡಿಸುತ್ತಿರೋ ಆವಾಗಲೇ ಇದು ವಿಶ್ವವನ್ನು ಆಳಬಲ್ಲದು." ಎಂದು ವಿವೇಕ್ ಅಗ್ನಿ ಹೋತ್ರಿ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಬಗ್ಗೆ ಈಗ ದೇಶಾದ್ಯಂತ ಮತ್ತೆ ಚರ್ಚೆಯಾಗುತ್ತಿದೆ.

ವಿವೇಕ್ ಅಗ್ನಿಹೋತ್ರಿಯಿಂದ ಖಾನ್‌ಗಳು ಟಾರ್ಗೆಟ್?

ವಿವೇಕ್ ಅಗ್ನಿಹೋತ್ರಿಯಿಂದ ಖಾನ್‌ಗಳು ಟಾರ್ಗೆಟ್?

ಶಾರುಖ್ ಖಾನ್ ಬಗ್ಗೆ ಮಾಧ್ಯಮವೊಂದು ವರದಿ ಮಾಡಿತ್ತು. ಶಾರುಖ್ ಖಾನ್ ಇನ್ನೂ ಬಾಲಿವುಡ್‌ನ ಕಿಂಗ್ ಖಾನ್ ಯಾಕೆ? ಎಂದು ವರದಿಯಲ್ಲಿ ಹೇಳಲಾಗಿತ್ತು. ಲಿಂಕ್ ಅನ್ನು ಟ್ವೀಟ್ ಮಾಡಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಕೆಲವರಿಗೆ ಸರಿ ಎನಿಸಿದ್ದರೂ, ಮತ್ತೆ ಕೆಲವರಿಗೆ ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ವಿವೇಕ್ ಅಗ್ನಿಹೋತ್ರಿ ಬಾಲಿವುಡ್‌ ಸೂಪರ್‌ಸ್ಟಾರ್‌ಗಳ ವಿರೋಧಿ ಎಂದೂ ಕಮೆಂಟ್ ಮಾಡಲಾಗುತ್ತಿದೆ.

More from Filmibeat

English summary
The Kashmir Files Director Vivek Agnihotri Targets Shah Rukh Khan And Salman Khan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X