'ದಿ ಕೇರಳ ಸ್ಟೋರಿ' ಮುಂದೆ ಅಕ್ಷಯ್ ಕುಮಾರ್ ಸಿನಿಮಾನೂ ಲೆಕ್ಕಕ್ಕಿಲ್ಲ: 2 ದಿನಗಳಲ್ಲಿ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ತೀವ್ರ ವಿರೋಧದ ನಡುವೆಯೂ 'ದಿ ಕೇರಳ ಸ್ಟೋರಿ' ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಟ್ಟಿತ್ತು. ಸಿನಿಮಾ ಕಥೆಯಲ್ಲಿರೋ ಸತ್ಯಾಂಶದ ಬಗ್ಗೆ ಪ್ರಶ್ನೆ ಎದ್ದಿದ್ದರೂ, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನವೇ ಬಾಲಿವುಡ್ ದಿಗ್ಗಜರನ್ನು ಹಿಂದಿಕ್ಕಿದೆ.
'ದಿ ಕೇರಳ ಸ್ಟೋರಿ' ಮೊದಲ ದಿನವೇ ಸೂಪರ್ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಕೆಲೆಕ್ಷನ್ ಡ್ರಾಪ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಸಿನಿಮಾ ಮಂದಿಯ ಲೆಕ್ಕಾಚಾರ ತಲೆಕೆಳಗಾಗಿದೆ.

ಕೇರಳದ ಸ್ಟೋರಿಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿದೆ. ಇಂದು (ಮೇ 7) ಕೂಡ ಕಲೆಕ್ಷನ್ ಕಳೆದೆರಡು ದಿನಗಳಿಗಿಂತ ಅದ್ಭುತವಾಗಿದೆ ಎನ್ನುತ್ತಿವೆ ಟ್ರೇಡ್ ಎಕ್ಸ್‌ಪರ್ಟ್ಸ್.
'ದಿ ಕೇರಳ ಸ್ಟೋರಿ' 2ನೇ ದಿನದ ಕಲೆಕ್ಷನ್ ಎಷ್ಟು?
32 ಸಾವಿರ ಮಹಿಳೆಯರು ಕೇರಳದಲ್ಲಿ ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅಲ್ಲದೆ ಐಸಿಸ್‌ಗೆ ಭರ್ತಿ ಮಾಡಲಾಗಿದೆ ಎಂದು ಸಿನಿಮಾ ಟೀಮ್ ಆರೋಪ ಮಾಡಿತ್ತು. ತೀವ್ರ ವಿರೋಧದ ಬಳಿಕ ಚಿತ್ರತಂಡ 32 ಸಾವಿರದಿಂದ ಮೂವರು ಹುಡುಗಿಯರ ಕಥೆ ಎಂದು ಬದಲಾಯಿಸಿಕೊಂಡಿದ್ದರು. ಅದೆಷ್ಟೇ ವಿರೋಧ ವ್ಯಕ್ತವಾಗಿದ್ದರೂ 'ದಿ ಕೇರಳ ಸ್ಟೋರಿ' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ.
ಭಾರತದಾದ್ಯಂತ 'ದಿ ಕೇರಳ ಸ್ಟೋರಿ'ಗೆ ರೆಸ್ಪಾನ್ಸ್ ಚೆನ್ನಾಗಿದೆ. ಮೊದಲ ದಿನ ಭಾರತದಾದ್ಯಂತ ಈ ಸಿನಿಮಾ 8.03 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಾಗೇ ಎರಡನೇ ದಿನ ಶೇ. 55ರಷ್ಟು ಏರಿಕೆ ಕಂಡಿದ್ದು, 12.50 ಕೋಟಿ ರೂ. ಕಲೆಕ್ಷನ್ ಆಗಿದೆ ಎಂಟ್ರಿ ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಒಟ್ಟು ಎರಡು ದಿನಗಳಲ್ಲಿ 20.53 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು?
'ದಿ ಕೇರಳ ಸ್ಟೋರಿ'ಗೆ ಕರ್ನಾಟಕದಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳು ಸೇರಿದಂತೆ ಸುಮಾರು 81 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಮೊದಲೆರಡು ದಿನ ಈ ಸಿನಿಮಾದ ಕಲೆಕ್ಷನ್ 1.49 ಕೋಟಿ ರೂ. ಎಂದು ಎನ್ನಲಾಗಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ದಿ ಕೇರಳ ಸ್ಟೋರಿ' ಕರ್ನಾಟಕದಲ್ಲಿಯೂ ಅದ್ಭುತ ಕಲೆಕ್ಷನ್ ಮಾಡಿದೆ. ಮೂರನೇ ದಿನ (ಮೇ 7) ಕೂಡ ಕಲೆಕ್ಷನ್ ಜೋರಾಗಿಯೇ ಇದೆ. ಮೊದಲ ದಿನ ಕರ್ನಾಟಕದಲ್ಲಿ 323 ಶೋ ಕಂಡಿದ್ರೆ, ಎರಡನೇ ದಿನ 487 ಶೋ ಹಾಗೂ ಮೂರನೇ ದಿನ ಅಂದಾಜು 600 ಶೋ ದಾಟುವ ಸಾಧ್ಯೆತೆ ಇದೆ. ಕರ್ನಾಟಕದ ಕಲೆಕ್ಷನ್ ರಿಪೋರ್ಟ್ ಹೀಗಿದೆ.
ಕರ್ನಾಟಕದಲ್ಲಿ 'ದಿ ಕೇರಳ ಸ್ಟೋರಿ'
ಮೊದಲ ದಿನ ₹51 ಲಕ್ಷ (ಅಂದಾಜು)
ಎರಡನೇ ದಿನ ₹98 ಲಕ್ಷ (ಅಂದಾಜು)
ಒಟ್ಟು ₹1.49 ಕೋಟಿ (ಅಂದಾಜು)
ಮೂರನೇ ದಿನ ₹1.25 ಕೋಟಿ (ಅಂದಾಜು)
ಒಟ್ಟು ₹2.74 ಕೋಟಿ (ಅಂದಾಜು)
'ದಿ ಕಾಶ್ಮೀರ್ ಫೈಲ್ಸ್' ಫಾರ್ಮೂಲ ಸಕ್ಸಸ್
'ದಿ ಕೇರಳ ಸ್ಟೋರಿ' ರಿಲೀಸ್ ಪಾಸಿಟಿವಿ ವಿಮರ್ಶೆ ಹೆಚ್ಚಿದೆ. ಹೀಗಾಗಿ ಕಲೆಕ್ಷನ್ ಕೂಡ ಅದ್ಭುತವಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್, ಸ್ಟಾರ್ ನಟ ಕಾರ್ತಿಕ್ ಆರ್ಯನ್ ಅಂತಹ ನಟರ ಸಿನಿಮಾಗಳನ್ನೂ ಮೀರಿಸಿದೆ. ಸ್ಟಾರ್‌ಗಳೇ ಇಲ್ಲದ ಸಿನಿಮಾ ಈ ಮಟ್ಟಿಗೆ ಸಕ್ಸಸ್ ಆಗಿದ್ದಕ್ಕೆ ಕಾರಣ 'ದಿ ಕಾಶ್ಮೀರ್ ಫೈಲ್ಸ್' ಎನ್ನಲಾಗಿದೆ.
ಬಾಲಿವುಡ್‌ನ ಮತ್ತೊಂದು ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಕೂಡ ಹೀಗೆ ವಿವಾದವನ್ನು ಸೃಷ್ಟಿಸಿತ್ತು. ಇದು ಬಾಕ್ಸಾಫೀಸ್‌ನಲ್ಲಿ 450 ಕೋಟಿ ರೂ. ಅಧಿಕ ಗಳಿಕೆ ಕಂಡು ಅಚ್ಚರಿಗೆ ಕಾರಣವಾಗಿತ್ತು. ಈಗ 'ದಿ ಕೇರಳ ಸ್ಟೋರಿ' ಅವರದ್ದೇ ಫಾರ್ಮೂಲ ಇಟ್ಟುಕೊಂಡು ಸಕ್ಸಸ್ ಕಂಡಿದ್ದಾರೆಂಬುದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.


Click it and Unblock the Notifications











