'ದಿ ಕೇರಳ ಸ್ಟೋರಿ' ನಟಿಗೆ ಆನ್‌ಲೈನ್‌ನಲ್ಲಿ ಬೆದರಿಕೆ: ಆದಾ ಶರ್ಮಾ ವೈಯಕ್ತಿಕ ಮಾಹಿತಿ ಲೀಕ್
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ'ಗೆ ದೇಶಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ದೇಶದಸ ಹಲವೆಡೆ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲದೆ ಬಾಕ್ಸಾಫೀಸ್‌ನಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ.
'ದಿ ಕೇರಳ ಸ್ಟೋರಿ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ವಿವಾದಾತ್ಮಕ ಸಿನಿಮಾದ ನಟಿ ಅದಾ ಶರ್ಮಾಗೆ ಆನ್‌ಲೈನ್‌ನಲ್ಲಿ ಬೆದರಿಕೆ ಬಂದಿದೆ. ಆನ್‌ಲೈನ್‌ನಲ್ಲಿ ಹ್ಯಾಕರ್ ಒಬ್ಬ ಈ ನಟಿಯ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡಿದ್ದಾನೆ.

ಈ ಸಿನಿಮಾ ದೇಶಾದ್ಯಂತ ಸದ್ದು ಮಾಡೋಕೆ ಶುರು ಮಾಡಿದ ದಿನದಿಂದ ನಟಿಗೆ ಒಂದಲ್ಲ ಒಂದು ರೀತಿ ಬೆದರಿಕೆಯೊಡ್ಡಲಾಗುತ್ತಿದೆ. ಬಿಡುಗಡೆಗೂ ಮುನ್ನ ಕೇರಳದಲ್ಲಿ 32 ಸಾವಿರ ಮಹಿಳೆಯರು ಕಾಣೆಯಾದ ಕಥೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅಲ್ಲಿಂದ ಸಿನಿಮಾ ವಿರುದ್ಧ ಕೆಲವೆಡೆ ವಿರೋಧ ವ್ಯಕ್ತವಾಗಿದೆ.
ಫೋನ್ ನಂ ಲೀಕ್ ಮಾಡುವ ಬೆದರಿಕೆ
ಇನ್‌ಸ್ಟಾಗ್ರಾಂನಲ್ಲಿ 'ಜುಮುಂಡ ಬೊಲ್ಟೆ' (jhamunda_bolte) ಖಾತೆಯ ಬಳಕೆದಾರ, ಅದಾ ಶರ್ಮಾಳ ವೈಯಕ್ತಿಕ ಫೋನ್ ನಂಬರ್ ಅನ್ನು ಲೀಕ್ ಮಾಡಿದ್ದಾನೆ. ಇಷ್ಟೇ ಅಲ್ಲದೆ ನಟಿಯ ಹೊಸ ಫೋನ್ ನಂಬರ್ ಅನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇ ಟೈಮ್ಸ್ ವರದಿ ಮಾಡಿದೆ.
ಇನ್‌ಸ್ಟಾಗ್ರಾಂನಲ್ಲಿ ಬೆದರಿಕೆ ಕರೆ ಬಂದಲ್ಲಿಂದ ಆ ಖಾತೆಯನ್ನು ತೆಗೆದುಹಾಕಲಾಗಿದೆ. ಅದಾ ಶರ್ಮಾ ಅಭಿಮಾನಿಗಳು ಮುಂಬೈನ ಸೈಬರ್ ಸೆಲ್‌ಗೆ ದೂರು ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಅದಾ ಶರ್ಮಾ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.
200 ಕೋಟಿ ದಾಟಿದ 'ದಿ ಕೇರಳ ಸ್ಟೋರಿ'
'ದಿ ಕೇರಳ ಸ್ಟೋರಿ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಈ ಸಿನಿಮಾ ಹೆಚ್ಚು ಸೆಂಟರ್‌ಗಳಲ್ಲಿ ರಿಲೀಸ್ ಆಗಿಲ್ಲ. ಹೀಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಸುಮಾರು 200 ಕೋಟಿ ರೂ. ಅಧಿಕ ಮೊತ್ತ ಕಲೆಹಾಕಿದೆ.
ಈ ಸಿನಿಮಾಗೆ ಹಲವೆಡೆ ವಿರೋಧ ವ್ಯಕ್ತವಾಗಿದ್ದರೂ, ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 'ದಿ ಕೇರಳ ಸ್ಟೋರಿ' ಬಿಡುಗಡೆಯಾದ ತಿಂಗಳೊಳಗೆ 200 ಕೋಟಿ ರೂ. ಕ್ಲಬ್ ಸೇರಿದೆ. ಇದು 200 ಕೋಟಿ ದಾಟಿದ ಮೊದಲ ಫೀಮೇಲ್ ಲೀಡ್ ಸಿನಿಮಾ ಎನಿಸಿಕೊಂಡಿದೆ. ಸ್ವತ: ಅದಾ ಶರ್ಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಜೊತೆ ತಮಿಳುನಾಡು, ಪಶ್ಚಿಮ ಬಂಗಾಳವನ್ನು ಹೊರತು ಪಡಿಸಿ ಎಂದು ಬರೆದುಕೊಂಡಿದ್ದಾರೆ.
ಬೆಂಬಲಿಸಿದವರಿಗೆ ಧನ್ಯವಾದ ಎಂದ ಅದಾ ಶರ್ಮಾ
ದೇಶಾದ್ಯಂತ 'ದಿ ಕೇರಳ ಸ್ಟೋರಿ'ಯನ್ನು ಬೆಂಬಲಿಸಿದ್ದಕ್ಕೆ ಅದಾ ಶರ್ಮಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. " ಅನಿರೀಕ್ಷಿತವೇ ಜೀವನದ ಬೆಸ್ಟ್ ಪಾರ್ಟ್. ಯಾಕಂದ್ರೆ, ಅಲ್ಲಿ ಏನೂ ನಿರೀಕ್ಷೆಯಿರಲಿಲ್ಲ. ಪ್ರೇಕ್ಷಕರಿಗೆ ಧನ್ಯವಾದ ಎಂದು ಹೇಳಿದ್ದರು." ಎಂದು ಪೋಸ್ಟ್ ಮಾಡಿದ್ದರು.
"ದಿ ಕೇರಳ ಸ್ಟೋರಿ ನಿರ್ಮಾಪಕ ವಿಪುಲ್ ಸರ್ ಈ ಸಿನಿಮಾ ಮಾಡುವುದಕ್ಕೆ ತುಂಬಾ ರಿಸ್ಕ್ ತೆಗೆದುಕೊಂಡಿದ್ದಾರೆ. ಕಮಾಂಡೋದಲ್ಲಿ ಭಾವನಾ ರೆಡ್ಡಿಯಾಗಿದ್ದ ಹುಡುಕಿ ಮೇಲೆ ನಂಬಿಕೆ ಇಟ್ಟು ಶಾಲಿನಿ ಉನ್ನಿಕೃಷ್ಣನ್ ಪಾತ್ರ ನೀಡಿದ್ದರು." ಎಂದು ಅದಾ ಶರ್ಮಾ ಹೇಳಿಕೊಂಡಿದ್ದಾರೆ.


Click it and Unblock the Notifications











