'ಐಶ್ವರ್ಯ ರೈ ಬಚ್ಚನ್' ಹೆಸರು ಕೇಳಿದ ಕೂಡಲೆ ಸಲ್ಮಾನ್ ಮುಖ ಹೇಗಾಯ್ತು ಗೊತ್ತಾ.?

By Harshitha

ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಹಿಂದಿ ಕಿರುತೆರೆಯಲ್ಲಿ 'ದಸ್ ಕಾ ಧಮ್' ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಕಾರ್ಯಕ್ರಮದಲ್ಲಿ ನಟ ಅನಿಲ್ ಕಪೂರ್ ಭಾಗವಹಿಸಿದ್ದಾರೆ.

'ಫಾನ್ನೇ ಖಾನ್' ಚಿತ್ರದ ಪ್ರಚಾರ ಸಲುವಾಗಿ ಅನಿಲ್ ಕಪೂರ್ ಹಾಗೂ Pihu Sand 'ದಸ್ ಕಾ ಧಮ್' ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡುತ್ತಾ ಅನಿಲ್ ಕಪೂರ್ ಬಾಯಿಂದ 'ಐಶ್ವರ್ಯ ರೈ' ಹೆಸರು ಬಂತು.!

ಆಗ, ಕಾರ್ಯಕ್ರಮ ನೋಡಲು ನೆರೆದಿದ್ದ ಜನರು 'ಓ..' ಎಂದು ಕೂಗಲು ಆರಂಭಿಸಿದರು. ಬಳಿಕ 'ಐಶ್ವರ್ಯ ರೈ ಬಚ್ಚನ್' ಎಂದು ಅನಿಲ್ ಕಪೂರ್ ಒತ್ತಿ ಹೇಳಿದರು. ಆಗ ಸಲ್ಮಾನ್ ಖಾನ್ ಮುಖ ಹೇಗಾಯ್ತು ಗೊತ್ತಾ.? ಅದನ್ನ ನಾವು ಹೇಳಲ್ಲ. ನೀವೇ ನೋಡಿ ಈ ವಿಡಿಯೋದಲ್ಲಿ....

ಅಸಲಿಗೆ, 'ಫಾನ್ನೇ ಖಾನ್' ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಗೆ ಐಶ್ವರ್ಯ ರೈ ಬಚ್ಚನ್ ಕೂಡ ನಟಿಸಿದ್ದಾರೆ. ಹೀಗಾಗಿ, ಐಶ್ವರ್ಯ ಪಾತ್ರದ ಬಗ್ಗೆ ಮಾತನಾಡುವಾಗ ಅನಿಲ್ ಕಪೂರ್ ಆಕೆಯ ಹೆಸರನ್ನು ಪ್ರಸ್ತಾಪಿಸಿದರು.

This is how Salman Khan reacted when Anil Kapoor mentioned Aishwaryas name

ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ರವರ ಲವ್ ಹಿಸ್ಟ್ರಿ ಎಲ್ಲರಿಗೂ ಗೊತ್ತಿರೋದೇ. ಸಲ್ಮಾನ್ ಖಾನ್ ಜೊತೆಗೆ ಬ್ರೇಕಪ್ ಆದ್ಮೇಲೆ, ವಿವೇಕ್ ಒಬೆರಾಯ್ ರನ್ನ ಡೇಟ್ ಮಾಡಿ, ಕಡೆಗೆ ಅವರನ್ನೂ ಬಿಟ್ಟು ಅಭಿಶೇಕ್ ಬಚ್ಚನ್ ರನ್ನ ಐಶ್ವರ್ಯ ರೈ ಕೈಹಿಡಿದರು. ಆದ್ರೆ, ಸಲ್ಮಾನ್ ಖಾನ್ ಮಾತ್ರ ಇನ್ನೂ ಒಂಟಿಯಾಗಿಯೇ ಇದ್ದಾರೆ.

ಅಂದ್ಹಾಗೆ, 'ದಸ್ ಕಾ ಧಮ್' ಕಾರ್ಯಕ್ರಮದಲ್ಲಿ ಅನಿಲ್ ಕಪೂರ್ ಭಾಗವಹಿಸಿರುವ ಸಂಚಿಕೆ ಇದೇ ಶನಿವಾರ ರಾತ್ರಿ ಪ್ರಸಾರ ಆಗಲಿದೆ.

More from Filmibeat

English summary
Watch video: This is how Bollywood Actor Salman Khan reacted when Anil Kapoor mentioned Aishwarya Rai Bachchan's name in 'Dus Ka Dum' show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X