ಈ ವಾರ ಸುದ್ದಿಯಲ್ಲಿದ್ದ ಟಾಪ್ ನಟ-ನಟಿಯರು ಇವರೇ; ಯಾರ್‍ಯಾರದ್ದು ಏನೇನು ಕಥೆ?
ಈ ವಾರ ಸಿನಿಮಾ ಮತ್ತು ಒಟಿಟಿ ದುನಿಯಾದಲ್ಲಿ ಸಾಕಷ್ಟು ಆಸಕ್ತಿಕರ ವಿಚಾರಗಳು ನಡೆದಿವೆ. ಮನೋಜ್ ಬಾಜಪೇಯಿ 'ಭೈಯ್ಯಾ ಜಿ' ಎನ್ನುವ ಹೊಸ ಸಿನಿಮಾದಲ್ಲಿ ನಟಿಸೋಕೆ ನಿರ್ಧರಿಸಿದರೆ, ಇತ್ತ ರಣ್ವೀರ್ ಸಿಂಗ್ ಡಿವೋರ್ಸ್ ಸುದ್ದಿಯನ್ನು ಬುಡ ಸಮೇತ ಕಿತ್ತು ಬಿಸಾಕಿದ್ದಾರೆ. ನೆಟ್ ಫ್ಲಿಕ್ಸ್‌ನ ಹೀರಾಮಂಡಿ ಸೀರೀಸ್‌ನಲ್ಲಿನ ಖಾಸಗಿ ಸೀನ್ ಒಂದರ ಬಗ್ಗೆ ಶೃತಿ ಶರ್ಮಾ ಮಾತನಾಡಿದ್ದಾರೆ.
ಇದಲ್ಲದೇ ರಾಜ್‌ಕುಮಾರ್ ರಾವ್, ಶಾರುಖ್ ಖಾನ್ ಹೇಳಿದ ಮಾತು ಕೇಳಿ ಒಂದು ಮನೆ ಕೊಂಡುಕೊಂಡಿದ್ದಾರೆ. ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ಒಟ್ಟಾಗಿ ಪಾರ್ಟಿ ಮಾಡಿದ್ದಾರೆ. ಇದರಿಂದಾಗಿ ಅವರಿಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎನ್ನುವ ಹೊಸ ರೂಮರ್ ಒಂದು ಹುಟ್ಟಿಕೊಂಡಿದೆ.

'ಪುಷ್ಪ' ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜೊತೆ ವಿಜಯ್ ದೇವರಕೊಂಡ ಹೊಸ ಆಕ್ಷನ್ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಹೊಸ ಆಕ್ಷನ್ ಡ್ರಾಮಾ 'ಸಿಕಂದರ್'ನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇದಲ್ಲದೇ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಖಾಸಗಿ ವಿಡಿಯೋ ಕುರಿತ ವಿವಾದ ಒಂದರಲ್ಲಿ ಸಿಕ್ಕಿಕೊಂಡಿದ್ದಾರೆ. ಕೊನೆಯದಾಗಿ ನೋರಾ ಫತೇಹಿಯ ಮಹಿಳಾವಾದದ ಬಗೆಗಿನ ದೃಷ್ಟಿಯನ್ನು ನಟಿ ರಿಚಾ ಚಡ್ಡಾ ಚಾಲೆಂಜ್ ಮಾಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ: ದಿ ಡೈಮಂಡ್ ಬಜಾರ್‍ನಲ್ಲಿ ತಾನು ಎದುರಿಸಿದ ಒಂದು ಕಷ್ಟಕರ ಸೀನ್ ಬಗ್ಗೆ ನಟಿ ಶೃತಿ ಶರ್ಮಾ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಪರಿಚಾರಕಿ ಸೈಮಾಳ ಪಾತ್ರ ನಿರ್ವಹಿಸಿರುವ ಶೃತಿ ಒಂದು ಖಾಸಗಿ ಸೀನ್‌ನ ಶೂಟಿಂಗ್‌ಗಾಗಿ ಒಣ ಹುಲ್ಲಿನ ಮೇಲೆ ಮಲಗಿರಬೇಕಿತ್ತಂತೆ. ಈ ಸೀನ್ ಶೂಟಿಂಗ್ ಆಗುವಾಗ ಬಹುತೇಕ ಒಂದು ಇಡೀ ದಿನ ಶೃತಿ ಒಣಹುಲ್ಲಿನ ಮೇಲೆ ಮಲಗಿದ್ದರಂತೆ. ಇದೊಂದು ಖಾಸಗಿ ಸೀನ್ ಆಗಿದ್ದರಿಂದ ಮಾನಸಿಕ ಮತ್ತು ದೈಹಿಕ ಎರಡೂ ರೀತಿಯಲ್ಲಿ ಬಹಳ ಕಷ್ಟಕರವಾಗಿತ್ತು. ಇಡೀ ದಿನ ಒಣಹುಲ್ಲಿನ ಮೇಲೆ ಮಲಗಿದ್ದರಿಂದ ಮೈಯಲ್ಲೆಲ್ಲಾ ರಾಶಸ್ ಉಂಟಾಗಿತ್ತು ಎಂದು ಶೃತಿ ಶರ್ಮಾ ವಿವರಣೆ ನೀಡಿದ್ದಾರೆ. ಆದರೆ ಕಲಾವಿದರು ಈ ಬಗೆಯ ಚಾಲೆಂಜಿಂಗ್ ಮತ್ತು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲೇ ಬೇಕಾದ ಸಂದರ್ಭಗಳು ಎದುರಾಗುತ್ತವೆ ಎನ್ನುವುದು ಇದರಿಂದ ತಿಳಿದುಬಂದಿದೆ. ಶೃತಿ ತನ್ನ ಕೆಲಸದಲ್ಲಿ ತೋರಿದ ಡೆಡಿಕೇಶನ್ ಈ ಮೂಲಕ ಗೊತ್ತಾಗಿದೆ.
ಇನ್ನು ಸ್ಟಾರ್ ಜೋಡಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಗ್ಗೆ ಸುದ್ದಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇವೆ. ಗಂಡ ಹೆಂಡತಿ ಇಬ್ಬರೂ ತಮ್ಮ ಮದುವೆಯ ಸಿನಿಮಾಗಳನ್ನು ಇನ್‌ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದೇ ಮಾಡಿದ್ದು, ಇನ್ನೇನು ಇವರಿಬ್ಬರೂ ವಿಚ್ಛೇದನಕ್ಕೆ ತಯಾರಾಗುತ್ತಿದ್ದಾರೆ. ದೀಪಿಕಾ ತಾಯಿಯಾಗುತ್ತಿರುವ ಈ ಸಂದರ್ಭದಲ್ಲಿ ಇದೇನಿದು ಆಘಾತ ಎಂದೆಲ್ಲಾ ಸುದ್ದಿಯಾಗಿತ್ತು.

ಆದರೆ, ಈ ಸುಳ್ಳು ಸುದ್ದಿ ಹಬ್ಬಿಸಿದ ಎಲ್ಲಾ ಟ್ರೋಲ್‌ಗಳ ಬಾಯಿಗೆ ಬೀಗ ಜಡಿದಿರುವ ರಣ್ವೀರ್, ಆಭರಣಗಳ ಬ್ರಾಂಡ್ ಒಂದರ ಇವೆಂಟ್‌ನಲ್ಲಿ ಮಾತನಾಡುತ್ತಾ ತನ್ನ ಪತ್ನಿ ತನಗೆ ನೀಡಿರುವ ಮದುವೆಯ ಉಂಗುರ ತನ್ನ ಅತ್ಯಂತ ಅಚ್ಚುಮೆಚ್ಚಿನ ಆಭರಣ ಎಂದಿದ್ದಾರೆ. ರಣ್ವೀರ್ ಬಹಿರಂಗವಾಗಿ ಆಡಿರುವ ಈ ಮಾತಿನಿಂದ ಎಲ್ಲಾ ಊಹಾಪೋಹಗಳಿಗೆ ಸದ್ಯಕ್ಕಂತೂ ಫುಲ್ ಸ್ಟಾಪ್ ಬಿದ್ದಿದೆ.
ಇದಲ್ಲದೇ ಮತ್ತಷ್ಟು ಮಸಾಲೆ ಸುದ್ದಿಗಳು ಈ ವಾರ ಜನರ ಗಮನ ಸೆಳೆದಿವೆ. ಸಿನಿಮಾ ರಂಗ ಎಂದರೆ, ಮನರಂಜನೆಯೇ ಆಗಿರುವುದರಿಂದ ನಟನಟಿಯರು ತಮ್ಮ ವೃತ್ತಿ ಮಾತ್ರವಲ್ಲದೇ ಖಾಸಗಿ ಬದುಕಿನಲ್ಲೂ ಸಾಕಷ್ಟು ಮನರಂಜೆ ಕೊಡುತ್ತಿರುತ್ತಾರೆ.


Click it and Unblock the Notifications











