ಟೈಗರ್ ಶ್ರಾಫ್ ಹೊಸ ಪ್ರೇಯಸಿಗೂ ಮಹೇಶ್ ಬಾಬುಗೂ ಹಳೆಯ ನಂಟು: ಈ ವೈರಲ್ ಆಯ್ತು ಸುದ್ದಿ!

ಬಾಲಿವುಡ್‌ನಲ್ಲಿ ಲವ್ ಆಗೋದು. ಬ್ರೇಕಪ್ ಆಗೋದು ಎಲ್ಲವೂ ಕಾಮನ್. ಅದ್ಯಾವಾಗ ಯಾರಿಗೆ ಲವ್ ಆಗೊತ್ತೋ? ಯಾವಾಗ ಬ್ರೇಕಪ್ ಆಗುತ್ತೋ ಒಂದೂ ಗೊತ್ತಾಗೋದೇ ಇಲ್ಲ. ಇನ್ನು ಬ್ರೇಕಪ್ ಅನ್ನೋ ವಿಷಯಕ್ಕೆ ಬಂದರೆ, ಬಾಲಿವುಡ್‌ನಲ್ಲಿ ಸದ್ಯ ಚರ್ಚೆಯಲ್ಲಿರೋ ಜೋಡಿ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ.

ಕೆಲವು ದಿನಗಳಿಂದ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಬ್ಬರೂ ಹಲವು ದಿನಗಳಿಂದ ಬೇರೆ ಬೇರೆಯಾಗಿದ್ದಾರೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಇಷ್ಟೇ ಅಲ್ಲ, ಟೈಗರ್ ಶ್ರಾಫ್ ಹೊಸ ಗರ್ಲ್‌ಫ್ರೆಂಡ್ ಬಗ್ಗೆನೂ ಬೇಜಾನ್ ಸುದ್ದಿಯಾಗುತ್ತಿದೆ. ಅಸಲಿ ಟೈಗರ್‌ ಜೊತೆ ತಳುಕು ಹಾಕಿಕೊಂಡಿರುವ ಹೊಸ ಆ ನಟಿಯ ಹೆಸರು ಆಕಾಂಕ್ಷಾ ಶರ್ಮಾ.

ಅಸಲಿಗೆ ಆಕಾಂಕ್ಷಾ ಶರ್ಮಾ ಯಾರು? ದಿಢೀರನೇ ಟೈಗರ್ ಶ್ರಾಫ್ ಜೊತೆ ಈ ಹೆಸರು ತಳುಕು ಹಾಕಿಕೊಂಡಿದ್ದೇಕೆ? ಟೈಗರ್ ಈ ಹೊಸ ಅಫೇರ್ ಬಗ್ಗೆ ಏನಂತಾರೆ? ಅನ್ನೋದನ್ನು ತಿಳಿಯೋದಕ್ಕೂ ಮುನ್ನ ಮಹೇಶ್ ಬಾಬುಗೂ ಈಕೆಗೂ ಒಂದು ನಂಟಿ ಇದೆ. ಅದೇನು? ಅಂತ ತಿಳಿಯಲು ಮುಂದೆ ಓದಿ.

ಆಕಾಂಕ್ಷಾ ಶರ್ಮಾ ಜೊತೆ ಟೈಗರ್ ಲವ್!

ಆಕಾಂಕ್ಷಾ ಶರ್ಮಾ ಜೊತೆ ಟೈಗರ್ ಲವ್!

ಬಾಲಿವುಡ್‌ನ ಎಮರ್ಜಿಂಗ್ ಸ್ಟಾರ್‌ಗಳ ಪಟ್ಟಿಯಲ್ಲಿ ಟೈಗರ್ ಶ್ರಾಫ್ ಹೆಸರು ಮೊದಲಿದೆ. ಈ ಹಿಂದೆ ರಿಲೀಸ್ ಆದ 'ಹೀರೊಪಂತಿ 2' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದರೂ, ಟೈಗರ್ ಸಿನಿಮಾ ನೋಡಲು ಆಕ್ಷನ್ ಪ್ರಿಯರು ಸಾಲು ಗಟ್ಟಿ ನಿಂತಿದ್ದಾರೆ. ಸಿನಿಮಾ ಜರ್ನಿ ಜೊತೆಗೇ ಈ ಮಧ್ಯೆ ಟೈಗರ್ ಶ್ರಾಫ್ ಬ್ರೇಕಪ್ ವಿಚಾರನೂ ಬೇಜಾನ್ ಸುದ್ದಿಯಾಗಿತ್ತು. ಬಹುದಿನದ ಗೆಳೆತಿ ದಿಶಾ ಪಟಾನಿ ಜೊತೆ ಬ್ರೇಕಪ್ ಮಾಡಿಕೊಂಡಿರೋ ಟೈಗರ್ ಶ್ರಾಫ್ ಹೊಸ ನಟಿಯೊಂದಿಗೆ ಸುತ್ತುತ್ತಿದ್ದಾರೆ ಅಂತ ಸುದ್ದಿಯಾಗಿದೆ. ಟೈಗರ್ ಜೊತೆ ಆಕಾಂಕ್ಷಾ ಶರ್ಮಾ ಹೆಸರು ತಳುಕು ಹಾಕಿಕೊಂಡಿದೆ. ಅಸಲಿಗೆ ಈಕೆಗೂ ಮಹೇಶ್ ಬಾಬುಗೂ ಒಂದು ಲಿಂಕ್ ಇದೆ ಅನ್ನೋದೇ ವಿಶೇಷ.

ಮಹೇಶ್ ಬಾಬು-ಆಕಾಂಕ್ಷಾ ನಡುವಿನ ಲಿಂಕ್ ಏನು?

ಮಹೇಶ್ ಬಾಬು-ಆಕಾಂಕ್ಷಾ ನಡುವಿನ ಲಿಂಕ್ ಏನು?

ಟೈಗರ್ ಶ್ರಾಫ್ ಹಾಗೂ ಆಕಾಂಕ್ಷಾ ಶರ್ಮಾ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಟಾಕ್ ಆಗ್ತಿದೆ. ಇಬ್ಬರ ಲವ್ವಿ ಡವ್ವಿ ಬಗ್ಗೆ ಗುಸು ಗುಸು, ಪಿಸು ಪಿಸು ಶುರುವಾಗಿದೆ. ಆದರೆ, ಆಕಾಂಕ್ಷಾ ಶರ್ಮಾಗೂ ಟಾಲಿವುಡ್‌ ನಟ ಮಹೇಶ್ ಬಾಬುಗೂ ಒಂದು ಲಿಂಕ್ ಇದೆ. ಇವರಿಬ್ಬರೂ ಈಗಾಗಲೇ ಒಟ್ಟಿಗೆ ನಟಿಸಿದ್ದಾರೆ. ಅದೇ ಮ್ಯಾಟರ್ ಈಗ ಟಾಲಿವುಡ್‌ನಲ್ಲೂ ಹಲ್‌ಚಲ್ ಎಬ್ಬಿಸಿದೆ. ಈ ಕಾರಣಕ್ಕೆ ಮಹೇಶ್ ಬಾಬು ಹಾಗೂ ಆಕಾಂಕ್ಷಾ ಶರ್ಮಾಗೆ ಲಿಂಕ್ ಇದೆ ಅಂತ ಮಾತಾಡಿಕೊಳ್ಳುತ್ತಿದೆ. ಅಷ್ಟಕ್ಕೂ ಮಹೇಶ್ ಬಾಬು ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಅಂತ ಕನ್ಫ್ಯೂಸ್ ಆಗ್ಬೇಡಿ. ಚಿಕ್ಕದೊಂದು ಜಾಹೀರಾತಿನಲ್ಲಿ ಇಬ್ಬರೂ ನಟಿಸಿದ್ದಾರೆ.

ಜಾಹೀರಾತಿನಲ್ಲಿ ನಟನೆ

ಜಾಹೀರಾತಿನಲ್ಲಿ ನಟನೆ

ಆಕಾಂಕ್ಷಾ ಶರ್ಮಾ ದಕ್ಷಿಣ ಭಾರತದವರಿಗೆ ಪರಿಚಯವಿದೆ. ಕೆಲವು ವರ್ಷಗಳ ಹಿಂದೆ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಂತೂರ್ ಸೋಪಿನ ಜಾಹೀರಾತಿನಲ್ಲಿ ನಟಿಸಿದ್ದರು. ಇದೇ ವಿಡಿಯೋ ಈ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಅಲ್ಲದೆ ಮಹೇಶ್ ಬಾಬು ಜೊತೆ ನಟಿ ಅಂತಲೂ ಚರ್ಚೆಯಾಗುತ್ತಿದೆ. ಆಕಾಂಕ್ಷಾ ಸಂತೂರು ಜಾಹೀರಾತಿನಲ್ಲಿ ಮೂರು ಭಾಷೆಗಳಲ್ಲಿ ನಟಿದ್ದರು, ಹಿಂದಿಯಲ್ಲಿ ವರಣ್ ಧವನ್ ಜೊತೆ, ತೆಲುಗಿನಲ್ಲಿ ಮಹೇಶ್ ಬಾಬು ಹಾಗೂ ತಮಿಳಿನಲ್ಲಿ ಕಾರ್ತಿ ಜೊತೆ ನಟಿಸಿದ್ದರು.

'ತ್ರಿವಿಕ್ರಮ' ಸಿನಿಮಾದಲ್ಲಿ ನಟನೆ

'ತ್ರಿವಿಕ್ರಮ' ಸಿನಿಮಾದಲ್ಲಿ ನಟನೆ

ಕ್ರೇಜಿ ಸ್ಟಾರ್ ಎರಡನೇ ಪುತ್ರ ವಿಕ್ರಮ್ ಅಭಿನಯದ 'ತ್ರಿವಿಕ್ರಮ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅಂದ್ಕೊಂಡಷ್ಟು ಕಮಾಲ್ ಮಾಡದೆ ಹೋದರೂ, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದ್ರೀಗ ಟ್ರೈಗರ್ ಶ್ರಾಫ್ ಜೊತೆ ಆಕಾಂಕ್ಷಾ ಹೆಸರು ತಳುಕು ಹಾಕಿಕೊಂಡಲ್ಲಿಂದ ಮತ್ತಷ್ಟು ಫೇಮಸ್ ಆಗಿದ್ದಾರೆ.

More from Filmibeat

English summary
Tiger Shroff New Girlfriend Akanksha Sharma acted With Mahesh Babu Santoor Ad, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X