ಇದೇ ಮೊದಲ ಬಾರಿಗೆ ವಿಚ್ಛೇದನದ ಬಗ್ಗೆ ಮನಬಿಚ್ಚಿದ ಸಮಂತಾ ರೂತ್ ಪ್ರಭು

ಈ ವರ್ಷ ಅತೀ ಹೆಚ್ಚು ಸದ್ದು ಮಾಡಿದ ಸುದ್ದಿಗಳಲ್ಲೊಂದು ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ. ಇಬ್ಬರೂ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನ ನೀಡಲು ಮುಂದಾಗಿರುವ ಸುದ್ದಿಯನ್ನು ಒಟ್ಟಿಗೆ ಘೋಷಣೆ ಮಾಡಿದ್ದರು. ಈ ಸುದ್ದಿಯಿಂದ ಇಬ್ಬರ ಅಭಿಮಾನಿಗಳಿಗೂ ದೊಡ್ಡ ಶಾಕ್ ಆಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ದಿಢೀರನೇ ಇಂತಹದ್ದೊಂದು ನಿರ್ಧಾರಕ್ಕೆ ಮುಂದಾದ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಮೇಡ್ ಫಾರ್ ಈಚ್ ಅದರ್ ಅಂತಿದ್ದ ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯ ಬಿರುಕು ಬಿದ್ದ ಸುದ್ದಿ ಟಾಲಿವುಡ್‌ನಲ್ಲಿ ದೊಡ್ಡ ಹಲ್‌ಚಲ್ ಅನ್ನೇ ಎಬ್ಬಿಸಿತ್ತು. ಇಬ್ಬರ ವಿಚ್ಛೇದನಕ್ಕೆ ಕಾರಣವೇನಿರಬಹುದು? ಯಾಕೆ ಇಬ್ಬರೂ ವಿಚ್ಛೇದನದ ಬಗ್ಗೆ ಮಾತಾಡುತ್ತಿಲ್ಲವೆಂದು ಅಭಿಮಾನಿಗಳು ಚಿಂತಿತರಾಗಿದ್ದರು. ಆದ್ರೀಗ ಡಿವೋರ್ಸ್ ಅನೌನ್ಸ್ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಸಮಂತಾ ಮನಬಿಚ್ಚಿ ಮಾತಾಡಿದ್ದಾರೆ.

ಯೋಜನೆಗಳೆಲ್ಲವೂ ನಾಶವಾಗಿವೆ ಎಂದ ಸಮಂತಾ

ಯೋಜನೆಗಳೆಲ್ಲವೂ ನಾಶವಾಗಿವೆ ಎಂದ ಸಮಂತಾ

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು ಇಬ್ಬರ ಫ್ಯಾನ್ಸ್‌ಗೂ ಅತೀ ದೊಡ್ಡ ಶಾಕ್. ಆದರೆ, ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ನಾನೊಂದು ತೀರ. ನೀನೊಂದು ತೀರ ಅಂತ ಅಂದಿದ್ದು ಏಕೆ? ವಿಚ್ಛೇದನ ಘೋಷಣೆ ಮಾಡುವುದಕ್ಕೂ ಕೇವಲ ಮೂರು ತಿಂಗಳ ಹಿಂದಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಬಾಳಲ್ಲಿ ಬಿರುಗಾಳಿ ಬೀಸಲು ಕಾರಣವೇನು? ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆದ್ರೀಗ ಸ್ವತಃ ಸಮಂತಾ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ವೆಬ್‌ ಸೈಟ್‌ವೊಂದಕ್ಕೆ ಪ್ರತಿಕ್ರಿಯೆ ನೋಡಿರುವ ಸಮಂತಾ " ಜಾಗರೂಕತೆಯಿಂದ ರೂಪಿಸಿದ ಎಲ್ಲಾ ಯೋಜನೆಗಳೂ ನಾಶವಾಗಿವೆ" ಎಂದು ಹೇಳಿದ್ದಾರೆ.

ವಿಚ್ಛೇದನ ಒಂದು ನೋವಿನ ಪ್ರಕ್ರಿಯೆ

ವಿಚ್ಛೇದನ ಒಂದು ನೋವಿನ ಪ್ರಕ್ರಿಯೆ

ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಅಭಿಮಾನಿಗಳಿಗೆ ಹೇಗೆ ಶಾಕ್ ಆಗಿದೆಯೋ.. ಅದಕ್ಕಿಂತ ಹೆಚ್ಚು ಶಾಕ್‌ಗೆ ಒಳಗಾಗಿದ್ದು ಸ್ವತಃ ಸಮಂತಾ. ಅದಕ್ಕೆ " ವಿಚ್ಛೇದನ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ. ಒಂಟಿತನವೇ ಈ ನೋವಿನಿಂದ ಹೊರಬರಲು ಸಹಾಯ ಮಾಡುತ್ತದೆ. ವೈಯಕ್ತಿಕವಾಗಿ ಮಾಡುತ್ತಿರುವ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ, ನಿಮಗೆ ಭಾಷೆ ನೀಡುತ್ತೇನೆ. ಇದೆಲ್ಲವೂ ನನ್ನನ್ನು ಬ್ರೇಕ್ ಮಾಡಲು ಬಿಡುವುದಿಲ್ಲ." ಎಂದು ಸಂದರ್ಶನ ನೋವು ಹೊರ ಹಾಕಿದ್ದಾರೆ.

ಭವಿಷ್ಯದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ

ಭವಿಷ್ಯದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ

ವಿಚ್ಛೇದನದ ಬಳಿಕ ಸಮಂತಾ ಯಾವುದರ ಬಗ್ಗೆನೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ "2021ರಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳ ಬಳಿಕ ನನಗೆ ಯಾವುದೇ ನಿರೀಕ್ಷೆಗಳಿಲ್ಲ. ಯಾಕೆಂದರೆ, ನಾನು ಜಾಗರೂಕತೆಯಿಂದ ರೂಪಿಸಿದ ಯೋಜನೆಗಳೆಲ್ಲಾ ನಾಶವಾಗಿದೆ. ನನ್ನ ಭವಿಷ್ಯದಲ್ಲಿ ಮುಂದೆ ಏನೇನು ಇದೆಯೋ ಅದಕ್ಕೆ ನಾನು ಮುಕ್ತವಾಗಿದ್ದೇನೆ. ನಾನು ಅತ್ಯುತ್ತಮವಾದುದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಅಷ್ಟೇ." ಎಂದು ಸಮಂತಾ ಹೇಳಿದ್ದಾರೆ.

2017ರಲ್ಲಿ ಸಮಂತಾ ಕೈ ಹಿಡಿದಿದ್ದ ನಾಗಚೈತನ್ಯ

2017ರಲ್ಲಿ ಸಮಂತಾ ಕೈ ಹಿಡಿದಿದ್ದ ನಾಗಚೈತನ್ಯ

ಹೆಚ್ಚು ಕಡಿಮೆ 9 ವರ್ಷ ಪ್ರೀತಿ ಮಾಡಿದ್ದ ನಾಗಚೈತನ್ಯ ಹಾಗೂ ಸಮಂತಾ 2017 ಅಕ್ಟೋಬರ್ 6 ಮತ್ತು 7ರಂದು ವಿವಾಹವಾಗಿದ್ದರು. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಾಲ್ಕು ವರ್ಷಗಳ ಬಳಿಕ ಈ ಜೋಡಿ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದಾರೆ. ಸಮಂತಾ ತನ್ನ ಜೊತೆ ಅಂಟಿಕೊಂಡಿದ್ದ ಅಕ್ಕಿನೇನಿ ಹೆಸರನ್ನು ಬಿಟ್ಟಾಗ ಇಬ್ಬರ ವಿಚ್ಛೇದನದ ಬಗ್ಗೆ ಪುಕಾರು ಹಬ್ಬಿತ್ತು. ಕೊನೆಗೆ ಅಕ್ಟೋಬರ್ 2 ರಂದು ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ ನಾಲ್ಕು ದಿನ ಮುನ್ನ ಬೇರೆಯಾಗುತ್ತಿರುವ ವಿಷಯ ಅನೌನ್ಸ್ ಮಾಡಿದ್ದರು.

More from Filmibeat

English summary
Tollywood Samantha first reaction on divorce with Naga Chaithaya. She is clearly implying that she had made so many plans with Naga Chaitanya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X