2022ಕ್ಕೆ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಲಿವೆ ಈ ಸಿನಿಮಾಗಳು: ಯಾರ ಬಳಿ ಎಷ್ಟೆಷ್ಟು ಚಿತ್ರಗಳಿವೆ

2021 ಕೂಡ ಬಾಲಿವುಡ್ ಮಟ್ಟಕ್ಕೆ ಅಷ್ಟೊಂದು ಲಾಭದಾಯಕವಾಗಿ ಸಾಬೀತಾಗಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ದೊಡ್ಡ ದೊಡ್ಡ ಬಾಲಿವುಡ್ ಸಿನಿಮಾಗಳು ರಿಲೀಸ್ ಆದರೂ, ಕೆಲವೇ ಕೆಲವು ಸಿನಿಮಾಗಳು ಮಾತ್ರ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿವೆ. ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಥಿಯೇಟರ್‌ಗೆ ಲಗ್ಗೆ ಇಟ್ಟು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಅದೇ ಸಲ್ಮಾನ್ ಖಾನ್ ನಟನೆಯ 'ಅಂತಿಮ್' ಹಾಗೂ ರಣ್‌ವೀರ್ ಸಿಂಗ್ ನಟನೆಯ '83' ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡಿವೆ. ಆಯುಷ್ಮಾನ್ ಖುರಾನಾ ಸಿನಿಮಾ 'ಚಂಡಿಗಢ್ ಕರೇ ಆಶಿಕಿ' ಕೂಡ ಮಕಾಡೆ ಮಲಗಿಬಿಡ್ತು.

ಸೋಲು ಗೆಲುವಿನ ಆಟದಲ್ಲಿ ಬಾಲಿವುಡ್ ಇನ್ನೂ ನಂಬಿಕೆ ಕಂಡು ಕಳೆದುಕೊಂಡಿಲ್ಲ. 2022ರಲ್ಲಿ ಬಾಲಿವುಡ್‌ನಲ್ಲಿ ಬಿಡುಗಡೆಯಾಗಬೇಕಿರುವ ದೊಡ್ಡ ದೊಡ್ಡ ಸಿನಿಮಾಗಳಿವೆ. 2021ರಲ್ಲಿ ರಿಲೀಸ್ ಆಗಬೇಕಿದ್ದ ಶಾಹಿದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಕೂಡ ಈ ಪಟ್ಟಿಯಲ್ಲಿದೆ. ಹಾಗಿದ್ದರೆ, ಹೊಸ ವರ್ಷದಲ್ಲಿ ಬಾಲಿವುಡ್ ಅಬ್ಬರಿಸುತ್ತಾ? ಯಾವ್ಯಾವ ಸೂಪರ್‌ಸ್ಟಾರ್ ಸಿನಿಮಾ, ಯಾವ್ಯಾವಾಗ ರಿಲೀಸ್ ಆಗುತ್ತೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅಕ್ಷಯ್ ಕುಮಾರ್ 'ಪೃಥ್ವಿರಾಜ್'

ಅಕ್ಷಯ್ ಕುಮಾರ್ 'ಪೃಥ್ವಿರಾಜ್'

ಈ ವರ್ಷ ಬಿಡುಗಡೆಯಾಗಲಿರುವ ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ಸಿನಿಮಾ 'ಪೃಥ್ವಿರಾಜ್'. ಅಕ್ಷಯ್ ಕುಮಾರ್ ನಟನೆಯ ಸಿನಿಮಾ ಜನವರಿ 21ರಂದು ಬಿಡುಗಡೆಯಾಗುವುದಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 11ನೇ ಶತಮಾನದ ಮಹಾರಾಜ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದು, 2017ರ ವಿಶ್ವ ಸುಂದರಿ ಮನುಶಿ ಚಿಲ್ಲರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಜಾನ್ ಅಬ್ರಾಹಂ 'ಅಟ್ಯಾಕ್'

ಜಾನ್ ಅಬ್ರಾಹಂ 'ಅಟ್ಯಾಕ್'

ಈ ತಿಂಗಳ ಕೊನೆಯಲ್ಲಿ ಜಾನ್ ಅಬ್ರಾಹಂ ಅಭಿನಯದ 'ಅಟ್ಯಾಕ್' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ದೇಶದ ರಕ್ಷಣೆಗೆ ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವ ಕಥೆಯುಳ್ಳ ಸಿನಿಮಾದಲ್ಲಿ ಜಾನ್ ಅಬ್ರಾಹಂ ನಟಿಸುತ್ತಿದ್ದಾರೆ. ಈ ಸಿನಿಮಾ ಜನವರಿ 28 ರಂದು ಬಿಡುಗಡೆಯಾಗಲಿದೆ.

ಆಲಿಯಾ 'ಗಂಗೂಬಾಯಿ ಕಾಠಿಯವಾಡಿ'

ಆಲಿಯಾ 'ಗಂಗೂಬಾಯಿ ಕಾಠಿಯವಾಡಿ'

ಆಲಿಯಾ ಭಟ್ ನಟನೆಯ ಬಹುನಿರೀಕ್ಷಿತ ಸಿನಿಮಾ ಗಂಗೂಬಾಯಿ 'ಕಾಠಿಯವಾಡಿ'. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 2021 ಜುಲೈ 30ರಂದು ಸಿನಿಮಾ ಬಿಡುಗಡೆಯಾಗುವುದಕ್ಕಾಗಿ ಘೋಷಿಸಿದ್ದರು. ಆದರೆ, ಕೊರೊನಾ ಹಾವಳಿಯಿಂದ ಸಿನಿಮಾವನ್ನು ಮುಂದೂಡಲಾಯಿತು. ಹೀಗಾಗಿ ಮುಂಬೈ ನಗರದ ಮಾಫಿಯಾ ಕ್ವೀನ್ ಆಗಿದ್ದ ಗಂಗೂಬಾಯಿ ಕಥೆಯನ್ನು ಫೆಬ್ರವರಿ 18ರಂದು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ. ಈ ಸಿನಿಮಾ 2022ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ.

ರಣ್‌ವೀರ್ ಸಿಂಗ್ 'ಜಯೇಶ್‌ಭಾಯ್ ಜೋರ್‌ದಾರ್'

ರಣ್‌ವೀರ್ ಸಿಂಗ್ 'ಜಯೇಶ್‌ಭಾಯ್ ಜೋರ್‌ದಾರ್'

'83' ಬಳಿಕ ರಣ್‌ವೀರ್ ಸಿಂಗ್ ಮತ್ತೊಂದು ಸಿನಿಮಾ ಫೆಬ್ರವರಿ 25ಕ್ಕೆ ರಿಲೀಸ್ ಆಗಲಿದೆ. 'ಜಯೇಶ್‌ಭಾಯ್ ಜೋರ್‌ದಾರ್' ಫೆಬ್ರವರಿ 25ಕ್ಕೆ ಬಿಡುಗಡೆಯಾಗಲಿದೆ. ರಣ್‌ವೀರ್ ಸಿಂಗ್ ಜೊತೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಟಿಸಿದ ಶಾಲಿನಿ ಪಾಂಡೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಗುಜರಾತಿ ಹಿನ್ನೆಲೆಯಲ್ಲಿ ಕತೆ ಹೆಣೆಯಲಾಗಿದೆ.

ರಣ್‌ಬೀರ್ ಕಪೂರ್ 'ಶಂಶೀರಾ'

ರಣ್‌ಬೀರ್ ಕಪೂರ್ 'ಶಂಶೀರಾ'

ಕಳೆದ ಮೂರು ವರ್ಷಗಳಿಂದ ರಣ್‌ಬೀರ್ ಕಪೂರ್ ನಟಿಸಿದ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. 2018ರಲ್ಲಿ ತೆರೆಕಂಡಿದ್ದ 'ಸಂಜು' ಸಿನಿಮಾನೇ ಕೊನೆ. ಆದರೆ, ಈ ವರ್ಷ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಯಶ್ ರಾಜ್ ಫಿಲಂಸ್ ನಿರ್ಮಿಸಿರುವ 'ಶಂಶೀರಾ' ಸಿನಿಮಾ ಮಾರ್ಚ್ 18ಕ್ಕೆ ಬಿಡುಗಡೆಯಾಗಲಿದೆ. ಕರಣ್ ಮಲ್ಹೋತ್ರಾ ನಿರ್ದೇಶಿಸಿದ ಸಿನಿಮಾದಲ್ಲಿ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

ಕಾರ್ತಿಕ್ ಆರ್ಯನ್ 'ಬೂಲ್ ಬುಲಯ್ಯ2'

ಕಾರ್ತಿಕ್ ಆರ್ಯನ್ 'ಬೂಲ್ ಬುಲಯ್ಯ2'

2007ರಲ್ಲಿ ತೆರೆಕಂಡಿದ್ದ 'ಬೂಲ್ ಬುಲಯ್ಯ' ಸಿನಿಮಾ ಬಾಕ್ಸಾಫೀಸ್‌ ಅನ್ನು ಚಿಂದಿ ಉಡಾಯಿಸಿತ್ತು. ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದರು. ಈಗ 15 ವರ್ಷಗಳ ಬಳಿಕ 'ಬೂಲ್ ಬುಲಯ್ಯ 2' ಬಿಡುಗಡೆಯಾಗುತ್ತಿದ್ದು, ಕಾರ್ತಿಕ್ ಆರ್ಯನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾರ್ಚ್ 25 ಸಿನಿಮಾ ಬಿಡುಗಡೆಯಾಗಲಿದೆ.

ಕಂಗನಾ 'ಧಾಕಡ್'

ಕಂಗನಾ 'ಧಾಕಡ್'

ಕಂಗನಾ ರಣಾವತ್ ಎಜೆಂಟ್ ಅಗ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಅದುವೇ 'ಧಾಕಡ್'. ಕಂಗನಾ ವಿಭಿನ್ನ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಏಪ್ರಿಲ್ 8ರಂದು ಬಿಡುಗಡೆಯಾಗಲಿದೆ. ಅರ್ಜುನ್ ರಾಮ್ ಪಾಲ್ ಹಾಗೂ ದಿವ್ಯ ದತ್ತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಯಶ್ Vs ಆಮಿರ್ ಖಾನ್

ಯಶ್ Vs ಆಮಿರ್ ಖಾನ್

ಯಶ್ ಅಭಿನಯದ 'ಕೆಜಿಎಫ್ 2' ಬಾಲಿವುಡ್ ಸಿನಿಮಾ ಅಲ್ಲದೆ ಹೋದರೂ ಪ್ಯಾನ್ ಇಂಡಿಯಾ ಸಿನಿಮಾ. ಬಹು ನಿರೀಕ್ಷೆಯ ಈ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಅದೇ ದಿನ ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಕೂಡ ರಿಲೀಸ್ ಆಗುತ್ತಿದ್ದು, ಎರಡು ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಕಾದಾಡಲಿವೆ.

ಅಜಯ್ ದೇವಗನ್ 'ಮೈದಾನ್'

ಅಜಯ್ ದೇವಗನ್ 'ಮೈದಾನ್'

2021 ದಸರಾ ಹಬ್ಬಕ್ಕೆ 'ಮೈದಾನ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಸಿನಿಮಾವನ್ನು ಮುಂದೂಡಲಾಗಿತ್ತು. ಅಜಯ್ ದೇವಗನ್ ನಟಿಸಿ, ಬೋನಿ ಕಪೂರ್ ನಿರ್ಮಿಸಿದ ಸಿನಿಮಾ ಜೂನ್ 03ರಂದು ರಿಲೀಸ್ ಆಗುತ್ತಿದೆ.

ಪ್ರಭಾಸ್ 'ಆದಿಪುರುಷ್'

ಪ್ರಭಾಸ್ 'ಆದಿಪುರುಷ್'

'ಆದಿಪುರುಷ್' ಈ ವರ್ಷದ ಮತ್ತೊಂದು ಅದ್ಧೂರಿ ಸಿನಿಮಾ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ನಟನೆಯ ಆದಿಪುರುಷ್ ಸಿನಿಮಾವನ್ನು ಓಂ ರಾವತ್ ನಿರ್ದೇಶಿಸುತ್ತಿದ್ದರೆ, ಕೃತಿ ಸನನ್ ಹಾಗೂ ಸೈಫ್ ಅಲಿಖಾನ್ ಕೂಡ ನಟಿಸಿದ್ದಾರೆ. ಆಗಸ್ಟ್ 11ಕ್ಕೆ 'ಆದಿಪುರುಷ್' ಬಿಡುಗಡೆಯಾಗಲಿದೆ.

ರಣ್‌ಬೀರ್ ಆಲಿಯಾ 'ಬ್ರಹ್ಮಾಸ್ತ್ರ'

ರಣ್‌ಬೀರ್ ಆಲಿಯಾ 'ಬ್ರಹ್ಮಾಸ್ತ್ರ'

ರಣ್‌ಬೀರ್ ಕಪೂರ್, ಆಲಿಯಾ ಭಟ್ ಹಾಗೂ ಅಮಿತಾಬ್ ಬಚ್ಚನ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾಗಾಗಿ ಇಡೀ ಬಾಲಿವುಡ್ ಕಾದು ಕೂತಿದೆ. ಆದರೆ, ಆಯನ್ ಮುಖರ್ಜಿ ನಿರ್ದೇಶಿಸಿದ ಈ ಸಿನಿಮಾ ಪ್ರತಿಬಾರಿ ರಿಲೀಸ್ ಡೇಟ್‌ ಅನ್ನು ಮುಂದೂಡಿದೆ. ಈಗ ಡೇಟ್ ಅನೌನ್ಸ್ ಮಾಡಿದ್ದು, ಸೆಪ್ಟೆಂಬರ್ 9ರಂದು ರಿಲೀಸ್ ಆಗಲಿದೆ.

ಹೃತಿಕ್ -ಸೈಫ್ 'ವಿಕ್ರಂ ವೇದ'

ಹೃತಿಕ್ -ಸೈಫ್ 'ವಿಕ್ರಂ ವೇದ'

ತಮಿಳಿನ ರಿಮೇಕ್ 'ವಿಕ್ರಂ ವೇದ' ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ಹೃತಿಕ್ ರೋಷನ್, ವಿಜಯ್ ಸೇತುಪತಿ ಪಾತ್ರದಲ್ಲಿ ಹಾಗೂ ಸೈಫ್ ಅಲಿಖಾನ್, ಆರ್. ಮಾಧವನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಶೂಟಿಂಗ್ ನಡೆದರೆ ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಲಿದೆ.

More from Filmibeat

English summary
The most exciting Bollywood films of this year 2022. From Bramhastra, Shamshera, Prithviraj, Laal Singh Chaddha, Gangubai Khatiawadi, Adipurush, KGF 2, Dhaakad, Vikram Veda Remake
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X