ಮೇ ತಿಂಗಳ ಟಾಪ್ ಬಾಲಿವುಡ್ ನಟ ಯಾರು? ಟಾಪ್ 10 ಪಟ್ಟಿಯಲ್ಲಿ ಯಾರಿದ್ದಾರೆ?
2022ರ ಮೊದಲಾರ್ಧ ಮುಗಿದು ಹೋಗಿದೆ. ಇನ್ನೇನು ಸೆಕಂಡ್ ಹಾಫ್ ಈ ತಿಂಗಳಿನಿಂದ ಆರಂಭ ಆಗಿದೆ. ಐದನೇ ತಿಂಗಳು ಅಂದರೆ ಮೇ ನಲ್ಲಿ ಬಾಲಿವುಡ್‌ನಲ್ಲಿ ಕೆಲವು ಸಿನಿಮಾಗಳು ಬಾಲಿವುಡ್‌ಗೆ ಆಶಾದಾಯಕವೆನಿಸಿದೆ. ಕೆಲವು ಸಿನಿಮಾಗಳು ಗೆದ್ದಿವೆ. ಮತ್ತೆ ಕೆಲವು ಸಿನಿಮಾಗಳು ಸೋತಿವೆ.
ಮೇ ತಿಂಗಳಿನಲ್ಲಿ ಕೆಲವು ಸಿನಿಮಾಗಳು ಸದ್ದು ಮಾಡಿದಂತೆ, ಕೆಲ ಸೂಪರ್‌ಸ್ಟಾರ್‌ಗಳೂ ಕೂಡ ಸೌಂಡ್ ಮಾಡಿದ್ದಾರೆ. ಕೆಲವರ ಸಿನಿಮಾ ಮಾತಾಡಿದೆ. ಮತ್ತೆ ಕೆಲವರ ಟೀಸರ್ ಕಿಕ್ ಕೊಟ್ಟಿದೆ. ಇನ್ನು ಕೆಲವರ ಲುಕ್ ಸೂಪರ್ ಅಂತ ಅನಿಸಿದೆ. ಇವೆಲ್ಲವುಗಳನ್ನಿಟ್ಟುಕೊಂಡು ಮೇ ತಿಂಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದ ಬಾಲಿವುಡ್ ನಟರ ಪಟ್ಟಿಯೊಂದು ರಿಲೀಸ್ ಆಗಿದೆ.
ಒರ್ಮ್ಯಾಕ್ಸ್ ಮೀಡಿಯಾ ಅನ್ನೊ ಸಂಸ್ಥೆಯೊಂದು ಪ್ರತಿ ತಿಂಗಳು ಸರ್ವೆಯೊಂದನ್ನು ನಡೆಸುತ್ತೆ. ಕಳೆದ ಏಪ್ರಿಲ್ ತಿಂಗಳಲ್ಲಿ ಆಲ್ ಇಂಡಿಯಾ ಲೆವೆಲ್‌ನಲ್ಲಿ ಟಾಪ್ 10 ಪಟ್ಟಿಯಲ್ಲಿರುವ ನಟರ ಹೆಸರುಗಳನ್ನು ಬಹಿರಂಗ ಪಡಿಸಿತ್ತು. ಅದರಲ್ಲಿ ಯಶ್ ಕೂಡ ಸ್ಥಾನ ಪಡೆದಿದ್ದರು. ಈ ಬಾರಿ ಟಾಪ್ ಟೆನ್ ಹಿಂದಿನ ನಟರ ಪಟ್ಟಿಯನ್ನು ರಿಲೀಸ್ ಮಾಡಿದೆ.

ಅಕ್ಷಯ್ ಕುಮಾರ್ ನಂ 1
ಒರ್ಮ್ಯಾಕ್ಸ್ ಮೀಡಿಯಾ ಮೇ ತಿಂಗಳಲ್ಲಿ ಸದ್ದು ಮಾಡಿದ ಟಾಪ್ ಟೆನ್ ಹಿಂದಿ ನಟರ ಪಟ್ಟಿಯನ್ನು ಬಹಿರಂಗ ಪಡಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಅಕ್ಷಯ್ ಕುಮಾರ್ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ಬಿಡುಗಡೆ ಸಜ್ಜಾಗಿತ್ತು. ಅಕ್ಷಯ್ ಕುಮಾರ್ ಇಡೀ ತಿಂಗಳು 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಕಾರಣಕ್ಕೆ ಅಕ್ಷಯ್ ಕುಮಾರ್ ಮೇ ತಿಂಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಆದರೆ, ಅಕ್ಷಯ್ ಕುಮಾರ್ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್' ಅಂದುಕೊಂಡಷ್ಟು ಸದ್ದು ಮಾಡಿಲ್ಲ.

ಶಾರುಖ್ ಖಾನ್ ನಂ 1
ಕಿಂಗ್ ಖಾನ್ ಶಾರುಖ್ ಒರ್ಮ್ಯಾಕ್ಸ್ ಮೀಡಿಯಾ ರಿಲೀಸ್ ಮಾಡಿದ ಟಾಪ್ 10 ಹಿಂದಿ ನಟರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೇ ತಿಂಗಳಲ್ಲಿ ಶಾರುಖ್ ಸಿನಿಮಾಗಳ ಜೊತೆ ಜೊತೆ ಒಂದು ಫೋಟೊ ಕೂಡ ವೈರಲ್ ಆಗಿತ್ತು. ಅವರ ಫ್ಯಾನ್ಸ್ ಶಾರುಖ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದರಿಂದಿಗೆ 'ಪಠಾಣ್' ಹಾಗೂ 'ಜವಾನ್' ಸಿನಿಮಾ ಟೈಟಲ್‌ಗಳು ಸುದ್ದಿಯಲ್ಲಿದ್ದವು. ಈ ಕಾರಣಕ್ಕೆ ಶಾರುಖ್ ಎರಡನೇ ಸ್ಥಾನದಲ್ಲಿದ್ದಾರೆ.
ಟಾಪ್ 10 ನಟರು ಇವರೇ
ಮೇ ತಿಂಗಳ ಟಾಪ್ 10 ನಟರ ಲಿಸ್ಟ್ ಅನ್ನುರಿಲೀಸ್ ಮಾಡಲಾಗಿದೆ. ಅಕ್ಷಯ್ ಕುಮಾರ್ ನಂ 1 ಸ್ಥಾನದಲ್ಲಿದ್ದರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ರಣ್‌ವೀರ್ ಸಿಂಗ್, ಆಮಿರ್ ಖಾನ್ , ರಣ್‌ವೀರ್ ಸಿಂಗ್, ಕಾರ್ತಿಕ್ ಆರ್ಯನ್ ಕೂಡ ಪಟ್ಟಿಯಲ್ಲಿದ್ದಾರೆ.
ಟಾಪ್ 10 ಪಟ್ಟಿಯಲ್ಲಿರುವ ನಟರು
ಅಕ್ಷಯ್ ಕುಮಾರ್ ನಂ 1
ಶಾರುಖ್ ಖಾನ್ ನಂ 2
ಸಲ್ಮಾನ್ ಖಾನ್ ನಂ 3
ಹೃತಿಕ್ ರೋಷನ್ ನಂ 4
ರಣ್‌ವೀರ್ ಸಿಂಗ್ ನಂ 5
ಆಮಿರ್ ಖಾನ್ ನಂ 6
ರಣ್‌ಬೀರ್ ಕಪೂರ್ ನಂ 7
ಕಾರ್ತಿಕ್ ಆರ್ಯನ್ ನಂ 8
ಅಜಯ್ ದೇವಗನ್ ನಂ 9
ಆಯುಷ್ಮಾನ್ ಖುರಾನಾ ನಂ 10

ಕಾರ್ತಿಕ್ ಆರ್ಯನ್ ಎಂಟ್ರಿ
ಬಾಲಿವುಡ್‌ಗೆ ಮರುಜೀವ ಕೊಟ್ಟ ಸಿನಿಮಾ 'ಭುಲ್ ಭುಲಯ್ಯ 2'. ಕಾರ್ತಿಕ್ ಆರ್ಯನ್ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಇನ್ನೂ ರನ್ನಿಂಗ್‌ನಲ್ಲಿದೆ. ಈಗಾಗಲೇ ಕಲೆಕ್ಷನ್ 170 ಕೋಟಿ ರೂ. ದಾಟಿದ್ದು, ಬಾಲಿವುಡ್‌ಗೆ ಮರುಜೀವ ಕೊಟ್ಟಿದೆ. ಈ ಕಾರಣಕ್ಕೆ ಕಾರ್ತಿಕ್ ಆರ್ಯನ್ ಟಾಪ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.


Click it and Unblock the Notifications











