ದೀಪಿಕಾರ ಈ ಸೈಡ್ ಲೇಸ್ ಬಟ್ಟೆ ಬೆಲೆ ಕೇಳಿದ್ರೆ ದಂಗಾಗ್ತೀರಾ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದಾ ತಮ್ಮ ಬಟ್ಟೆ, ಫಿಟ್‌ನೆಸ್, ಸೌಂದರ್ಯದ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಅಲ್ಲದೇ ತಾನು ಪ್ರತೀ ಭಾರಿಯೂ ಧರಿಸುವ ಫ್ಯಾಷನೇಬಲ್ ಡ್ರೆಸ್‌ಗಳಿದ್ದೇ ಸುದ್ದಿಯಲ್ಲಿ ಇರುವ ದೀಪಿಕಾ, ಎಂತದ್ದೇ ಬಟ್ಟೆಯನ್ನು ತೊಟ್ಟರು ಹಾಟ್ ಆಂಡ್ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಪದೇ ಪದೇ ಫೊಟೋ ಶೂಟ್ ಮಾಡಿಸಿಕೊಳ್ಳುವ ದೀಪಿಕಾ ಪಡುಕೊಣೆ ವಿಭಿನ್ನ ಬಗೆಯ ಬಟ್ಟೆಗಳನ್ನು ತೊಟ್ಟು ಸುದ್ದಿಯಾಗುತ್ತಾರೆ.

'ಗೆಹ್ರೈಯಾನ್' ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ನಟಿ ದೀಪಿಕಾ ಪಡುಕೋಣೆ, ಕಳೆದ ರಾತ್ರಿ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರು ಏರ್ಪಡಿಸಿದ್ದ ದೊಡ್ಡ ಪಾರ್ಟಿಗೆ ತೆರಳಿದ್ದರು. ಇದರಲ್ಲಿ ಇತರ ಸೆಲೆಬ್ರಿಟಿಗಳೊಂದಿಗೆ ದೀಪಿಕಾ ಕೂಡ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಎಲ್ಲರ ಗಮನ ಸೆಳದಿದ್ದು ದೀಪಿಕಾ ಪಡುಕೋಣೆ ಅವರ ಕಪ್ಪು ಉಡುಗೆ ಎಂಬುದು ವಿಶೇಷ. ದೀಪಿಕಾ ಅವರು ಪಾರ್ಟಿಯಲ್ಲಿ ಕಪ್ಪು ಬಾಡಿಕಾನ್ ಮಿಡಿ ಉಡುಗೆಯನ್ನು ಧರಿಸಿದ್ದರು.

ಎಲ್ಲರಿಗೂ ಗೊತ್ತಿರುವ ಹಾಗೆ ದೀಪಿಕಾ ಪಡುಕೋಣೆ ಅವರು ಪ್ರತಿ ಬಾರಿ ಹೊರಗೆ ಕಾಣಿಸಿಕೊಂಡಾಗಲೂ ಅಭಿಮಾನಿಗಳನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ತಮ್ಮ ಫ್ಯಾಷನೆಬಲ್ ಡ್ರೆಸ್ ಮೂಲಕ ಮೋಡಿ ಮಾಡುತ್ತಾರೆ. ಈ ಬಾರಿ ದೀಪಿಕಾ ಅವರು ಸ್ಟ್ರಾಪಿ ಉಡುಗೆಯನ್ನು ಧರಿಸಿದ್ದು, ಡ್ರೆಸ್ ಸೈಡ್'ನಲ್ಲಿ ಲೇಸ್ ಇದೆ.ದೀಪಿಕಾ ಈ ಡ್ರೆಸ್'ಗೆ ಮ್ಯಾಚಿಂಗ್ ಆಗಿ ಮುತ್ತಿನ ಡ್ಯಾಂಗ್ಲರ್ ಕಿವಿಯೋಲೆಗಳನ್ನು ಮತ್ತು ಸ್ಟ್ರಾಪಿ ಹೀಲ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Total Cost of Deepika Padukone’s Black Dress

ಬನ್ ಹೇರ್ ಸ್ಟೈಲ್ ಕೂಡ ಬಹಳ ಸುಂದರವಾಗಿದೆ. ಮೇಕಪ್ ಕೂಡ ಬಹಳ ಸಿಂಪಲ್ ಆಗಿ ಮಾಡಿಕೊಂಡಿದ್ದಾರೆ. ಈಗ ದೀಪಿಕಾಳ ಬೋಲ್ಡ್ ಲುಕ್ ನೋಡಿ ಬೆರಗಾಗಿರುವವರು, ಇನ್ನು ದೀಪಿಕಾ ಉಡುಪಿನ ಬೆಲೆ ಕೇಳಿದರೆ ಹೌಹಾರುತ್ತೀರಿ. ಹೌದು, ದೀಪಿಕಾ ಅವರ ಸ್ಟ್ರಾಪಿ ಡ್ರೆಸ್, ಐಷಾರಾಮಿ ಬ್ರಾಂಡ್ ಡೋಲ್ಸ್ ಮತ್ತು ಗಬ್ಬಾನಾದಿಂದ ಖರೀದಿಸಲಾಗಿದೆ. ಅಂದಹಾಗೆ ಈ ಉಡುಪಿನ ಬೆಲೆ $2,829 ಆಗಿದೆ. ಅಂದರೆ ಸರಿಸುಮಾರು 2.13 ಲಕ್ಷ ರೂ.

ಮೊದಲ ದಿನ ಆಲಿಯಾ ಭಟ್ ಕಮಾಯಿ ಎಷ್ಟು? 'ಸೂರ್ಯವಂಶಿ', '83' ಜೊತೆ ಸೇರಿದ 'ಗಂಗೂಬಾಯಿ'
ವಿಶೇಷವೆಂದರೆ ದೀಪಿಕಾ ಅವರು ಈ ರೀತಿ ಬೋಲ್ಡ್ ಲುಕ್'ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ಅಂದರೆ 'ಗೆಹ್ರೈಯಾನ್' ಚಿತ್ರದ ಪ್ರಚಾರದ ಸಮಯದಲ್ಲಿ, ದೀಪಿಕಾ ಅನೇಕ ಬೋಲ್ಡ್ ಬಟ್ಟೆಗಳನ್ನು ಧರಿಸಿದ್ದರು. ಒಟಿಟಿ ಪ್ಲಾಟ್'ಫಾರ್ಮ್'ನಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Total Cost of Deepika Padukone’s Black Dress

ಇನ್ನು ದೀಪಿಕಾ ಅವರು ತಮ್ಮ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಹೃತಿಕ್ ರೋಷನ್, ಶಾರುಖ್ ಖಾನ್, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರಂತಹ ಸ್ಟಾರ್‌ಗಳೊಂದಿಗೆ ವಿಭಿನ್ನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಅವರು ಫೈಟರ್'ನಲ್ಲಿ ಮೊದಲ ಬಾರಿಗೆ ಹೃತಿಕ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ. ಇನ್ನು ಎಸ್ಆರ್ಕೆ ಜೊತೆಗೆ, ಅವರು ಪಠಾಣ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ನಾಗ್ ಅಶ್ವಿನ್ ಅವರು ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರದಲ್ಲಿ ದೀಪಿಕಾ ಮತ್ತು ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Deepika Padukone goes bold with side lace dress worth over Rs 2 lakh; adds a pinch of shimmer to amp up the look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X