'ಟಾಕ್ಸಿಕ್' ನಟಿ ಮೇಲೆ ಗಂಭೀರ ಆರೋಪ; ನಿಜ ಜೀವನದಲ್ಲಿ ಜಂಭದ ಕೋಳಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ ಅವರ ಕ್ಯಾಮೆರಾ ಹಿಂದಿನ ವರ್ತನೆಯ ಕುರಿತ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ಫ್ಲ್ಯೂಯೆನ್ಸರ್ ಕಾರ್ತಿಕೇಯ ತಿವಾರಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಕಿಯಾರಾ ಅವರ ನಡವಳಿಕೆಯಿಂದ ತಮಗೆ ನೋವಾಗಿತ್ತು. ಅವರ ವರ್ತನೆ ನಿಜ ಜೀವನದಲ್ಲಿ ಬೇರೆನೇ ಇದೆ ಎಂದು ನೈಜ ಘಟನೆಯನ್ನು ವಿವರಿಸಿದ್ದಾರೆ. ತಾಯಿಯ ತಪ್ಪಿನಿಂದಾಗಿ ಕಿಯಾರಾ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು ಎಂದು ಬಾಲಿವುಡ್ ಇನ್ಫ್ಲ್ಯೂಯೆನ್ಸರ್ ಕಾರ್ತಿಕೇಯ ಆರೋಪಿಸಿದ್ದಾರೆ.
ಕಾರ್ತಿಕೇಯ ತಮ್ಮ ತಾಯಿಯೊಂದಿಗೆ ಜೈಪುರದಿಂದ ಮುಂಬೈಗೆ ವಿಮಾನದಲ್ಲಿ ಹೋಗುತ್ತಿದ್ದರು. ಅದೇ ವಿಮಾನದಲ್ಲಿ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಕಾರ್ತಿಕ್ ಆರ್ಯನ್ ಕೂಡಾ ಪ್ರಯಾಣ ಮಾಡುತ್ತಿದ್ದರು. ಅವರ ಇಬ್ಬರ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಆಗತಾನೆ ರಿಲೀಸ್ ಆಗಿ, ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಇದೇ ವೇಳೆ ಕಾರ್ತಿಕೇಯ ಮತ್ತು ಅವರ ತಾಯಿ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಕಾರ್ತಿಕೇಯ ಅವರ ತಾಯಿ ಆಕಸ್ಮಿಕವಾಗಿ, ತಮ್ಮ ನಿಗದಿತ ಸೀಟಿಗಿಂತ ಒಂದು ಸಾಲು ಮುಂಚೆ ಇದ್ದ ಸೀಟಿನಲ್ಲಿ ಕೂತುಬಿಟ್ಟರು. ಅದು ಕಿಯಾರಾ ಅಡ್ವಾಣಿಗೆ ಮೀಸಲಾಗಿದ್ದ ಸೀಟು. ಇದು ಏರ್‌ಹೋಸ್ಟೆಸ್ ಗಮನಕ್ಕೆ ಬಂದ ಕೂಡಲೇ, ಕಾರ್ತಿಕೇಯ ತಾಯಿ ಯಾವುದೇ ವಾದ ಮಾಡದೆ ತಮ್ಮ ಸರಿಯಾದ ಸೀಟಿಗೆ ತಕ್ಷಣವೇ ಬಂದು ಕೂತಿದ್ದರು. ಆದರೆ, ಆ ವೇಳೆ ಕಿಯಾರಾ ಅಡ್ವಾಣಿ ಅವರ ಪ್ರತಿಕ್ರಿಯೆ ಕಾರ್ತಿಕೇಯ ಅವರಿಗೆ ತೀರ ಬೇಸರವನ್ನು ತರಿಸಿತ್ತು.
ಈ ಘಟನೆಯಿಂದ ನಟಿ ಕಿಯಾರಾ ಅಸಮಾಧಾನಗೊಂಡಿರುವುದು ಎದ್ದು ಕಾಣುತ್ತಿತ್ತೆಂದು ಕಾರ್ತಿಕೇಯ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಮುಖ ಸಿಂಡರಿಸಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದರು. "ಒಬ್ಬ ಸೆಲೆಬ್ರಿಟಿ ಆಗಿಯೂ ಇಂತಹ ಅಹಂ ಸರಿಯಲ್ಲ" ಎಂದು ಕಾರ್ತಿಕೇಯ ಅಭಿಪ್ರಾಯಪಟ್ಟಿದ್ದಾರೆ.
ಕಾರ್ತಿಕೇಯ ಇಲ್ಲಿಗೆ ಸುಮ್ಮನಿರಲಿಲ್ಲ. "ನೀವೇನು ಅಷ್ಟೊಂದು ದೊಡ್ಡ ನಟಿಯಲ್ಲ. ಆ ಮುಖಭಾವ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ" ಎಂದು ವಿಡಿಯೋ ಮಾಡಿ ನೇರವಾಗಿ ಹೇಳಿದ್ದಾರೆ. ಇದೇ ವಿಮಾನದಲ್ಲಿ ನಟ ಕಾರ್ತಿಕ್ ಆರ್ಯನ್ ಪ್ರಯಾಣದುದ್ದಕ್ಕೂ ಬೇರೆಯವರೊಂದಿಗೂ ಸಹ ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡುತ್ತಿದ್ದರು ಎಂದು ಕೂಡ ಕಾರ್ತಿಕೇಯ ತಮ್ಮ ವಿಡಿಯೋದಲ್ಲಿ ಆರೋಪಿಸಿದ್ದಾರೆ.


Click it and Unblock the Notifications











