"ಆಕೆ ಗರ್ಭಿಣಿ ಅನ್ನೋದೆಲ್ಲ ಸುಳ್ಳು"; ದೀಪಿಕಾ 'ಬೇಬಿ ಬಂಪ್ ಫೇಕ್' ಎಂದವರಿಗೆ ಆಲಿಯಾ ತಿರುಗೇಟು
ಬಾಲಿವುಡ್‌ನ ಮೋಸ್ಟ್ ಹೈಪರ್ ಆಕ್ಟಿವ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್. ಹಲವು ವರ್ಷಗಳ ಕಾಲ ಡೇಟ್ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ತಮ್ಮ ಬದುಕಿನ ಸಂಭ್ರಮ ಕ್ಷಣಗಳನ್ನು ಎದುರು ನೋಡುತ್ತಿದೆ.
ಹೌದು, ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ವಿಷಯವೇನು ರಹಸ್ಯವಾಗಿ ಉಳಿದಿಲ್ಲ. ಸ್ವತ: ಈ ಜೋಡಿನೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯವನ್ನು ಅನೌನ್ಸ್ ಮಾಡಿತ್ತು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಮತದಾನದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಕಪ್ಟಪಟ್ಟು ನಡೆಯತ್ತಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೀಪಿಕಾ ಬಿಳಿ ಬಣ್ಣದ ಶರ್ಟ್ ಹಾಗೂ ಜೀನ್ಸ್ ತೊಟ್ಟು ಮತಗಟ್ಟೆ ಇರುವ ಸ್ಥಳಕ್ಕೆ ಬಂದಿದ್ದರು. ಈ ವೇಳೆ ನಟಿಯ ಅಸಹಜ ನಡಿಗೆ ಹಾಗೂ ಬೇಬಿ ಬಂಪ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. "ದೀಪಿಕಾ ಪಡುಕೋಣೆ ಬೇಬಿ ಬಂಪ್ ಸುಳ್ಳು" ಅಂತೆಲ್ಲ ಟೀಕೆ ಮಾಡಿದ್ದರು. ಈ ಸಂಬಂರ್ಭದಲ್ಲಿ ಆಲಿಯಾ ಭಟ್ ಸೇರಿದಂತೆ ಹಲವು ತಾರೆಯರು ದೀಪಿಕಾ ಬೆಂಬಲಕ್ಕೆ ಬಂದಿದ್ದಾರೆ.
ದೀಪಿಕಾ ಪಡುಕೋಣೆ ಬೇಬಿ ಬಂಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಕಾಮೆಂಟ್‌ಗಳ ಬಗ್ಗೆನೇ ಗಂಭೀರವಾಗಿ ಚರ್ಚೆಯಾಗುತ್ತಿದೆ. " ದೀಪಿಕಾ ಪಡುಕೋಣೆ ಗರ್ಭಿಣಿಯಾಗಿಲ್ಲ. ಸುಳ್ಳು ಹೇಳುವುದಕ್ಕೆ ನಿಲ್ಲಿಸಿ" ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ. " ಹಾಗೇ ಇನ್ನೊಬ್ಬರು " ಯಾಕೆ ದೀಪಿಕಾ ಪಡುಕೋಣೆ" ಹೀಗೆ ನಡೆಯುತ್ತಿದ್ದಾರೆ" ಅಂತ ಟ್ರೋಲ್ ಮಾಡಿದ್ದಾರೆ.

ದೀಪಿಕಾ ಬೇಬಿ ಬಂಪ್ ಮೇಲೆ ಕಣ್ಣಿಟ್ಟಿರೋ ಟ್ರೋಲಿಗರು " ದೀಪಿಕಾ ಬೇಬಿ ಬಂಪ್ ಆ ಮಟ್ಟಿಗೆ ದೊಡ್ಡಿದಿಲ್ಲ. ಆದರೂ ಯಾಕೆ ಹೀಗೆ ನಡೆಯುತ್ತಿದ್ದಾರೆ" ಅಂತೆಲ್ಲ ಸುದ್ದಿ ಟೀಕೆ ಮಾಡಿದ್ದರು. ಇದು ಸೋಶಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ದೀಪಿಕಾ ಬೆಂಬಲಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ಬಂದಿದ್ದಾರೆ. ಈ ಟ್ರೋಲ್ ಅನ್ನು ವಿರೋಧಿ ಪತ್ರಕರ್ತೆ ಫಾಯೆ ಡಿಸೋಜಾ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ಬೆಂಬಲಿಸಿದ್ದಾರೆ.
ಆಲಿಯಾ ಬೆಂಬಲಕ್ಕೆ ನೆಟ್ಟಿಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. " ಕೊನೆಗೂ ಇನ್ನೊಬ್ಬ ಮಹಿಳೆಯನ್ನು ಬೆಂಬಲಿಸುವ ಮತ್ತೊಬ್ಬ ಮಹಿಳೆಯ ನಡೆಗೆ ಅರ್ಥ ಬಂದಿದೆ. ಇಂತಹ ಪಾಸಿಟಿವ್ ಪೋಸ್ಟ್‌ಗಳನ್ನು ನೋಡುವುದಕ್ಕೆ ಖುಷಿಯಾಗುತ್ತೆ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು " ಆಲಿಯಾ ಇಂತಹ ದ್ವೇಷವನ್ನು ಎದುರಿಸಿದ ಬಳಿಕ ದೀಪಿಕಾಗೆ ಬೆಂಬಲಕ್ಕೆ ಬಂದಿರುವುದನ್ನು ನೋಡಬಹುದಾಗಿದೆ" ಎಂದಿದ್ದಾರೆ.
ನಟಿ ಶ್ರುತಿ ಸೇಠ್ ಕೂಡ ನಟಿಯನ್ನು ಬೆಂಬಲಿಸಿದ್ದು, " ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಇಂತಹ ಅಭಿಪ್ರಾಯಗಳ ಮೇಲೆ ನಡೆಯಬೇಕಿಲ್ಲ" ಎಂದು ಹೇಳಿದ್ದಾರೆ. ಇಷ್ಟೆಲ್ಲ ಕಾಮೆಂಟ್‌ಗಳ ಮಧ್ಯೆ ದೀಪಿಕಾ ಅದೇ ಬೇಬಿ ಬಂಪ್‌ನಲ್ಲಿ ತನ್ನ ಸೌಂದರ್ಯ ವರ್ಧಕ ಉತ್ಪನ್ನಗಳ ವಿಡಿಯೋದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಳದಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ.


Click it and Unblock the Notifications











