ವಿಡಿಯೋ: ಕಣ್ಣೀರು ಹಾಕಿದ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ

ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ದೂರು ನೀಡಿದ ನಂತರ ಮೊದಲ ಬಾರಿ ರಿಯಾ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ತಂದೆಯವರು ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಬಿಹಾರದ ಪಾಟ್ನಾದಲ್ಲಿ ದೂರು ದಾಖಲಿಸಿದ್ದಾರೆ. ರಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಮೋಸ, ಕಳ್ಳತನ ಪ್ರಕರಣಗಳನ್ನು ದಾಖಲಿಸಲಾಗಿದೆ.

ದೂರು ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ರಿಯಾ, ತಾವು ಮಾತನಾಡಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಟಿವಿ ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸುತ್ತಿವೆ: ರಿಯಾ

ಟಿವಿ ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸುತ್ತಿವೆ: ರಿಯಾ

ವಿಡಿಯೋ ಪ್ರಕಟಿಸಿರುವ ರಿಯಾ, ತಮ್ಮ ವಿರುದ್ಧ ಟಿವಿ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸುಳ್ಳುಗಳನ್ನು ಹೇಳಲಾಗುತ್ತಿದೆ ಎಂದಿರುವ ರಿಯಾ, ತಾವು ತಪ್ಪು ಮಾಡಿಲ್ಲವೆಂದು ಹೇಳಿದ್ದಾರೆ.

ದೇವರ ಮೇಲೆ ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ

ನನಗೆ ದೇವರ ಮೇಲೆ ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪೂರ್ಣ ನಂಬಿಕೆ ಇದೆ. ನನ್ನ ವಿರುದ್ಧ ಟಿವಿ ಮಾಧ್ಯಗಳಲ್ಲಿ ಮಾಡಲಾಗುತ್ತಿರುವ ಆರೋಪಗಳಿಗೆ ನಾನು ಪ್ರತಿಕ್ರಿಯಿಸದಂತೆ ನನ್ನ ವಕೀಲರು ಹೇಳಿದ್ದಾರೆ ಎಂದು ರಿಯಾ ಹೇಳಿದ್ದಾರೆ.

ರಿಯಾ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಕುಟುಂಬ ಒತ್ತಡ ಹೇರುತ್ತಿದೆ: ಸುಶಾಂತ್ ಗೆಳೆಯನ ಆರೋಪ
ಸತ್ಯಮೇವ ಜಯತೆ ಎಂದ ರಿಯಾ

ಸತ್ಯಮೇವ ಜಯತೆ ಎಂದ ರಿಯಾ

ಪ್ರಕರಣ ಸದ್ಯಕ್ಕೆ ನ್ಯಾಯಾಲಯದಲ್ಲಿರುವ ಕಾರಣ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಸತ್ಯವೇ ಜಯಿಸಲಿದೆ (ಸತ್ಯಮೇವ ಜಯತೆ) ಎಂದಿರುವ ರಿಯಾ, ಸತ್ಯ ಹೊರಗೆ ಬರಲೇ ಬೇಕು ಎಂದು ಹೇಳಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಸುಶಾಂತ್ ಸಾಯುವ ಕೆಲವು ದಿನಗಳ ಮುಂಚೆ ಬ್ರೇಕ್‌ಅಪ್

ಸುಶಾಂತ್ ಸಾಯುವ ಕೆಲವು ದಿನಗಳ ಮುಂಚೆ ಬ್ರೇಕ್‌ಅಪ್

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ರಿಯಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸುಶಾಂತ್ ಖಾತೆಯಲ್ಲಿದ್ದ ಭಾರಿ ಮೊತ್ತದ ಹಣವನ್ನು ರಿಯಾ ಬಳಸಿಕೊಂಡಿದ್ದರು ಎನ್ನಲಾಗಿದೆ. ಸುಶಾಂತ್ ಸಾಯುವುದಕ್ಕೆ ಕೆಲವು ದಿನಗಳ ಮುಂಚೆ ಆತನೊಂದಿಗೆ ಸಂಬಂಧ ಮುರಿದುಕೊಂಡಿದ್ದಾಗಿಯೂ ರಿಯಾ ಹೇಳಿದ್ದಾರೆ.

More from Filmibeat

English summary
Sushant Singh's girlfriend Rhea Chakraborty posted a video of her. She said truth shall prevail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X