For Quick Alerts
  ALLOW NOTIFICATIONS  
  For Daily Alerts

  ರಿಯಾ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಕುಟುಂಬ ಒತ್ತಡ ಹೇರುತ್ತಿದೆ: ಸುಶಾಂತ್ ಗೆಳೆಯನ ಆರೋಪ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ ಬಳಿಕ ಪ್ರಕರಣ ಮತ್ತಷ್ಟು ಬೆಳವಣಿಗೆ ಪಡೆದುಕೊಂಡಿದೆ.

  ಸುಶಾಂತ್ ಕುಟುಂಬದವರು ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುಶಾಂತ್ ಮನೆಯಲ್ಲಿದ್ದ ಲ್ಯಾಪ್ ಟಾಪ್, ಚಿನ್ನ, ಹಣ ಮತ್ತು ಸುಶಾಂತ್ ಮೆಡಿಕಲ್ ಪಾತ್ರಗಳನ್ನುದ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಸುಶಾಂತ್ ಸಿಂಗ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅನ್ನು ರಿಯಾ ಬಳಸುತ್ತಿದ್ದರು ಎನ್ನುವ ಆರೋಪ ರಿಯಾ ಮೇಲಿದೆ. ಈ ನಡುವೆ ಸುಶಾಂತ್ ಗೆಳೆಯ ಸಿದ್ಧಾರ್ಥ್, ಸುಶಾಂತ್ ಕುಟುಂಬದ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ..

  ಸುಶಾಂತ್ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಕೊಟ್ಟಿದ್ದರು ದೂರು!ಸುಶಾಂತ್ ಸಿಂಗ್‌ ಜೀವಕ್ಕೆ ಅಪಾಯವಿದೆ ಎಂದು ಮೊದಲೇ ಕೊಟ್ಟಿದ್ದರು ದೂರು!

  ಮುಂಬೈ ಪೊಲೀಸರಿಗೆ ಸುಶಾಂತ್ ಗೆಳೆಯನ ಇಮೇಲ್

  ಮುಂಬೈ ಪೊಲೀಸರಿಗೆ ಸುಶಾಂತ್ ಗೆಳೆಯನ ಇಮೇಲ್

  ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರವರ್ತಿ ಇಬ್ಬರ ಗೆಳೆಯ ಸಿದ್ದಾರ್ಥ್ ಸುಶಾಂತ್ ಕುಟುಂಬದ ವಿರುದ್ಧ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಮುಂಬೈ ಪೊಲೀಸರಿಗೆ ಇಮೇಲ್ ಮಾಡಿರುವ ಸಿದ್ಧಾರ್ಥ್, ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಕುಟುಂಬದವರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

  ಸುಶಾಂತ್ ಗೆಳೆಯನ ಹೇಳಿಕೆ

  ಸುಶಾಂತ್ ಗೆಳೆಯನ ಹೇಳಿಕೆ

  "ಸುಶಾಂತ್ ಕುಟುಂಬದಿಂದ 3 ಫೋನ್ ಕರೆಗಳು ಬಂದಿವೆ. ಅವರು ನನಗೆ ರಿಯಾ ಚಕ್ರವರ್ತಿ, ಸುಶಾಂತ್ ಹಣವನ್ನು ಖರ್ಚು ಮಾಡಿರುವ ಬಗ್ಗೆ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸುಶಾಂತ್ ಅವರ ಕುಟುಂಬ ಸದಸ್ಯರು, ಸಹೋದರಿ ಮೀತು ಸಿಂಗ್, ಸಂಬಂಧಿ ಒಪಿ ಸಿಂಗ್ ನನ್ನ ಜೊತೆ ಜುಲೈ 22ರಂದು ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿದ್ದಾರೆ. ಒಂದು ಅಪರಿಚಿತ ಫೋನ್ ನಂಬರ್ ಕೂಡ ಇತ್ತು. ಮತ್ತೆ 27ರಂದು ಇದೇ ರೀತಿಯ ಕರೆ ಮಾಡಿದ್ದರು. ರಿಯಾ ವಿರುದ್ಧ ಹೇಳಿಕೆ ನೀಡಿ ಎಂದು ಕೇಳಿಕೊಂಡರು. ನನಗೆ ತಿಳಿದಿಲ್ಲದ ವಿಷಯಗಳ ಕುರಿತು ಹೇಳಿಕೆ ನೀಡುವಂತೆ ಹೇಳುತ್ತಿದ್ದಾರೆ" ಎಂದು ಸುಶಾಂತ್ ಕುಟುಂಬದವರ ವಿರುದ್ಧ ಆರೋಪ ಮಾಡಿದ್ದಾರೆ.

  ನನ್ನ ಮೇಲೆ ಸುಶಾಂತ್ ಕುಟುಂಬದ ಒತ್ತಡವಿದೆ

  ನನ್ನ ಮೇಲೆ ಸುಶಾಂತ್ ಕುಟುಂಬದ ಒತ್ತಡವಿದೆ

  ರಿಯಾ ವಿರುದ್ಧ ಬಿಹಾರ್ ಪೊಲೀಸರಿಗೆ ಹೇಳಿಕೆ ನೀಡುವಂತೆ ಹೇಳಿದ್ದಾರೆ. ವಾಟ್ಸಾಪ್ ಗೆ ಅಪರಿಚಿತ ಫೋನ್ ಕರೆ ಬಂತು ಆದರೆ 40 ಸೆಕೆಂಡ್ ಗಳಲ್ಲಿ ಕಟ್ ಆಯಿತು. ಯಾವುದೆ ಹೇಳಿಕೆ ದಾಖಲಾಗಿಲ್ಲ. ಎಂದು ಸುಶಾಂತ್ ಗೆಳೆಯ ಸಿದ್ಧಾರ್ಥ್ ಪೊಲೀಸರಿಗೆ ಇಮೇಲ್ ಮಾಡಿದ್ದಾರೆ. ರಿಯಾ ವಿರುದ್ಧ ಹೇಳಿಕೆಗಳನ್ನು ಹೇಳುವಂತೆ ಮತ್ತು ದಾಖಲಿಸುವಂತೆ ಒತ್ತಡವಿದೆ ಎಂದು ಹೇಳಿದ್ದಾರೆ.

  ವಿಚಾರಣೆ ವರ್ಗಾವಣೆಗೆ ಮನವಿ

  ವಿಚಾರಣೆ ವರ್ಗಾವಣೆಗೆ ಮನವಿ

  ಬಿಹಾರದಲ್ಲಿ ದಾಖಲಾದ ಎಫ್ ಐ ಆರ್ ಅನ್ನು ಮುಂಬೈಗೆ ವರ್ಗಾಯಿಸುವಂತೆ ರಿಯಾ ಸುಪ್ರಿಂ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ತನಿಖೆಯನ್ನು ಮುಂಬೈಗೆ ವರ್ಗಾಯಿಸಿಕೊಳ್ಳಲು ರಿಯಾ ಪ್ರಯತ್ನ ಪಡುತ್ತಿದ್ದಾರೆ.

  English summary
  Sushant Singh friend Sidharth says Sushanth Family pressured him to give statement against Rhea Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X