ಆಸ್ಕರ್‌ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳಿಸಿ: ಟ್ವಿಟರ್‌ನಲ್ಲಿ ಗಂಭೀರ ಚರ್ಚೆ!

ಮುಂದಿನ ವರ್ಷ ಮಾರ್ಚ್ನಲ್ಲಿ ನಡೆಯಲಿರೊ ಆಸ್ಕರ್ ಪ್ರಶಸ್ತಿಗೆ ಭಾರತದ ಯಾವ ಸಿನಿಮಾವನ್ನು ಕಳಿಸಬೇಕು ಅನ್ನೋ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. 95ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಮಾರ್ಚ್ 2023ಯಲ್ಲಿ ನಡೆಯಲಿದೆ. ಅದಕ್ಕಾಗಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಈಗಿನಿಂದಲೇ ಭಾರತದಿಂದ ಯಾವ ಸಿನಿಮಾವನ್ನು ಕಳಿಸಬೇಕು ಎಂಬುದನ್ನು ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇತ್ತ ಸೋಶಿಯಲ್ ಮೀಡಿಯಾದಲ್ಲೂ 2023ರ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಯಾವ ಸಿನಿಮಾ ಕಳಿಸಬೇಕು ಅನ್ನೋ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಈಗಾಗಲೇ ರಾಜಮೌಳಿ ನಿರ್ದೇಶನದ RRR ಸಿನಿಮಾ ಮುಂಚೂಣಿಯಲ್ಲಿದೆ. ಅದಕ್ಕೆ ಮತ್ತೊಂದು ಸಿನಿಮಾ ಈಗ ಸೇರ್ಪಡೆಯಾಗಿದೆ.

ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಇನ್ನೂ ಆಸ್ಕರ್‌ಗೆ ಯಾವ ಸಿನಿಮಾ ಕಳಿಸಬೇಕು ಅನ್ನೋ ನಿರ್ಧಾರ ಕೈಗೊಂಡಿಲ್ಲ. ಅಷ್ಟರಲ್ಲೇ ಟ್ವಿಟರ್‌ನಲ್ಲಿ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಯಾವ್ಯಾವ ಸಿನಿಮಾವನ್ನು ಕಳಿಸಿಕೊಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಹೊಸದಾಗಿ ಅಭಿಯಾನ ಶುರು ಮಾಡಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್' ಆಸ್ಕರ್‌ಗೆ ಕಳಿಸಿ

'ದಿ ಕಾಶ್ಮೀರ್ ಫೈಲ್ಸ್' ಆಸ್ಕರ್‌ಗೆ ಕಳಿಸಿ

ಕಳೆದ ಹಲವು ದಿನಗಳಿಂದ ಆಸ್ಕರ್ ಪ್ರಶಸ್ತಿ ಬಗ್ಗೆನೇ ಚರ್ಚೆಯಾಗುತ್ತಿದೆ. ರಾಜಮೌಳಿ ನಿರ್ದೇಶನದ RRR ಸಿನಿಮಾ ಆಸ್ಕರ್‌ಗೆ ಹೋಗಬೇಕು ಅನ್ನೋ ಅಭಿಯಾನ ಶುರುವಾಗುತ್ತಿದ್ದಂತೆ 'ದಿ ಕಾಶ್ಮೀರ್ ಫೈಲ್ಸ್' ಹೆಸರು ಕೂಡ ಮುಂಚೂಣಿಯಲ್ಲಿದೆ. ಟ್ವಿಟರ್‌ನಲ್ಲಿ ಈ ಬಗ್ಗೆ ಅಭಿಯಾನವೇ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ 'ದಿ ಕಾಶ್ಮೀರ್ ಫೈಲ್ಸ್ ಫಾರ್ ಆಸ್ಕರ್' ಅಂತ ನೆಟ್ಟಿರಿಗರು ಅಭಿಯಾನ ಆರಂಭಿಸಿದ್ದಾರೆ.

ಕಾಶ್ಮೀರ್ ಫೈಲ್ಸ್ ಆಸ್ಕರ್‌ಗೆ ಯಾಕೆ?

ಕಾಶ್ಮೀರ್ ಫೈಲ್ಸ್ ಆಸ್ಕರ್‌ಗೆ ಯಾಕೆ?

ಟ್ವಿಟರ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಆಸ್ಕರ್ ಹೋಗಬೇಕು ಅನ್ನೋ ಬಗ್ಗೆ ಸಿಕ್ಕಾಪಟ್ಟೆ ಜೋರಾಗಿಯೇ ಚರ್ಚೆಯಾಗುತ್ತಿದೆ. ಒಬ್ಬರು " ಜನರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಆಸ್ಕರ್‌ನಲ್ಲಿ ನೋಡಲು ಇಷ್ಟ ಪಡುತ್ತಾರೆ. ಇದೊಂದು ಅದ್ಭುತ ಸಿನಿಮಾ. ನೀವು ಎಷ್ಟು ಅಂತ ಕಾಲ್ಪನಿಕ ಕಥೆಗಳಿಗೆ ಅವಾರ್ಡ್‌ಗಳನ್ನುಕೊಡುತ್ತೀರಿ. ದಿ ಕಾಶ್ಮೀರ್ ಫೈಲ್ಸ್ ಅಂತ ಸಿನಿಮಾ ಮಾಡುವುದಕ್ಕೆ ಗಟ್ಸ್ ಬೇಕು" ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು. " ಕಾಶ್ಮೀರಿ ಪಂಡಿತರ ವಿರುದ್ಧ ಬಿಂಬಿಸಲಾಗಿದ್ದ ಸುಳ್ಳು ಸುದ್ದಿಯನ್ನುಒಡೆದಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಆದ ಈ ಬೆಳವಣಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗೇಕಿದೆ." ಎಂದು ಕಮೆಂಟ್ ಮಾಡಿದ್ದಾರೆ.

RRR ಆಸ್ಕರ್‌ಗೆ ಹೋಗಬೇಕು

RRR ಆಸ್ಕರ್‌ಗೆ ಹೋಗಬೇಕು

'ದಿ ಕಾಶ್ಮೀರ್ ಫೈಲ್ಸ್' ಆಸ್ಕರ್‌ಗೆ ಹೋಗಬೇಕು ಅಂತ ಅಭಿಯಾನ ಶುರುವಾಗುವುದಕ್ಕೂ ಮುನ್ನ RRR ಹಾಟ್ ಟಾಪಿಕ್ ಆಗಿತ್ತು. 'RRR ಫಾರ್ ಆಸ್ಕರ್' ಅಂತ ಹ್ಯಾಶ್‌ ಟ್ಯಾಗ್ ಹಾಕಿ ಅಭಿಯಾನವನ್ನು ಶುರು ಮಾಡಿದ್ದರು. ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತಷ್ಟೇ ಅಲ್ಲ. ಪಾಶ್ಚಿಮಾತ್ಯ ದೇಶದ ಜನರು ಕೂಡ ಇಷ್ಟ ಪಟ್ಟಿದ್ದಾರೆ. ಹಾಲಿವುಡ್‌ ಫಿಲ್ಮ್ ಮೇಕರ್‌ಗಳಿಗೂ ಈ ಸಿನಿಮಾ ಇಷ್ಟ ಆಗಿದೆ. ಹೀಗಾಗಿ ಭಾರತದಿಂದ RRR ಅಧಿಕೃತ ಆಯ್ಕೆ ಆಗಬೇಕು ಅನ್ನೋ ಅಭಿಯಾನ ಶುರುವಾಗಿದೆ.

ಆಸ್ಕರ್‌ಗೆ ಹೋಗುತ್ತಾ ಕಾಶ್ಮೀರ್ ಫೈಲ್ಸ್

ಆಸ್ಕರ್‌ಗೆ ಹೋಗುತ್ತಾ ಕಾಶ್ಮೀರ್ ಫೈಲ್ಸ್

'ದಿ ಕಾಶ್ಮೀರ್ ಫೈಲ್ಸ್' ಹಾಗೂ RRR ಎರಡೂ ಸಿನಿಮಾಗಳ ಬಗ್ಗೆ ಅಭಿಯಾನವೇನೋ ಶುರುವಾಗಿದೆ. ಆದರೆ, ಈ ಎರಡೂ ಸಿನಿಮಾಗಳಲ್ಲಿ ಒಂದು ಭಾರತವನ್ನು ಪ್ರತಿನಿಧಿಸುತ್ತಾ? ಇಲ್ಲಾ ಬೇರೆ ಸಿನಿಮಾವನ್ನೇ ಆಯ್ಕೆ ಮಾಡಲಾಗುತ್ತಾ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

More from Filmibeat

English summary
Twitter Debates About RRR And The Kashmir Files For India's Official Entry For Oscars, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X