ಸಲ್ಮಾನ್ ಖಾನ್ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನ; ಇಬ್ಬರು ವ್ಯಕ್ತಿಗಳ ಬಂಧನ
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಆಗಾಗ ಜೀವ ಬೆದರಿಕೆ ಬರುತ್ತಿದೆ. ಲಾರೆನ್ಸ್ ಬಿಷ್ನೋಯಿ ಗ್ಯಾಂಗ್ ಸಲ್ಮಾನ್ ಖಾನ್ ವಿರುದ್ಧ ತಿರುಗಿಬಿದ್ದಿದ್ದು, ನಟನ ಜೀವದ ಬಗ್ಗೆ ಆಗಾಗ ಆತಂಕ ಎದುರಾಗುತ್ತಲೇ ಇರುತ್ತೆ. ಇದೇ ಬೆನ್ನಲ್ಲೇ ಇಬ್ಬರು ವ್ಯಕ್ತಿಗಳು ಸಲ್ಮಾನ್ ಖಾನ್ ಫಾರ್ಮ್ ಹೌಸ್‌ಗೆ ನುಗ್ಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಇಬ್ಬರು ವ್ಯಕ್ತಿಗಳು ಪನ್ವೆಲ್‌ನಲ್ಲಿರುವ ಸಲ್ಮಾನ್ ಖಾನ್ ಫಾರ್ಮ್ ಹೌಸ್‌ಗೆ ನುಗ್ಗಲು ಯತ್ನಿಸಿದ್ದರು. ಫಾರ್ಮ್‌ಹೌಸ್ ಬೌಂಡರಿ ಪಕ್ಕದಲ್ಲಿದ್ದ ಮರವನ್ನು ಹತ್ತಿ ಕಾಂಪೌಂಡ್ ಹಾರಿ ಕೆಳಗೆ ಇಳಿಯುವುದಕ್ಕೆ ಯತ್ನಿಸಿದ್ದರು. ಇವರನ್ನು ಪೊಲೀಸರು ಬಂಧಿಸಿದ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತ ಇಬ್ಬರೂ ವ್ಯಕ್ತಿಗಳೂ ಬೇರೆ ಬೇರೆ ರಾಜ್ಯದಿಂದ ಮುಂಬೈಗೆ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಲು ಬಂಧಿದ್ದರು ಎನ್ನಲಾಗಿದೆ. ಅಜೇಶ್ ಕುಮಾರ್ ಓಂ ಪ್ರಕಾಶ್ ಗಿಲ್ ಹಾಗೂ ಗುರುಸೇವಕ್ ಸಿಂಗ್ ತೇಜ್‌ಸಿಂಗ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಸದ್ಯ ಬಂಧಿಸಲಾಗಿದ್ದು, ಪೊಲೀಸರ ಕಸ್ಟಡಿಯಲ್ಲಿ ಇದ್ದಾರೆ.
ಅಂದ್ಹಾಗೆ, ಈ ಪ್ರಕರಣ ಜನವರಿ 4ರಂದು ನಡೆದಿದ್ದು, ನಾಲ್ಕು ದಿನಗಳ ಬಳಿಕ ಬೆಳಕಿಗೆ ಬಂದಿದೆ. " ಪನ್ವೆಲ್‌ನಲ್ಲಿರುವ ಅರ್ಪಿತಾ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ್ದರಿಂದ ಇಬ್ಬರು ವ್ಯಕ್ತಿಗಳ ವಿರುದ್ಧ ಪನ್ವೆಲ್ ಪೊಲೀಸ್ ಠಾಣೆಯಲ್ಲಿ ಕೇಸ್ ಅನ್ನು ದಾಖಲಿಸಲಾಗಿದೆ. ಹಾಗೇ ಮುಂದಿನ ತನಿಖೆ ನಡೆಯುತ್ತಿದೆ" ಎಂದು ಇನ್ಸ್‌ಪೆಕ್ಟರ್ ಅನಿಲ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಬ್ಬರು ವ್ಯಕ್ತಿಗಳನ್ನು ಹಿಡಿದಾಗ, ನಾವು ಸಲ್ಮಾನ್ ಖಾನ್ ಅಭಿಮಾನಿಗಳಾಗಿದ್ದು, ಅವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ಹೇಳಿದ್ದರು. ಆದರೆ, ಅವರ ಆಧಾರ್ ಕಾರ್ಡ್ ಅನ್ನು ಕೇಳಿದಾಗ, ಇಬ್ಬರೂ ನಕಲಿ ದಾಖಲೆಗಳನ್ನು ನೀಡಿದ್ದರು. ಸಲ್ಮಾನ್ ಖಾನ್‌ಗೆ ಕಳೆದ ಕೆಲವು ದಿನಗಳಿಂದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಇದೆ. ಹೀಗಾಗಿ ಬಾಲಿವುಡ್ ನಟನಿಗೆ Y+ ಸೆಕ್ಯೂರಿಟಿಯನ್ನು ನೀಡಲಾಗಿದೆ.
2023 ಮಾರ್ಚ್ ತಿಂಗಳಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯೊಡ್ಡಿ ಮೇಲ್ ಅನ್ನು ಕಳುಹಿಸಲಾಗಿತ್ತು. ಇದು ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್‌ನ ಸದಸ್ಯರೇ ಕಳುಹಿಸಿದ್ದು ಎಂದು ವರದಿಯಾಗಿದೆ. ಸದ್ಯ ಲಾರೆನ್ಸ್ ಬಿಷ್ಣೋಯಿ ಪಂಜಾಬ್ ಜೈಲಿನಲ್ಲಿದ್ದು, ಪಂಜಾಬಿ ಗಾಯಕ ಸಿದು ಮೂಸೆ ವಾಲ ಹತ್ಯೆಯ ಹಿಂದೆ ಈತನದ್ದೇ ಕೈವಾಡವಿದೆ ಎಂಬ ಶಂಕೆಯಿದೆ.


Click it and Unblock the Notifications











