Don't Miss!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- News
Budget 2023; ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಡೇಟಿಂಗ್: ನೆಟ್ಟಿಗರ ಪ್ರತಿಕ್ರಿಯೆ ಅತೀ ಭಯಂಕರ!
ಸಲ್ಮಾನ್ ಖಾನ್ ಮದುವೆ ವಿಷಯ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತೆ. ಇತ್ತ ಸಲ್ಮಾನ್ ಖಾನ್ ಮದುವೆ ಆಗಲ್ಲ. ಬಾಲಿವುಡ್ ಮಂದಿ ಸುಮ್ಮನೆ ಇರೋದಿಲ್ಲ. ಮದುವೆಯಾಗೋ ವಯಸ್ಸು ಮೀರಿದ್ದರೂ ಸಲ್ಮಾನ್ ಖಾನ್ ಮದುವೆ ಮ್ಯಾಟರ್ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ.
ಈಗ ಮತ್ತೆ ಸಲ್ಮಾನ್ ಖಾನ್ ಡೇಟಿಂಗ್ ಮ್ಯಾಟರ್ ಬಾಲಿವುಡ್‌ನಲ್ಲಿಸ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಪೂಜಾ ಹೆಗ್ಡೆ. ಫಿಲ್ಮ್ ಕ್ರಿಟಿಕ್ ಅಂತ ಹೇಳಿಕೊಳ್ಳುವ ಉಮೈರ್ ಸಂಧು ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದರು. ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಬಾಂಬ್ ಸಿಡಿಸಿದ್ದರು. ಈಗ ಅದೇ ವಿಚಾರದ ಬಗ್ಗೆ ಸುದ್ದಿ ಹರಿದಾಡುತ್ತಿದೆ.
'ಸಲ್ಮಾನ್
ಖಾನ್
ಒಬ್ಬ
ಮಹಿಳಾ
ಪೀಡಕ':
ಮಾಜಿ
ಗೆಳತಿ
ಆರೋಪ
ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ರಣ್‌ವೀರ್ ಸಿಂಗ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾ 'ಸರ್ಕಸ್' ಬಿಡುಗಡೆ ಸಜ್ಜಾಗಿದ್ದು, ರೋಹಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದರ ಹಿಂದೆನೇ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ನೆಟ್ಟಿಗರು ಕೂಡ ಸಖತ್ತಾಗಿಯೇ ಕಮೆಂಟ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಡೇಟಿಂಗ್?
ಓವರ್‌ಸೀಸ್ ಸೆನ್ಸಾರ್ ಬೋರ್ಡ್ ಸದಸ್ಯ ಹಾಗೂ ಸೆಲ್ಫ್ ಕ್ರಿಟಿಕ್ ಉಮೈರ್ ಸಂಧು ಟ್ವಿಟರ್‌ನಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಟ್ವೀಟ್ ಮಾಡಿದ್ದರು. " ನಗರದಲ್ಲಿ ಹೊಸ ಜೋಡಿ ಪ್ರತ್ಯಕ್ಷ.. ಮೆಗಾಸ್ಟಾರ್ ಸಲ್ಮಾನ್ ಖಾನ್ ನಟಿ ಪೂಜಾ ಹೆಗ್ಡೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಪ್ರೊಡಕ್ಷನ್ ಹೌಸ್ ಮುಂದಿನ ಎರಡು ಸಿನಿಮಾಗಳಿಗೆ ಪೂಜಾ ಹೆಗ್ಡೆ ಜೊತೆ ಸಹಿ ಮಾಡಿದ್ದಾರೆ. ಇಬ್ಬರೂ ಇತ್ತೀಚೆಗೆ ಒಟ್ಟಿಗೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಸಲ್ಮಾನ್ ಖಾನ್ ಆತ್ಮೀಯರು ಈ ವಿಷಯವನ್ನು ಖಚಿತ ಪಡಿಸಿದ್ದಾರೆ." ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರಿಂದ ಉಮೈರ್ ಸಂಧು ಟ್ರೋಲ್
ಉಮೈರ್ ಸಂಧು ಟ್ವೀಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಡೇಟಿಂಗ್ ವಿಚಾರವನ್ನೇ ಇಟ್ಟುಕೊಂಡು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಒಬ್ಬರಂತೂ ಟಾಲಿವುಡ್ ನಿರ್ದೇಶಕ ಹಾಗೂ ಪೂಜಾ ಹೆಗ್ಡೆ ನಗುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ, " ಇನ್ನೊಂದು ಕಡೆ ತ್ರಿವಿಕ್ರಮ್ ನಗುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಸಲ್ಮಾನ್ ಖಾನ್ ತಮ್ಮ ಜೀವಿತಾವಧಿಯಲ್ಲಿ ಮದುವೆ ಆಗುವುದಿಲ್ಲ. ಫಾರ್ಮ್ ಹೌಸ್ ಫ್ರೆಂಡ್‌ಗಳನ್ನು ಮಾತ್ರ ಮಾಡಿಕೊಳ್ಳುತ್ತಾರೆ." ಎಂದು ಕೆಮೆಂಟ್ ಮಾಡಿದ್ದಾರೆ.

ಪೂಜಾ ಹೆಗ್ಡೆ ಸ್ಮಲ್ಮಾನ್ ಖಾನ್ ಮಗಳಷ್ಟು ವಯಸ್ಸು
ಮಜವಾಗಿರೋ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. " ಎರಡು ಸಿನಿಮಾಗೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದಾರೆ ಅಂದರೆ, ಹೆಚ್ಚು ಸಮಯ ಕಳೆಯಲೇ ಬೇಕು" ಅಂತ ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು " ಪೂಜಾ ಹೆಗ್ಡೆಗೆ ಸಲ್ಮಾನ್ ಖಾನ್ ಮಗಳಷ್ಟು ವಯಸ್ಸು. ಈ ಬಾಲಿವುಡ್ ಎಷ್ಟು ಅಸಹ್ಯ ಹುಟ್ಟಿಸುತ್ತಿದೆ. ಆಮೇಲೆ ಪ್ರೀತಿ ಕುರುಡು ಅಂತ ಹೇಳುತ್ತೆ." ಅಂತ ನೆಟ್ಟಿಗರೊಬ್ಬರು ಅಸಮಧಾನ ಹೊರಹಾಕಿದ್ದಾರೆ. ಹೀಗೆ ಚಿತ್ರ ವಿಚಿತ್ರವಾದ ಕಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ಈ ಬಗ್ಗೆ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ ಸೈಲೆಂಟ್ ಆಗಿದ್ದಾರೆ.

ಒಂದೇ ಸಿನಿಮಾದಲ್ಲಿ ಸಲ್ಮಾನ್, ಪೂಜಾ ನಟನೆ
ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಇಬ್ಬರೂ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ ಎನ್ನಲಾಗಿದೆ. ಆದರೆ, ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಡೇಟಿಂಗ್ ಮ್ಯಾಟರ್ ಸುಳ್ಳು. ಸುಮ್ಮನೇ ಪ್ರಚಾರಕ್ಕಾಗಿ ಉಮೈರ್ ಸಂಧು ಇಂತಹ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ ಕೆಲವು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ಬಾಲಿವುಡ್‌ನಲ್ಲಿ ಎದ್ದಿರೋ ಹೊಸ ರೂಮರ್ ಬಗ್ಗೆ ಈ ಜೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನು ಇಬ್ಬರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.