"ತಂದೆ ಇಷ್ಟ ಬಂದಂತೆ ಹೊಡೀತಿದ್ರು.. ಪೋರ್ನ್ ಸ್ಟಾರ್ ಅಂತ ಕರೆದ್ರು": ಉರ್ಫಿ ಜಾವೇದ್ ನೋವಿನ ಕಥೆ

ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಚಿತ್ರ ವಿಚಿತ್ರ ಡ್ರೆಸ್‌ಗಳಿಂದಲೇ ವಿಶ್ವದಾದ್ಯಂತ ಗಮನ ಸೆಳೆಯುತ್ತಿದ್ದಾರೆ. ಇನ್ನೊಂದು ಕಡೆ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಸ್ಟಾರ್‌ಗಳು ಕೂಡ ಈಕೆಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಉರ್ಫಿ ಜಾವೇದ್ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅದರಲ್ಲೂ ಹಿಂದಿ ಬಿಗ್‌ಬಾಸ್ ಓಟಿಟಿಯಲ್ಲಿ ಕಂಡ ಬಳಿಕ ಉರ್ಫಿ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದಾರೆ. ಇವರ ಧರಿಸುವ ಉಡುಪು, ಫ್ಯಾಷನ್ ಸೆನ್ಸ್ ವಿಚಾರವಾಗಿ ಸದಾ ವಿವಾದಕ್ಕೆ ಸಿಲುಕಿತ್ತಲೇ ಇರುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ತನ್ನಿಷ್ಟ ಉಡುಗೆಯನ್ನು ಧರಿಸಿ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಾರೆ.

Urfi Javed Reveals her father Called Adult Star and Physically Abused

ತನ್ನ ಫ್ಯಾಷನ್ ಸೆನ್ಸ್‌ನಿಂದಲೇ ವಿವಾದಕ್ಕೆ ಒಳಗಾಗಿರೋ ಉರ್ಫಿ ಜಾವೇದ್ ಹಿನ್ನೆಲೆಯೇನು ಅನ್ನೋದು ಹಲವರಿಗೆ ಗೊತ್ತಿಲ್ಲ. ಇತ್ತೀಚೆಗೆ ತನ್ನ ಬಾಲ್ಯ ಹೇಗಿತ್ತು? ಅನ್ನೋದನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ತನ್ನ ಸ್ವಂತ ತಂದೆಯೇ ಪೋರ್ನ್ ಸ್ಟಾರ್ ಎಂದು ಕರೆದಿದ್ದರು ಎಂದು ಹೇಳಿಕೊಂಡಿದ್ದಾರೆ. ಉರ್ಫಿ ತನ್ನ ಹಾಗೂ ಬಾಲ್ಯದ ಬಗ್ಗೆ ರಿವೀಲ್ ಮಾಡಿದ ವಿಷಯಗಳು ಇಲ್ಲಿವೆ.

17ನೇ ವರ್ಷಕ್ಕೆ ಮನೆ ಬಿಟ್ಟು ಬಂದೆ

ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಉರ್ಫಿ ಜಾವೇದ್ ಇತ್ತೀಚೆಗೆ 'ಹುಮನ್ಸ್ ಆಫ್ ಬಾಂಬೆ'ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಉರ್ಫಿ ಜಾವೇದ್ ತನ್ನ ಬದುಕಿನ ಕರಾಳದಿನಗಳನ್ನು ನೆನೆಸಿಕೊಂಡಿದ್ದಾರೆ. 17ನೇ ವಯಸ್ಸಿಗೆ ಮನೆಬಿಟ್ಟು ಬಂದಿದ್ದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Urfi Javed Reveals her father Called Adult Star and Physically Abused

ಇದಕ್ಕೆ ಕಾರಣ ಆಕೆಯ ಒಂದು ಫೋಟೊವನ್ನು ಯಾರೋ ಕಿಡಿಗೇಡಿಗಳು ಪೋರ್ನ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ಕರಾಳ ಬದುಕಿನ ಆರಂಭ ಆಗಿತ್ತು ಎಂಬುವುದನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿಯ ಜಾವೇದ್ ಹೇಳಿಕೊಂಡಿದ್ದಾರೆ.

"ಪೋರ್ನ್ ಸೈಟ್‌ನಲ್ಲಿ ನನ್ನ ಫೋಟೋ ಹಾಕಿದ್ರು"

ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ಗೆ ಆಗ 15 ವರ್ಷ. ಆ ವೇಳೆ ಯಾರೋ ಕಿಡಿಗೇಡಿಗಳು ಆಕೆಯ ಫೋಟೊವನ್ನು ಪೋರ್ನ್ ವೆಬ್‌ಸ್ಟೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇಲ್ಲಿಂದ ಆಕೆಯ ಬದುಕು ದುಸ್ತರವಾಯ್ತು ಎಂದು ಉರ್ಫಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.

"ನನಗಾಗ ಕೇವಲ 15 ವರ್ಷ. ಯಾರೋ ಕಿಡಿಗೇಡಿಗಳು ನನ್ನ ಫೋಟೊವನ್ನು ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದೊಂದು ಸಾಮಾನ್ಯ ಫೋಟೊ ಆಗಿತ್ತು. ಟ್ಯೂಬ್ ಟಾಪ್ ಧರಿಸಿದ ಫೋಟೊವನ್ನು ನಾನು ಫೇಸ್‌ಬುಕ್‌ ಪ್ರೊಫೈಲ್ ಪಿಕ್ಚರ್ ಮಾಡಿದ್ದೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಪೋರ್ನ್ ಸೈಟ್‌ಗೆ ಹಾಕಿದ್ದರು" ಎಂದು ಉರ್ಫಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನನ್ನ ತಂದೆನೂ ಪೋರ್ನ್ ಸ್ಟಾರ್ ಅಂದ್ರು"

ಫೋಟೊ ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಆಗುತ್ತಿದ್ದಂತೆ ಎಲ್ಲರಿಗೂ ವಿಷಯ ತಿಳಿದಿತ್ತು. ಎಲ್ಲರೂ ಬೈಯ್ಯುವುದಕ್ಕೆ ಶುರು ಮಾಡಿದ್ದರು. ಪೋರ್ನ್ ಸ್ಟಾರ್ ಅಂತ ಕರೆಯಲು ಆರಂಭಿಸಿದ್ದರು. "ವಿಡಿಯೋ ಎಲ್ಲಿ ಅಂತ ಕೇಳಿದ್ರೂ? ಅವರು ಇಲ್ಲಾ ನೀನು ಪೋರ್ನ್ ಸ್ಟಾರ್ ಅಂತಲೇ ಕರೆಯುತ್ತಿದ್ದರು" ಎಂದು ನೋವು ಹೇಳಿಕೊಂಡಿದ್ದಾರೆ.

"ನನ್ನ ತಂದೆ ಕೂಡ ನಾನು ಪೋರ್ನ್ ಸ್ಟಾರ್ ಅಂತ ಹೇಳಿಕೊಂಡು ತಿರುಗಾಡಿದ್ದರು. ಪೋರ್ನ್ ಸೈಟ್‌ನವರು 50 ಲಕ್ಷ ಆಫರ್ ಕೊಟ್ಟಿದ್ದಾರೆ ಎಂದು ಎಲ್ಲರ ಬಳಿ ಹೇಳಿಕೊಂಡು ತಿರುಗಾಡಿದ್ದರು. ಈ ಮೂಲಕ ಸಹಾನುಭೂತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಎಂದೆನಿಸುತ್ತೆ. ಎರಡು ವರ್ಷ ನನಗೆ ಚಿತ್ರ ಹಿಂಸೆ ನೀಡಿದ್ರು. ನನ್ನ ತಂದೆನೇ ನನಗೆ ಹೊಡೆದ್ರು. ಯಾವುದೇ ತಪ್ಪಿಲ್ಲದಿದ್ದರೂ ನಾನು ಇಲ್ಲಿ ತಪ್ಪಿತಸ್ಥಳಾಗಿದ್ದೆ." ಎಂದು ಉರ್ಫಿ ಜಾವೇದ್ ನೋವಿನ ಕಥೆಯನ್ನು ಹಂಚಿಕೊಂಡಿದ್ದಾಳೆ.

More from Filmibeat

English summary
Urfi Javed revealed mental and physical childhood memory with her father,. Also reveals father called her porn star, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X