'ರಂಗೀಲಾ' ಬಳಿಕ ಜನರು ನನ್ನನ್ನು ಸೆಕ್ಸ್ ಬೊಂಬೆಯಂತೆ ಕಂಡಿದ್ದರು: ನನ್ನ ನಟನೆಯನ್ನು ಗೌರವಿಸಲಿಲ್ಲ ಎಂದ ಊರ್ಮಿಳಾ

ರಾಮ್‌ಗೋಪಾಲ್ ವರ್ಮಾ ನಿರ್ದೇಶಿಸಿದ್ದ 'ರಂಗೀಲಾ' ಬಾಲಿವುಡ್ ದಿಕ್ಕನೇ ಬದಲಿಸಿದ ಸಿನಿಮಾ. ಇಂದಿನ ಪೀಳಿಗೆಯವರಿಗೂ 'ರಂಗೀಲಾ' ಸಿನಿಮಾ ವಿಶೇಷ ಒಲವಿದೆ. ಊರ್ಮಿಳಾ ಮಾತೋಂಡ್ಕರ್, ಆಮಿರ್ ಖಾನ್, ಜಾಕಿ ಶ್ರಾಫ್ ಈ ಮೂವರಿಗೆ ಭರ್ಜರಿ ಹಿಟ್ ಕೊಟ್ಟ ಚಿತ್ರವಿದು. ಆದರೆ ಈ ಸಿನಿಮಾ ತೆರೆಕಂಡ ಬಳಿಕ ಜನರು ಊರ್ಮಿಳಾ ಮಾತೋಂಡ್ಕರ್‌ರನ್ನು ನೋಡಿದ ರೀತಿ ಬಗ್ಗೆ ಇಂದಿಗೂ ಬೇಸರವಿದೆ.

ಊರ್ಮಿಳಾ ಮಾತೋಂಡ್ಕರ್‌ ಈಗ ಸಿನಿಮಾದಲ್ಲಿ ನಟಿಸದೆ ಇರಬಹುದು. ಆದರೆ, 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ತನ್ನದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಊರ್ಮಿಳಾ ಮಾದಕ ನೋಟ, ಬೋಲ್ಡ್ ಕ್ಯಾರೆಕ್ಟರ್, ಹಾಟ್ ಡ್ಯಾನ್ಸ್‌ನಿಂದ ಯುವಕರ ಮನಸ್ಸು ಗೆದ್ದಿದ್ದ ನಟಿ ಈಕೆ. ಊರ್ಮಿಳಾ ಬಾಲಿವುಡ್ ಮಂದಿಗೆ ಒಂಥರಾ ಎಂಟರ್ಟೈನ್ಮಂಟ್ ಪ್ಯಾಕೇಜ್ ಇದ್ದಂತೆ. ಈ ಕಾರಣಕ್ಕೆ ಊರ್ಮಿಳಾ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ರಂಗೀಲಾ' ಸಿನಿಮಾ ಬಳಿಕ ಜನರು ಈಕೆಯನ್ನು ಟ್ರೀಟ್ ಮಾಡಿದ ರೀತಿ ಹೇಗಿತ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

 'ರಂಗೀಲಾ'ದಲ್ಲಿ ಊರ್ಮಿಳಾ ಸೆಕ್ಸ್ ಬೊಂಬೆ

'ರಂಗೀಲಾ'ದಲ್ಲಿ ಊರ್ಮಿಳಾ ಸೆಕ್ಸ್ ಬೊಂಬೆ

'ರಂಗೀಲಾ' ಬಾಲಿವುಡ್‌ನಲ್ಲಿ ಸೂಪರ್‌ ಸಕ್ಸಸ್ ಕಂಡ ಸಿನಿಮಾಗಳಲ್ಲೊಂದು. 1995ರಲ್ಲಿ ಬಾಲಿವುಡ್‌ ಬಾಕ್ಸಾಫೀಸ್ ಅನ್ನೇ ಈ ಸಿನಿಮಾ ಚಿಂದಿ ಉಡಾಯಿಸಿತ್ತು. ಆಗಿನ ಕಾಲಕ್ಕೆ ಕೇವಲ 4.5 ಕೋಟಿಯಲ್ಲಿ ನಿರ್ಮಾಣಗೊಂಡ ಸಿನಿಮಾ ಸುಮಾರು 35 ಕೋಟಿ ಲೂಟಿ ಮಾಡಿತ್ತು. ಇಷ್ಟೊಂದು ಯಶಸ್ಸು ಕಂಡ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್‌ ಬಹುಮುಖ್ಯ ಭಾಗವಾಗಿದ್ದರು. ಜಾಕಿಶ್ರಾಫ್, ಆಮಿರ್ ಖಾನ್ ಅಂತಹ ದಿಗ್ಗಜರೇ ಇದ್ದರೂ, ಊರ್ಮಿಳಾ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಕೆ ಸಿಗಬೇಕಿದ್ದ ಗೌರವ, ಸಮ್ಮಾನ ಮಾತ್ರ ಸಿಕ್ಕಿರಲಿಲ್ಲ. 'ರಂಗೀಲಾ' ಬಿಡುಗಡೆ ಬಳಿಕ ತನ್ನನ್ನು ಸೆಕ್ಸ್ ಗೊಂಬೆಯಂತೆ ಬಿಂಬಿಸಿದ್ದರು ಎಂದು ಸ್ವತಃ ಊರ್ಮಿಳಾ ಇಟಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

 'ನಟನೆಗೂ ನನಗೂ ಸಂಬಂಧವಿಲ್ಲ ಎಂದರು'

'ನಟನೆಗೂ ನನಗೂ ಸಂಬಂಧವಿಲ್ಲ ಎಂದರು'

'ರಂಗೀಲಾ' ಸಿನಿಮಾ ಬಳಿಕ ಜನರು ಊರ್ಮಿಳಾರನ್ನು ಹೇಗೆ ಕಾಣುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. "ರಂಗೀಲಾ ಬಳಿಕ ಜನರು ನಾನು ಸೆಕ್ಸ್ ಬೊಂಬೆಯಂತೆ ಕಾಣಲು ಈ ಪಾತ್ರ ಮಾಡಿದ್ದೇನೆ. ನಟನೆಗೂ ನನಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಕಂಡಿದ್ದರು. ಈ ಸಿನಿಮಾದಲ್ಲಿ ಬರುವ 'ಹಾಯ್ ರಾಮ್' ಹಾಡಿನಲ್ಲಿ ನಾನು ಪರ್ಫಾಮೆನ್ಸ್ ಕೊಟ್ಟಿಲ್ಲವೆಂದು ಹೇಗೆ ಹೇಳಲು ಸಾಧ್ಯ? ಕೇವಲ ಭಾವನಾತ್ಮಕ ದೃಶ್ಯಗಳಲ್ಲಿ ನಟಿಸುವುದೇ ನಟನೆನಾ? ತೆರೆಮೇಲೆ ಸೆಕ್ಸಿಯಾಗಿ ಕಾಣಿಸಿಕೊಳ್ಳುವುದಕ್ಕೂ ನಟನೆ ಮಾಡಬೇಕು." ಎಂದು ಊರ್ಮಿಳಾ ತನ್ನ ಹಳೆ ದಿನಗಳನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.

 'ನನ್ನ ಬಗ್ಗೆ ಒಂದೊಳ್ಳೆ ಪದ ಬರೆಯಲಿಲ್ಲ'

'ನನ್ನ ಬಗ್ಗೆ ಒಂದೊಳ್ಳೆ ಪದ ಬರೆಯಲಿಲ್ಲ'

"ರಂಗೀಲಾ ಅಂತ ದೊಡ್ಡ ಯಶಸ್ಸಿನ ಸಿನಿಮಾದ ಭಾಗವಾಗಿದ್ದೆ. ನನಗೆ ಅವಾರ್ಡ್ ಇರಲಿ, ನನ್ನ ಬಗ್ಗೆ ಒಂದೊಳ್ಳೆ ಪದವನ್ನು ಬರೆದಿಲ್ಲ. ನನ್ನ ಬಟ್ಟೆ, ನನ್ನ ಕೂದಲು, ಎಲ್ಲದಕ್ಕೂ ಭೇಷ್ ಅಂದರು. ಆದರೆ ನನ್ನ ಬಗ್ಗೆ ಮಾತ್ರ ಯಾರೂ ಬರೆಯಲೇ ಇಲ್ಲ." ಎಂದು 95ರಲ್ಲಿ 'ರಂಗೀಲಾ' ಸಿನಿಮಾ ಬಿಡುಗಡೆಯಾದಾಗ, ಊರ್ಮಿಳಾ ಮಾತೋಂಡ್ಕರ್‌ ಬಾಲಿವುಡ್ ಹಾಗೂ ವಿಮರ್ಶಕರು ಹೇಗೆ ಟ್ರೀಟ್ ಮಾಡಿದ್ದರು ಎಂಬುದನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

 '13 ಫ್ಲಾಪ್ ಕೊಟ್ಟವರನ್ನ ನಟಿಯರು ಎಂದ್ರು'

'13 ಫ್ಲಾಪ್ ಕೊಟ್ಟವರನ್ನ ನಟಿಯರು ಎಂದ್ರು'

ಊರ್ಮಿಳಾ ತಮ್ಮ ಅನುಭವವನ್ನು ಇಲ್ಲಿಗೆ ನಿಲ್ಲಿಸಿಲ್ಲ. ಆಕೆಯ ನಟನೆಯ ಹಾಗೂ ವೃತ್ತಿ ಬದುಕಿನ ಬಗ್ಗೆ ಕಾಲೆಳೆದ ಹಲವು ಸನ್ನಿವೇಶಗಳನ್ನು ವಿವರಿಸಿದ್ದಾರೆ. "13 ಪ್ಲ್ಯಾಪ್‌ ಸಿನಿಮಾಗಳನ್ನು ಕೊಟ್ಟವರು. ನೋಡಲು ಹುಡುಗರ ಹಾಗೆ ಕಾಣುವವರು. ಹೀರೋಗಳ ಜೊತೆ ಅಸಭ್ಯವಾದ ಹಾಡುಗಳಲ್ಲಿ ನಟಿಸಿದವರನ್ನೆಲ್ಲಾ ನಟಿಯರೆಂದು ಕರೆದರು. ನಾನು ಕ್ಯಾಮರಾ ಮುಂದೆ ನಿಂತಾಗಲೆಲ್ಲಾ ಆಧ್ಯಾತ್ಮಿಕ ಭಾವನೆ ಬರುತ್ತೆ. ನನ್ನ ಹಾಡುಗಳಿಗೆ ಲತಾ ಮಂಗೇಶ್ಕರ್ ಹಾಗೂ ಆಶಾ ಬೋಸ್ಲೆಯಂತಹ ಮಹಾನ್ ಗಾಯಕರು ಹಾಡಿರುವುದೇ ನನ್ನ ಗೆಲುವು. ನನಗೆ ಯಾವುದೇ ಅವಾರ್ಡ್‌ನ ಅವಶ್ಯಕತೆ ಇಲ್ಲ." ಎಂದಿದ್ದಾರೆ ಊರ್ಮಿಳಾ.

More from Filmibeat

English summary
Urmila Matondkar people said after Rangeela Movie release she did it of sex appeal nothing to do with acting. Rangeela directed by Ram Gopal Varma. Aamir Khan and Jackie Shroff in the main role was a huge hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X