ನೋಡೋಕೆ ಚೋಟುದ್ದ ; ರಿಷಭ್ ಪಂತ್ ನ ಮತ್ತೆ ಕೆಣಕಿದ ಊವರ್ಶಿ ರೌಟೇಲಾ ..!

ಈ ಅಸೂಯೆ ಅನ್ನೋದೇ ಹಿಂಗೆ. ನೆಟ್ಟಗಿದ್ದ ಸಂಬಂಧಗಳನ್ನ ಸುಲಭವಾಗಿ ಹದಗೆಡಿಸೋ ಒಂದು ರೀತಿಯ ಜ್ವಾಲೆ. ಒಬ್ಬನ ಖ್ಯಾತಿ ಕಂಡು ಕೈ ಕೈ ಹಿಸಿಕಿಕೊಳ್ಳೋ ಇಂತಹ ಮಂದಿ, ಸಕ್ಸಸ್ ನ ತುತ್ತ ತುದಿಯಲ್ಲಿದ್ದವನಿಗೆ, ಪಾತಾಳದ ಗರಡಿ ತೋರಿಸೋವರೆಗೂ ಸುಮ್ಮನಿರೋದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಊವರ್ಶಿ ರೌಟೇಲಾ

ಹೌದು, ಮಾಡಿದ್ದು ಮೂರು ಮತ್ತೊಂದು ಸಿನಿಮಾ ಆದರೂ, ಊವರ್ಶಿ ರೌಟೆಲಾ ಹೆಸರು ಜಗತ್ಪ್ರಸಿದ್ದ. ಅದಕ್ಕೆ ನಾನಾ ಕಾರಣಗಳಿವೆಯಾದರೂ ಆ ಪೈಕಿ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಂ ಬ್ಯಾಟ್ಸಮನ್ ರಿಷಭ್ ಪಂತ್ ಪ್ರಮುಖ ಕಾರಣ.

Urvashi Rautela Takes Indirect Dig At Rishab Pant

ಒಂದ್ಕಾಲದಲ್ಲಿ ರಿಷಭ್ ಪಂತ್‌ನಿಂದಾನೇ ಕುಂತರೂ ನಿಂತರೂ ಸುದ್ದಿಯಾದ ಊವರ್ಶಿ ರೌಟೆಲಾ ಮತ್ತೊಮ್ಮೆ ಈಗ ರಿಷಭ್ ಪಂತ್ ಅವರನ್ನ ಕೆಣಕಿದ್ದಾರೆ. ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಬಗ್ಗೆ ಕೇಳಲಾದ ಪ್ರಶ್ನೆಗೆ ನೋ ಕಮೆಂಟ್ಸ್ ಅಂದಿದ್ದಾರೆ.

ಇಷ್ಟೇ ಆಗಿದ್ದರೆ ಊವರ್ಶಿ ರೌಟೆಲಾ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮಾತಿನಲ್ಲಿ ಅಷ್ಟೇ ಅಲ್ಲ ಆಡುವ ಮಾತು ಕೃತಿಯಲ್ಲಿ ಇರಬೇಕು ಎಂಬಂತೆ ಸದ್ಯಕ್ಕೆ ಹೊಸ ವಿಡಿಯೋವೊಂದನ್ನ ಹಂಚಿಕೊಂಡಿರುವ ಊವರ್ಶಿ ರೌಟೇಲಾ ಇದೀಗ ಪರೋಕ್ಷವಾಗಿ ರಿಷಭ್ ಪಂತ್ ಕಾಲೆಳೆದಿದ್ದಾರೆ.

ಹೌದು, ITIIMShaadi ಜಾಹೀರಾತಿನಲ್ಲಿ ಊವರ್ಶಿ ರೌಟೆಲಾ, ಪರೋಕ್ಷವಾಗಿ ರಿಷಭ್‌ ಪಂತ್ ಅವರನ್ನ ಕೆಣಕಿದ್ದಾರೆ. ನನ್ನ ಬದುಕಿನಲ್ಲಿ ನಾನು ಇಲ್ಲಿಯವರೆಗೆ ಅನೇಕ ಜನರನ್ನ ನೋಡಿದ್ದೇನೆ. ಆ ಪೈಕಿ ಉದ್ಯಮಿಗಳು, ನಟರು, ಗಾಯಕರು ಮತ್ತು ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ ಅದರಲ್ಲಿ ಕೆಲವರು ನನ್ನ ಎದೆ ಎತ್ತರಕ್ಕೂ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ . ನನಕ್ಕಿಂತ ಕುಳಗಿದ್ದರು ಅಂದಿದ್ದಾರೆ.

ಊವರ್ಶಿಯ ಈ ಹೇಳಿಕೆ ನೋಡ, ನೋಡುತ್ತಾ ಎಲ್ಲರ ಕಿವಿಗೆ ತಲುಪಿದೆ. ವಿಡಿಯೋ ಈಗ ವೈರಲ್ ಆಗಿದೆ. ಈ ಕಾರಣಕ್ಕೆ ರೊಚ್ಚಿಗೆದ್ದಿರುವ ಅನೇಕರು ಊವರ್ಶಿ ರೌಟೇಲಾ ಅವರನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ. ಊವರ್ಶಿ ವೃತ್ತಿ ಜೀವನ, ರಿಷಭ್ ಪಂತ್ ಹಾಕಿಕೊಳ್ಳುವ ಬಗೆ ಬಗೆಯ ಬೂಟುಗಳಿಗೆ ಸಮ ಇಲ್ಲ ಎಂದು ಕೆಲವರು ಹೇಳಿದ್ದರೆ, ರಿಷಭ್ ಪಂತ್ ಅವರನ್ನ ಆಟ ಆಡಲು ಬಿಡಿ ಅವರ ಏಕ್ರಾಗತೆಯನ್ನ ಹಾಳು ಮಾಡಬೇಡಿ ಎಂದು ಇನ್ನೊಬ್ಬರು ವಿನಂತಿ ಮಾಡಿಕೊಂಡಿದ್ದಾರೆ. ಇನ್ನೂ ಬಹುತೇಕರು ಪ್ರಚಾರ ಕಡಿಮೆಯಾದಾಗೆಲ್ಲ ಊವರ್ಶಿಗೆ ರಿಷಭ್ ಪಂತ್ ಅವರೇ ನೆನಪಾಗುವುದು ಎಂದು ವ್ಯಂಗ್ಯ ಮಾಡಿದ್ದಾರೆ.

ಅಂದ್ಹಾಗೇ ರಿಷಭ್ ಪಂತ್ ಹಾಗೂ ಊವರ್ಶಿ ರೌಟೇಲಾ ನಡುವೆ ಇರುವ ಈ ಸ್ನೇಹ-ಪ್ರೇಮ-ಅಸೂಯೆ-ದ್ವೇಷದ ಸಂಬಂಧ ಇಂದು ನಿನ್ನೆಯದಲ್ಲ. ಇದಕ್ಕೆ ವರ್ಷಗಳ ಇತಿಹಾಸ ಇದೆ. ಹೆಚ್ಚು ಕಡಿಮೆ 2022ರಿಂದ ಹಾವು ಮುಂಗುಸಿಯಂತೆ ಇಬ್ಬರು ಸೆಣಸಾಡುತ್ತಾನೇ ಇದ್ದಾರೆ. ಆದರೆ ರಿಷಭ್ ಪಂತ್ ಅವರಲ್ಲಿ ಅದ್ಯಾವ ಆಯಸ್ಕಾಂತ ಶಕ್ತಿ ಇದೆಯೋ ಆ ದೇವರೆ ಬಲ್ಲ. ಕಾಲ ಕಾಲಕ್ಕೆ ಹಳೆಯ ಗೆಳೆಯನನ್ನ ನೆನಪು ಮಾಡಿಕೊಳ್ಳದೇ ಇದ್ದರೆ, ಕೆಣಕದೇ ಇದ್ದರೆ.. ಊವರ್ಶಿ ರೌಟೇಲಾಗೆ ನಿದ್ದೆ ಬರುವುದಿಲ್ಲ. ಇದಕ್ಕೆ ಊವರ್ಶಿ ರೌಟೇಲಾ ಅವರ ಈ ಹೊಸ ವಿಡಿಯೋ ಮತ್ತೊಂದು ಸಾಕ್ಷಿ.

ಒಟ್ನಲ್ಲಿ ಅಪಘಾತಕ್ಕೀಡಾಗಿ ಚೇತರಿಸಿಕೊಂಡು ರಿಷಭ್ ಪಂತ್ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಐಪಿಎಲ್ ಧ್ಯಾನದಲ್ಲಿದ್ದಾರೆ. ಆದರೆ ಕಲಿಯುಗದ ಈ ಊವರ್ಶಿ ಮಾತ್ರ ಧ್ಯಾನಮುದ್ರೆಯಲ್ಲಿರುವ ರಿಷಭ್ ಪಂತ್ ಅವರನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಾರೆ. ಗತಕಾಲದ ಆ ದಿನಗಳನ್ನ ನೆನಪಿಸಿಕೊಂಡು, ಕೆಣಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಹೀಗಾಗಿ ರಿಷಭ್ ಪಂತ್ ಧ್ಯಾನ ಯಾವತ್ತು ಭಂಗವಾಗುತ್ತೋ ಗೊತ್ತಿಲ್ಲ.

More from Filmibeat

English summary
Bollywood actress Urvashi Rautela, indirectly took a dig at Rishabh Pant as the actress said that she saw actors, businessmen, batsmen, singers and some of them didn’t even match her height. In no time, the video went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X