ವಿಕೆಟ್ ಕೀಪಿಂಗ್ ಮಾಡಿ ಟಕ್ಕರ್ ಕೊಟ್ಟ ಊರ್ವಶಿ ರೌಟೇಲಾ: ರಿಷಭ್ ಪಂತ್ ಕಾಲೆಳೆದ ನೆಟ್ಟಿಗರು!

ಭಾರತದಲ್ಲಿ ವಿಶ್ವ ಕಪ್ ಪಂದ್ಯಾವಳಿ ನಡೆಯುತ್ತಿದೆ. ಎಲ್ಲೆಲ್ಲೂ ವರ್ಲ್ಡ್‌ ಕಪ್ ಜ್ವರ ಜೋರಾಗಿದೆ. ಭಾರತ ಕೂಡ ಭರ್ಜರಿ ಪ್ರದರ್ಶನವನ್ನೇ ನೀಡುತ್ತಿದೆ. ಇದೂವರೆಗೂ ಸೋಲನ್ನೇ ಕಂಡಿರದ ಭಾರತದ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ.

ಒಂದು ಭಾರತದ ಗೆಲ್ಲುತ್ತಿದ್ದರೆ, ಇತ್ತ ತಂಡದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅನ್ನು ಅದೆಷ್ಟೋ ಮಂದಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಒಂದು ವಿಡಿಯೋ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಆ ವಿಡಿಯೋ ನೋಡಿ ರಿಷಭ್ ಪಂತ್ ಅನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.

Urvashi Rautela Wicketkeeping video goes viral Rishabh Pant gets trolled

ಇತ್ತೀಚೆಗೆ ಊರ್ವಶಿ ರೌಟೇಲಾ ಹಾಗೂ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ನಡುವಿನ ವಿವಾದ ಗೊತ್ತೇ ಇದೆ. ಹೀಗಾಗಿ ಊರ್ವಶಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.

ಊರ್ವಶಿ ವಿಡಿಯೋ ಚರ್ಚೆಯಾಗ್ತಿರೋದ್ಯಾಕೆ?

ಊರ್ವಶಿ ರೌಟೇಲಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅಲ್ಲದೆ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ನಟಿ. ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಊರ್ವಶಿ ರೌಟೇಲಾ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ವೈಟ್ ಅಂಡ್ ವೈಟ್ ಸ್ಟೋರ್ಟ್ಸ್ ಡ್ರೆಸ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವ ವಿಡಿಯೋ ಅದು. ಇದರೊಂದಿಗೆ "ಹೊಸ ಅಧ್ಯಾಯ, ಹೊಸ ಸಿನಿಮಾ" ಎಂದು ಬರೆದು ಪೋಸ್ಟ್ ಮಾಡಿದ್ದರು. ಅದೇ ವಿಡಿಯೋ ಈಗ ಟ್ರೋಲ್ ಆಗುತ್ತಿದೆ.

ವಿಕೆಟ್ ಕೀಪಿಂಗ್ ಮಾಡಿ ಟಕ್ಕರ್?

ಊರ್ವಶಿ ರೌಟೇಲಾ ಸುತ್ತಾ ಒಂದಿಷ್ಟು ವಿವಾದಗಳು ಸುತ್ತಿಕೊಂಡು ಸದ್ದು ಮಾಡಿದ್ದಂತೂ ನಿಜ. ಅದರಲ್ಲಿ ರಿಷಭ್ ಪಂತ್ ಜೊತೆಗಿನ ವಿವಾದ ಕೂಡ ಒಂದು. ಆರ್‌ಪಿ ಅನ್ನೋ ವ್ಯಕ್ತಿ ತನಗೆ ಹಲವು ಬಾರಿ ಫೋನ್ ಮಾಡಿದ್ದರು ಎಂದು ಕೊಟ್ಟ ಒಂದು ಹೇಳಿಕೆ ಇಬ್ಬರ ನಡುವಿನ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಊರ್ವಶಿ ಕ್ಷಮೆಯನ್ನೂ ಕೇಳಿದ್ದರು. ಆದ್ರೀಗ ಹೊಸ ಸಿನಿಮಾಗಾಗಿ ಎಂದು ಹೇಳುತ್ತಾ ವಿಕೆಟ್ ಕೀಪಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೆ ರಿಷಭ್ ಪಂತ್‌ಗೆ ಟಕ್ಕರ್ ಕೊಡುತ್ತಿದ್ದಾರೆ ಅಂತ ನೆಟ್ಟಿಗರು ಹೇಳುತ್ತಿದ್ದಾರೆ.

ಬ್ಯಾಟಿಂಗ್ ಗ್ಲೌಸ್ ತೊಟ್ಟು ಕೀಪಿಂಗ್

ಊರ್ವಶಿ ರೌಟೇಲಾ ವಿಕೆಟ್ ಕೀಪಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದೇನೋ ನಿಜ. ಆದರೆ, ಬ್ಯಾಟಿಂಗ್ ಮಾಡುವಾಗ ಬಳಸುವ ಗ್ಲೌಸ್ ತೊಟ್ಟು ಕೀಪಿಂಗ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಊರ್ವಶಿ ರೌಟೇಲಾರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. "ಬ್ಯಾಟಿಂಗ್ ಗ್ಲೌಸ್ ತೊಟ್ಟು ಕೀಪಿಂಗ್ ಮಾಡುತ್ತಿದ್ದಾರೆ. ಈಕೆ ಧೈರ್ಯವಿದೆ" ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ. ಅದೇ ಇನ್ನೊಂದಿಷ್ಟು ಮಂದಿ "ರಾಖಿ ಸಾವಂತ್ 2.0", "ಅರೇ.. ಸ್ಪೆಂಪಿಂಗ್ ಗ್ಲೌಸ್ ಅನ್ನಾದ್ರೂ ಹಾಕೋ" ಎಂದು ಊರ್ವಶಿ ರೌಟೇಲಾ ಕಾಲೆಳೆದಿದ್ದಾರೆ.

ರಿಷಭ್ ಪಂತ್ ಅನ್ನೂ ಬಿಟ್ಟಿಲ್ಲ ಟ್ರೋಲಿಗರು

ಟ್ರೋಲಿಗರ ಕಣ್ಣಿಗೆ ಇಂತಹ ವಿಡಿಯೋ ಬಿತ್ತು ಅಂದರೆ ಮುಗೀತು. ರೋಸ್ಟ್ ಮಾಡಿ ಬಿಸಾಕಿಬಿಡುತ್ತಾರೆ. ಊರ್ವಶಿ ಪೋಸ್ಟ್ ಮಾಡಿದ ವಿಡಿಯೋಗೆ ರಿಷಭ್ ಪಂತ್ ಟ್ರೋಲ್ ಆಗುತ್ತಿದ್ದಾರೆ. "ರಿಷಬ್ ಪಂತ್‌ಗೆ ಬದಲಿ ಆಟಗಾರ ಸಿಕ್ಕೇಬಿಟ್ಟ" ಎಂದು ಟ್ರೋಲ್ ಮಾಡುತ್ತಿದ್ದಾರೆ. "ರಿಷಭ್ ಪಂತ್ ಲೈಟ್ ವರ್ಷನ್" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. " ರಿಷಭ್ ಪಂತ್ ಆಗಲು ಬಯಸುತ್ತಿದ್ದಾರೆ", "ಇನ್ನೊಂದು ಫ್ರೇಮ್‌ನಲ್ಲಿ ರಿಷಭ್ ಪಂತ್" ಎಂದು ಟ್ರೋಲಿಗರು ಕಾಳೆಯುತ್ತಿದ್ದಾರೆ.

More from Filmibeat

English summary
Urvashi Rautela posted Wicketkeeping video, Rishabh Pant trolled by netizens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X