"ಎದೆಯ ಗಾತ್ರ ಹೆಚ್ಚಿಸಿಕೊಳ್ಳಿ ಅಂದಿದ್ರು.. ಸಿಂಗಲ್ ಇಡ್ಲಿ ತಿಂದು ಸೌಂದರ್ಯ ಉಳಿಸಿಕೊಂಡೆ" ಬಾಲಿವುಡ್ ನಟಿ ಸಮೀರಾ
ಬಾಲಿವುಡ್ ಸತತ ಸೋಲುಗಳಿಂದ ಕಂಗೆಟ್ಟು ಹೋಗಿತ್ತು. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಈ ನಷ್ಟದಿಂದ ಹೊರಬರೋಕೆ ಬಾಲಿವುಡ್ ಮಂದಿ ಪರದಾಡಿದ್ದು ಗೊತ್ತೇ ಇದೆ. ಇದರ ಹಿಂದೆನೇ ಕೆಲವು ನಟಿಯರು ಬಾಲಿವುಡ್‌ನ ಕರಾಳ ಮುಖವನ್ನು ಹೊರಹಾಕುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಮೀಟೂ ಅಭಿಯಾನ ಚಿತ್ರರಂಗದ ಹಲವರ ಕರಾಳ ಮುಖಗಳನ್ನು ಹೊರ ಹಾಕಿತ್ತು. ಇದೀಗ ನಟಿ ಸಮೀರಾ ರೆಡ್ಡಿ ಬಾಲಿವುಡ್ ಮಂದಿ ನಟಿಯರನ್ನು ಹೇಗೆ ನೋಡುತ್ತಿದ್ದರು? ಅನ್ನೋದನ್ನು ಹೊರಹಾಕಿದ್ದಾರೆ.
ನಟಿ ಸಮೀರಾ ರೆಡ್ಡಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಕಿಚ್ಚ ಸುದೀಪ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ 'ವರದನಾಯಕ' ಸಿನಿಮಾದಲ್ಲೂ ನಟಿಸಿದ್ದರು. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಸಮೀರಾ ರೆಡ್ಡಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಆಕೆ ವಿರುದ್ಧ ಮಾಡುತ್ತಿದ್ದ 'ಸೆಕ್ಸಿ ಸ್ಯಾಮ್' ಕಮೆಂಟ್‌ನಿಂದ ಹಿಡಿದು ಸ್ತನ ಶಸ್ತ್ರಚಿಕಿತ್ಸೆವರೆಗೂ ಮನಬಿಚ್ಚಿ ಮಾತಾಡಿದ್ದಾರೆ. ಸಮೀರಾ ರೆಡ್ಡಿ ಕೊಟ್ಟ ಈ ಹೇಳಿಕೆ ಬಾಲಿವುಡ್‌ನಲ್ಲಿ ವೈರಲ್ ಆಗುತ್ತಿದೆ.

ಕಿಚ್ಚ ನಾಯಕಿ ಬೋಲ್ಡ್ ಕಮೆಂಟ್
ಸಮೀರಾ ರೆಡ್ಡಿ ಇದೇ ಒಂದು ದಶಕದ ಹಿಂದೆ ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದರು. ಸದ್ಯ ಸಿನಿಮಾರಂಗದಿಂದ ದೂರ ಉಳಿದಿರೋ 'ವರದನಾಯಕ' ಸಿನಿಮಾ ನಾಯಕಿ ತನ್ನ ಸಹಜ ಸೌಂದರ್ಯದ ಬಗ್ಗೆ ಮುಕ್ತವಾಗಿ ಮಾತಾಡಿದ್ದರು. ತನಗೆ ಈಗಿರುವ ಬಿಳಿ ಕೂದಲು, ದೇಹದ ಮೇಲಿರುವ ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ಹೇಳಿಕೊಂಡಿದ್ದರು. ಆದರ್ಶ ಸೌಂದರ್ಯದ ಮಾನದಂಡಗಳನ್ನು ಎತ್ತಿಹಿಡಿದ್ದರು. ಇದೇ ನಟಿಗೆ 10 ವರ್ಷಗಳ ಹಿಂದೆ ಬಾಲಿವುಡ್ ಮಂದಿ ಏನೆಲ್ಲಾ ಹೇಳಿದ್ದರು ಅನ್ನೋದನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

'ಸ್ತನ ಶಸ್ತ್ರಚಿಕಿತ್ಸೆಗೆ ಒತ್ತಾಯ ಮಾಡ್ತಿದ್ರು'
ಇತ್ತೀಚೆಗೆ ಸಮೀರಾ ರೆಡ್ಡಿ ಮಿಡ್‌ಡೇಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಮಂದಿಯ ಕರಾಳ ಮುಖವನ್ನು ಹೊರಹಾಕಿದ್ದಾರೆ. "10 ವರ್ಷಗಳ ಹಿಂದೆ ಒಂದು ಕ್ರೇಜಿ ಹಂತವಿತ್ತು. ಈ ವೇಳೆ ಎಲ್ಲರೂ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು. ಸ್ತನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು. ಕೆಲವರು ಮೂಗು ಆಕಾರ ಬದಲಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಮೂಳೆಯ ಆಕಾರ. ನಾನು ಯಾವಾಗಲೂ ಎದೆಗೆ ಪ್ಯಾಡ್ ಅನ್ನು ಧರಿಸುವಂತಾಗಿತ್ತು. ಈ ವೇಳೆ ಸ್ತನದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರು." ಎಂದು ಬಾಲಿವುಡ್ ಮಂದಿಯನ್ನು ದೂರಿದ್ದಾರೆ.

'ನಾನು ಸ್ತನ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲಿಲ್ಲ'
"ಸ್ತನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದರು. ಒಬ್ಬ ನಟಿಯಾಗಿ ನಾನು ಇದನ್ನು ಪ್ರಶ್ನೆ ಮಾಡುತ್ತಿದ್ದೆ. ನಾನು ಸ್ತನ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಳ್ಳಲಿಲ್ಲ. ಈ ಬಗ್ಗೆ ದೇವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಯಾಕಂದ್ರೆ, ನಾನು ಅದನ್ನು ಮಾಡಿಸಿಕೊಂಡಿದ್ದರೆ, ಇವತ್ತು ಆರಾಮಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ." ಎಂದು ಅಂದು ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಸಮೀರಾ ರೆಡ್ಡಿ ಹೇಳಿದ್ದಾರೆ.

'ಒಂದು ಇಡ್ಲಿ ತಿಂದು ಸೌಂದರ್ಯ ಉಳಿಸಿಕೊಂಡೆ'
2002ರಲ್ಲಿ ಸಮೀರಾ ರೆಡ್ಡಿ, 'ಮೈನೆ ದಿಲ್ ತುಜುಕೊ ದಿಯಾ' ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಇವರ ಬೋಲ್ಡ್ ಲುಕ್‌ನಿಂದ 'ಸೆ*ಕ್ಸ್ ಸಿಂಬಲ್' ಅಂತ ಕಮೆಂಟ್ ಮಾಡುತ್ತಿದ್ದರು. ಆ ವೇಳೆ ಇವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಎಷ್ಟು ಬಾರಿ ಒಂದು 'ಇಡ್ಲಿ' ತಿಂದು ಸೌಂದರ್ಯ ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.


Click it and Unblock the Notifications











