ನಿಶ್ಚಿತಾರ್ಥ ಮಾಡಿಕೊಂಡ 'ಮಾಣಿಕ್ಯ' ನಟಿ ಭಾವೀ ಪತಿಗಿದು 2ನೇ ಮದುವೆ; ಮೊದಲ ಪತ್ನಿ ಯಾರು?
ದಕ್ಷಿಣ ಭಾರತದ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಅವರದ್ದೇ ಆದ ಹೆಸರಿದೆ. ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಹೆಚ್ಚು ಅವಕಾಶ ಸಿಗದೇ ಹೋದರೂ, ಪೋಷಕ ಪಾತ್ರಗಳಲ್ಲಿ, ನೆಗೆಟಿವ್ ಶೇಡ್‌ಗಳಲ್ಲಿ ಮಿಂಚಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಹಾದಿಯಲ್ಲಿ ನಡೆಯುತ್ತಿರೋ ವರಲಕ್ಷ್ಮಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿಕೋಲಾಯ್ ಸಚ್‌ದೇವ್ ಇಬ್ಬರೂ ಸುಮಾರು 14 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಮಾಹಿತಿ ನಿಶ್ವಿತಾರ್ಥದ ಬಳಿಕ ಹೊರಬಿದ್ದಿತ್ತು. 38 ವರ್ಷದ ನಟಿ ಸದ್ಯ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಮದುವೆ ಯಾವಾಗ ಅನ್ನೋದು ಇನ್ನೂ ಬಹಿರಂಗೊಂಡಿಲ್ಲ. ವರಲಕ್ಷ್ಮಿ ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ ನಿಕೋಲಾಯ್ ಸಚ್‌ದೇವ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

ಮಾರ್ಚ್ 1 ರಂದು ಮುಂಬೈನಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಹಾಗೂ ನಿಕೋಲಾಯ್ ಸಚ್‌ದೇವ್ ಕುಟುಂಬಸ್ಥರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನಡೆದಿದೆ. ಸ್ವತ: ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಾಗಲೇ ಫ್ಯಾನ್ಸ್‌ಗೆ ಅಚ್ಚರಿ ಆಗಿತ್ತು. ಆದ್ರೀಗ ನಿಕೋಲಾಯ್ ಸಚ್‌ದೇವ್‌ಗೆ ಈಗಾಗಲೇ ಒಂದು ಮದುವೆ ಆಗಿದ್ದು, ಇದು ಎರಡನೇ ಮದುವೆ ಅನ್ನೋ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
ಮುಂಬೈ ಮೂಲದ ಉದ್ಯಮಿ ನಿಕೋಲಾಯ್ ಸಚ್‌ದೇವ್ ಆರ್ಟ್ ಗ್ಯಾಲರಿಯ ಮಾಲೀಕ. ಇಬ್ಬರಿಗೂ 14 ವರ್ಷಗಳ ಪರಿಚಯ. ಆದರೆ, ತಮ್ಮ ವೈಯಕ್ತಿಕ ವಿಚಾರವನ್ನು ಗೌಪ್ಯವಾಗಿ ಇಡುವ ವರಲಕ್ಷ್ಮಿ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇಬ್ಬರೂ ತಮ್ಮ ಕುಟುಂಬವನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಬೆನ್ನಲ್ಲೇ ನಿಕೋಲಾಯ್ ಸಚ್‌ದೇವ್ ಈಗಾಗಲೇ ಒಂದು ಮದುವೆ ಆಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಕವಿತಾ ಎಂಬುವವರ ಜೊತೆ ನಿಕೋಲಾಯ್ ಸಚ್‌ದೇವ್ ಮದುವೆ ಆಗಿದ್ದರು. 2010ರಲ್ಲಿ ಕವಿತಾ ಮಿಸ್ ಗ್ಲಾಡ್ರಾಗ್ಸ್ ಆಗಿ ಹೊರಹೊಮ್ಮಿದ್ದರು. ಆನಂತರ 2011ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದ ಮಿಸ್ ಗ್ಲೋಬ್ ಭಾಗವಹಿಸಿದ್ದರು. ನಿಕೋಲಾಯ್ ಸಚ್‌ದೇವ್ ಹಾಗೂ ಕವಿತಾಗೆ 15 ವರ್ಷದ ಮಗಳು ಇದ್ದಾರೆ.

ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದರು. ನಿಕೋಲಾಯ್ ಹಾಗೂ ಕವಿತಾ ವಿಚ್ಛೇದನದ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ. ಈಗ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ನಿಕೋಲಾಯ್ ಸಚ್‌ದೇವ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.
'ಮಾಣಿಕ್ಯ' ಸಿನಿಮಾದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಭಾವಿ ಪತಿಯ ಮೊದಲನೇ ಮದುವೆ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಂದ್ಹಾಗೆ, ವರಲಕ್ಷ್ಮಿ ಸದ್ಯ ತಮ್ಮ ನಿಶ್ಚಿತಾರ್ಥದ ಬಗ್ಗೆ, ಲವ್ ಸ್ಟೋರಿ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮದುವೆ ಬಗ್ಗೆನೂ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಹನುಮಾನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಕೈಯಲ್ಲಿ ಎರಡು ಮೂರು ಸಿನಿಮಾಗಳಿವೆ. ಆ ಸಿನಿಮಾಗಳನ್ನು ಮುಗಿಸಿದ ಬಳಿಕ ಮದುವೆಗೆ ಗ್ರೀನ್ ಸಿಗ್ನಲ್ ಕೊಡಬಹುದು ಎನ್ನಲಾಗಿದೆ.


Click it and Unblock the Notifications











