For Quick Alerts
  ALLOW NOTIFICATIONS  
  For Daily Alerts

  ವರುಣ್ ಧವನ್, ನೀತು ಕಪೂರ್ ಕೊರೊನಾ ಪಾಸಿಟಿವ್: ಚಿತ್ರೀಕರಣ ಬಂದ್

  |

  ಹಿಂದಿ ಸಿನಿಮಾ 'ಜುಗ್‌ ಜುಗ್‌ ಜಿಯೋ' ಚಿತ್ರೀಕರಣ ಸೆಟ್‌ನಲ್ಲಿದ್ದ ಕೆಲವರಿಗೆ ಕೊರೊನಾ ಸೋಂಕು ತಗುಲಿದ್ದು, ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

  ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ನೀತು ಕಪೂರ್ ಅಂಥಹಾ ದೊಡ್ಡ ಸ್ಟಾರ್‌ಗಳು ನಟಿಸುತ್ತಿರುವ ಜುಗ್‌ ಜುಗ್ ಜಿಯೋ ಸಿನಿಮಾದ ಚಿತ್ರೀಕರಣಕ್ಕಾಗಿ ಕೆಲವು ದಿನಗಳ ಹಿಂದಷ್ಟೆ ಚಂಡೀಘಡಕ್ಕೆ ತೆರಳಿದ್ದರು.

  ನಿಯಮದಂತೆ ಸೆಟ್‌ನಲ್ಲಿದ್ದವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ, ನಟ ವರುಣ್ ಧವನ್‌ಗೆ ಕೊರೊನಾ ಇರುವುದು ಗೊತ್ತಾಗಿದೆ. ಜೊತೆಗೆ ರಣ್ಬೀರ್ ಕಪೂರ್ ತಾಯಿ ನೀತು ಕಪೂರ್ ಅವರಿಗೂ ಕೊರೊನಾ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಸಿನಿಮಾದ ನಿರ್ದೇಶಕ ರಾಜ್ ಮೆಹ್ತಾಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  ಈ ನಟರುಗಳು ಮುಂಬೈನಿಂದ ತೆರಳುವ ಮುನ್ನವೂ ಪರೀಕ್ಷೆಗೆ ಒಳಗಾಗಿದ್ದರು, ಆದರೆ ಆಗ ನೆಗೆಟಿವ್ ವರದಿ ಬಂದಿತ್ತು. ಆದರೆ ಸೆಟ್‌ನಲ್ಲಿ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದೆ.

  ಅನಿಲ್ ಕಪೂರ್ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ ಎನ್ನಲಾಗಿತ್ತು, ಆದರೆ ನಂತರ ಬೋನಿ ಕಪೂರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅನಿಲ್ ಕಪೂರ್‌ ವರದಿ ನೆಗೆಟಿವ್ ಬಂದಿದೆ ಎಂದಿದ್ದಾರೆ. ನಾಯಕಿ ಕಿಯಾರಾ ಅಡ್ವಾಣಿ ವರದಿಯೂ ನೆಗೆಟಿವ್ ಬಂದಿದೆ.

  ಸಿನಿಮಾದಲ್ಲಿ ಯೂಟ್ಯೂಬ್ ತಾರೆ ಪ್ರಾಜಕ್ತಾ ಸಹ ನಟಿಸುತ್ತಿದ್ದು, ವರುಣ್ ಧವನ್, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ, ನೀತು ಕಪೂರ್, ಪ್ರಾಜಕ್ತಾ ಒಟ್ಟಿಗೆ ಮುಂಬೈನಿಂದ ಖಾಸಗಿ ವಿಮಾನದಲ್ಲಿ ಚಂಡೀಘಡಕ್ಕೆ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಅನಿಲ್ ಕಪೂರ್, ಕಿಯಾರಾ ಅಡ್ವಾಣಿ, ಪ್ರಾಜಕ್ತಾ ವರದಿಗಳು ನೆಗೆಟಿವ್ ಬಂದಿವೆ.

  English summary
  Actor Varun Dhavan, Neetu Kapoor and others tests COVID 19 positive while shooting Jug Jug Jiyo movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X