ಗಿಗಿ ಹದೀದ್‌ಗೆ ಮುತ್ತಿಟ್ಟು ಹಿಗ್ಗಾಮುಗ್ಗಾ ಟ್ರೋಲ್ ಆದ ವರುಣ್ ಧವನ್:"ಮಹಿಳೆಯರು ಎಲ್ಲೂ ಸೇಫಲ್ಲ" ನೆಟ್ಟಿಗರು ಕಿಡಿ

ನಿತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಈ ಸಮಾರಂಭಕ್ಕೆ ಬಾಲಿವುಡ್‌ ಸ್ಟಾರ್‌ಗಳಿಂದ ಹೊರ ದೇಶದ ಸೆಲೆಬ್ರೆಟಿಗಳನ್ನೂ ಕರೆಸಲಾಗಿತ್ತು. ಹಾಗೇ ಅಮೆರಿಕದ ಸೂಪರ್ ಮಾಡಲ್ ಗಿಗಿ ಹದೀದ್ ಅವರಿಗೂ ಆಮಂತ್ರಣ ನೀಡಲಾಗಿತ್ತು.

ಸೂಪರ್ ಮಾಡೆಲ್ ಗಿಗಿ ಹದೀದ್ ಕೂಡ ಈ ಸಮಾರಂಭಕ್ಕೆ ಬಂದಿದ್ದ ವಿಶೇಷ ಅತಿಥಿಗಳ ಮುಂದೆ ಪರ್ಫಾಮೆನ್ಸ್ ನೀಡಿದ್ದರು. ಇದೇ ವೇಳೆ ಬಾಲಿವುಡ್ ನಟ ವರುಣ್ ಧವನ್ ಕೂಡ ಕಾರ್ಯಕ್ರಮ ನೀಡುತ್ತಿದ್ದರು. ಈ ವೇಳೆ ಗಿಗಿ ಹದೀದ್ ಅವರನ್ನು ವೇದಿಕೆಗೆ ಆಹ್ವಾನ ನೀಡಿ, ಆಕೆಯನ್ನು ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಕಳುಹಿಸಿದರು.

Varun Dhawan trolled for kissing Gigi Hadid without her permission: Actor Says It was planned

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದಕ್ಕೆ ತಿರುಗಿದೆ. ನೆಟ್ಟಿಗರು ವರುಣ್ ಧವನ್ ನಡೆಯನ್ನು ವಿರೋಧಿಸಿದ್ದಾರೆ. ಆಕೆಯ ಅನುಮತಿ ಇಲ್ಲದೇನೆ ವರುಣ್ ಧವನ್ ಚುಂಬಿಸಿದ್ದು ಸರಿಯಲ್ಲ ಅಂತ ಕಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಂತೆ ವರುಣ್ ಧವನ್ ಸಿಟ್ಟಿಗೆದ್ದು, ಆ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ವರುಣ್ ಧವನ್ ವಿರುದ್ಧ ಕಿಡಿ

ಸೆಲೆಬ್ರೆಟಿಗಳು ಯಾರಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು. ಆದರೆ, ನೆಟ್ಟಿಗರಿಂದ ಮಾತ್ರ ಸಾಧ್ಯವೇ ಇಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಕೆಲ ನೆಟ್ಟಿಗರು ವರುಣ್ ಧವನ್ ವರ್ತನೆಯನ್ನು ಕಟುವಾಗಿ ವಿರೋಧಿಸಿದ್ದರು. " ಇವನು ಅಪ್ಪಿಕೊಳ್ಳದೆ ಹೊರಬರುವುದೇ ಇಲ್ಲ" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದರು.

ಮತ್ತೊಬ್ಬರು ಟ್ವೀಟ್ ಮಾಡಿ ಈಗ ಡಿಲೀಟ್ ಮಾಡಿದ್ದಾರೆ. "ನೀವು ಒಬ್ಬ ಮಹಿಳೆಯಾಗಿದ್ದರೆ, ನೀವು ಯಾರೊಂದಿಗೆ ಇದ್ದರೂ, ಎಲ್ಲೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ನೀವು ಗಿಗಿ ಹದೀದ್ ಆಗಿದ್ದರೂ ಅಷ್ಟೇ. ಗಣ್ಯರು ಇರುವ ಪಾರ್ಟಿಗೆ ನಿಮ್ಮನ್ನು ಆಹ್ವಾನ ಮಾಡಿ, ಅಲ್ಲಿ ವರುಣ್ ಧವನ್ ಅಂತಹವ್ರು ನಿಮ್ಮನ್ನು ಕರೆದು ಅನುಮತಿ ಪಡೆಯದೆ ಎತ್ತಿ ಮುತ್ತಿಟ್ಟು ಕಳುಹಿದ್ರು. ಹಾಸ್ಯದ ಹೆಸರಲ್ಲಿ ಇದೆಲ್ಲಾ ಮಾಡಿದ್ದು ಅಸಹ್ಯಕರ" ಎಂದು ಟ್ವೀಟ್ ಮಾಡಿದ್ದರು.

Varun Dhawan trolled for kissing Gigi Hadid without her permission: Actor Says It was planned

ಟ್ರೋಲ್ ಆಗುತ್ತಿದ್ದಂತೆ ವರುಣ್ ಪ್ರತಿಕ್ರಿಯೆ

ವರುಣ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಇದು ಅವರ ಗಮನಕ್ಕೆ ಬರುತ್ತಿದ್ದಂತೆ ನಟ ಟ್ವೀಟ್ ಮೂಲಕ ಟ್ರೋಲಿಗರಿಗೆ ತಿರುಗೇಟು ನೋಡಿದ್ದಾರೆ. ಈ ಟ್ವೀಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

" ಈ ದಿನ ನೀವು ಎಚ್ಚರವಾಗಿದ್ದೀರ ಹಾಗೂ ಎಚ್ಚರದಿಂದ ಇರಲು ನಿರ್ಧರಿಸಿದ್ದೀರೆಂದು ನಾನು ಭಾವಿಸುತ್ತೇನೆ. ಹಾಗಾಗಿ ನಿಮ್ಮ ಸೃಷ್ಟಿಸಿರುವ ಗುಳ್ಳೆಯನ್ನು ಒಡೆದು ಹಾಕಬೇಕು ಎಂದಿದ್ದೇನೆ. ಆಕೆ ವೇದಿಕೆ ಮೇಲೆ ಹೀಗೆ ಬರಬೇಕೆಂದು ಪ್ಲಾನ್ ಮಾಡಲಾಗಿತ್ತು. ಈ ಕಾರಣಕ್ಕೆ ಹೊರಗಡೆ ಹೋಗಿ ಏನೇನೋ ಮಾಡುವುದಕ್ಕಿಂತ ಟ್ವಿಟರ್‌ನಲ್ಲಿ ಬೇರೆಯದ್ದೇ ಕಾರಣ ಹುಡುಕಿಕೊಳ್ಳಿ." ಎಂದು ವರುಣ್ ಧವನ್ ತಿರುಗೇಟು ನೀಡಿದ್ದಾರೆ.

ಯಾರೀ ಗಿಗಿ ಹದೀದ್ ?

ವರುಣ್ ಧವನ್ ಎತ್ತಿಕೊಂಡಿದ್ದ ಗಿಗಿ ಹದೀದ್ ಅಮೆರಿಕ ಮೂಲಕದ ಸೂಪರ್ ಮಾಡಲ್. 27 ವರ್ಷದ ಈಕೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾಳೆ. ಈಕೆಯ ತಂದೆ ಮೊಹಮದ್ ಹದೀದ್ ಪ್ಯಾಲೆಸ್ಟೇನ್ ಮೂಲದ ಅಮೆರಿಕದ ರಿಯಲ್ ಎಸ್ಟೇಟ್ ಉದ್ಯಮಿ. ಐಶಾರಾಮಿ ಹೊಟೇಲ್‌ಗಳನ್ನು ನಿರ್ಮಿಸುವುದರಲ್ಲಿ ಎಕ್ಸ್‌ಪರ್ಟ್. ಪುತ್ರಿ ಗಿಗಿ ಹದೀದ್ ಅಮೆರಿಕದ ಸೂಪರ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾಳೆ.

2014ರಲ್ಲಿ ಗಿಗಿ 50 ಮಾಡಲ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಳು. 2016ರಲ್ಲಿ ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ ಈಕೆಗೆ ವರ್ಷದ ಅಂತರಾಷ್ಟ್ರೀಯ ಮಾಡೆಲ್ ಅಂತ ಗೌರವಿಸಿತ್ತು. ನಾಲ್ಕು ವರ್ಷಗಳ ಅವಧಿಯಲ್ಲಿ ಈಕೆ ಪ್ರತಿಷ್ಠಿತ ವೋಗ್ ಮ್ಯಾಗಜೀನ್‌ನಲ್ಲಿ 35 ಬಾರಿ ಕಾಣಿಸಿಕೊಂಡಿದ್ದಳು. ಬಾಲ್ಯದಲ್ಲಿಯೇ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ.

More from Filmibeat

English summary
Varun Dhawan trolled for kissing Gigi Hadid without her permission. Actor says 'It was planned, find new twitter cause', know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X