ಕೆಮ್ಮು, ಜ್ವರದ ಲಕ್ಷಣವಿಲ್ಲ: ಆದರೂ ಬಾಲಿವುಡ್ ಹಿರಿಯ ನಟನಿಗೆ ಕೊರೊನಾ ವೈರಸ್ ಪಾಸಿಟಿವ್

ಬಾಲಿವುಡ್ ಮತ್ತು ಕಿರುತೆರೆಯ ಹಿರಿಯ ನಟ ಕಿರಣ್ ಕುಮಾರ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದ್ದು, ಪ್ರಸ್ತುತ ಅವರನ್ನು ಹೋಮ್ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ.

ಮೇ 14ರಂದು ಆಸ್ಪತ್ರೆಗೆ ತೆರಳಿದ್ದು ಅಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು ಎಂದು 74 ವರ್ಷದ ನಟ ಕಿರಣ್ ಕುಮಾರ್ ತಿಳಿಸಿದ್ದಾರೆ. ಆದರೆ ಕಿರಣ್ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

'ನಾನು ಮಾಮೂಲಿ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದೆ. ಅಲ್ಲಿ ಕೊರೊನಾ ವೈರಸ್ ಪರೀಕ್ಷೆ ಕಡ್ಡಾಯವಾಗಿತ್ತು. ಹಾಗೆಯೇ ನಾನು ಪರೀಕ್ಷೆಗೆ ಒಳಗಾದೆ. ವರದಿಯಲ್ಲಿ ಪಾಸಿಟಿವ್ ಕಂಡುಬಂದಿತ್ತು. ಆದರೆ ಇಲ್ಲಿಂದ ಇಲ್ಲಿಯವರೆಗೂ ಅದರ ಯಾವ ಲಕ್ಷಣವೂ ಕಂಡುಬಂದಿಲ್ಲ. ಜ್ವರ ಬಂದಿಲ್ಲ, ಕೆಮ್ಮು ಕೂಡ ಇಲ್ಲ. ನಾನು ಹುಷಾರಾಗಿದ್ದೇನೆ. ಮನೆಯಲ್ಲಿಯೇ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದೇನೆ' ಎಂದು ತಿಳಿಸಿದ್ದಾರೆ.

Veteran Actor Kiran Kumar Tests Positive For Coronavirus Asymptomatic

'ನಾನು ಮನೆಯ ಮೂರನೇ ಮಹಡಿಯಲ್ಲಿದ್ದೇನೆ. ನನ್ನ ಕುಟುಂಬದವರು ಎರಡನೆಯ ಮಹಡಿಯಲ್ಲಿದ್ದಾರೆ. ನಾನು ಒಬ್ಬಂಟಿಯಾಗಿದ್ದೇನೆ. ನನಗೆ ನನ್ನ ಬೋರ್ಡಿಂಗ್ ಶಾಲೆಯ ದಿನಗಳು ಮರುಕಳಿಸಿವೆ. ಏಕೆಂದರೆ ನನ್ನ ಎಲ್ಲ ಸ್ವಂತ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ. ಮೇ 26 ಅಥವಾ 27ರಂದು ಎರಡನೆಯ ಬಾರಿ ಪರೀಕ್ಷೆಗೆ ಒಳಗಾಗುತ್ತೇನೆ' ಎಂದು ಹೇಳಿದ್ದಾರೆ.

ಕಿರಣ್ ಕುಮಾರ್ ಅವರು ಧಡ್ಕನ್, ಬ್ರದರ್ಸ್, ಬಾಬ್ಬಿ ಜಾಸೂಸ್, ಎಲ್‌ಓಸಿ: ಕಾರ್ಗಿಲ್, ಜಾನಿ ದುಷ್ಮನ್, ಕ್ಯೂಂ ಕಿ, ಇಂಗ್ಲಿಷ್ ಬಾಬು ದೇಸಿ ಮೇಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Veteran bollywood actor Kiran Kumar was tested positive for coronavirus and home quarantined, but asymptomatic since May 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X