»   » ಬಾಲಿವುಡ್ ಮೇರು ನಟ ವಿನೋದ್ ಖನ್ನಾ ಹೆಜ್ಜೆ ಗುರುತು

ಬಾಲಿವುಡ್ ಮೇರು ನಟ ವಿನೋದ್ ಖನ್ನಾ ಹೆಜ್ಜೆ ಗುರುತು

Posted By:
Subscribe to Filmibeat Kannada

ಬಾಲಿವುಡ್ ನ ಹಿರಿಯ ನಟ ಮತ್ತು ನಿರ್ಮಾಪಕ ವಿನೋದ್ ಖನ್ನಾ (70) ರವರು ಗುರುವಾರ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆ ಇಂದ ಬಳಲುತ್ತಿದ್ದ ಅವರು ಇಂದು (ಏಪ್ರಿಲ್ 27) ನಿಧನರಾಗಿದ್ದಾರೆ.[ಬಾಲಿವುಡ್ ದಿಗ್ಗಜ ನಟ ವಿನೋದ್ ಖನ್ನಾ ವಿಧಿವಶ]

1946 ಅಕ್ಟೋಬರ್ 6 ರಂದು ಪೇಶಾವರ್ ನಲ್ಲಿ ಜನಿಸಿದ್ದ ಅವರು ಬಾಲಿವುಡ್ ಚಿತ್ರರಂಗದಲ್ಲಿ ನಟನಾಗಿ ಖ್ಯಾತಿ ಗಳಿಸಿದ್ದರು. ಇಂದು ಅವರ ಮರಣದಿಂದ ಬಾಲಿವುಡ್ ಚಿತ್ರರಂಗ ದುಃಖದ ಮಡುವಿನಲ್ಲಿದ್ದು ಶೋಕ ವ್ಯಕ್ತಪಡಿಸಿದೆ. ಅವರ ಸ್ಮರಣೆಯಲ್ಲಿ ಅವರ ಸಿನಿಮಾಯಾನದ ಕೆಲವು ಮಾಹಿತಿಗಳು ಇಲ್ಲಿವೆ.

ವಿನೋದ್ ಖನ್ನಾ ಸಿನಿಮಾಯಾನ

ವಿನೋದ್ ಖನ್ನಾ ರವರು 1968 ರಲ್ಲಿ ಸುನಿಲ್ ದತ್ತ್ ರವರ 'ಮನ್ ಕ ಮೀಟ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 145 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಕೊನೆಯ ಚಿತ್ರ 2015 ರಲ್ಲಿ ತೆರೆಗೆ ಬಂದ ಶಾರುಖ್ ಖಾನ್ ಅಭಿನಯದ 'ದಿಲ್ ವಾಲೆ'.

ಖಳನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ

ವಿನೋದ್ ಖನ್ನಾ ರವರು ಹಿಂದಿ ಚಿತ್ರರಂಗಕ್ಕೆ ಸುನಿಲ್ ದತ್ತ್ ರವರ 'ಮನ್ ಕ ಮೀಟ್' ಚಿತ್ರದ ಮೂಲಕ ಖಳನಟನಾಗಿ ಪಾದಾರ್ಪಣೆ ಮಾಡಿ ನಂತರ ಹೀರೋ ಆಗಿ ಮಿಂಚಿದವರು. ನಾಯಕ ನಟನಾಗಿ ಇವರಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾ 1971 ರ 'ಹಮ್ ಹಮ್ ಔರ್ ವೊಹ್'. ಈ ಚಿತ್ರದಲ್ಲಿ ವಿನೋದ್ ಖನ್ನಾ ರವರಿಗೆ ಕನ್ನಡ ನಟಿ ಭಾರತಿ ವಿಷ್ಣುವರ್ಧನ್ ನಾಯಕಿ ಆಗಿ ಅಭಿನಯಿಸಿದ್ದರು.

ವಿನೋದ್ ಖನ್ನಾ ಸೂಪರ್ ಹಿಟ್ ಸಿನಿಮಾಗಳು

ವಿನೋದ್ ಖನ್ನಾ ರವರು 1973 ರಿಂದ 1982 ನಡುವೆ ಅಭಿನಯಿಸಿದ 'ಫರಬಿ', 'ಹತ್ಯಾರ', 'Moushumi Chatterjee: Qaid', 'ಝಲಿಮ್' ಸೂಪರ್ ಹಿಟ್ ಚಿತ್ರಗಳು. ಅಲ್ಲದೇ ಹಿಂದಿ ಚಿತ್ರರಂಗದ ಖ್ಯಾತ ನಟಿಯರಾದ ಲೀನ ಚಂದವರ್ಕರ್, ಇಂಕಾರ್ ಮತ್ತು ವಿದ್ಯಾ ಸಿನ್ಹಾ ಅವರೊಂದಿಗೆ ನಟಿಸಿದ್ದಾರೆ. ವಿನೋದ್ ಖನ್ನಾ ರವರ ಹೆಚ್ಚು ಸಕ್ಸಸ್ ಫುಲ್ ಚಿತ್ರಗಳೆಂದರೆ 'Gaddaar', 'ಆಪ್ ಕಿ ಖಾತಿರ್', 'ರಾಜ್ ಮಹಲ್', 'ಮೇನ್ ತುಳ್ಸಿ ತೇರೆ ಅಂಗನ್ ಕಿ'.

ಬಾಲಿವುಡ್ ಖ್ಯಾತ ನಟರೊಂದಿಗೆ ವಿನೋದ್ ಖನ್ನಾ ಅಭಿನಯ

ವಿನೋದ್ ಖನ್ನಾ ರವರು ಹಿಂದಿ ಚಿತ್ರಗಳಲ್ಲಿ ಸೊಲೋ ಹೀರೋ ಆಗಿ ಮಾತ್ರವಲ್ಲದೇ 47 ಮಲ್ಟಿಸ್ಟಾರರ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಶಶಿಕಪೂರ್ ಅವರೊಂದಿಗೆ 'ಶಂಕರ್ ಶಂಭು', 'ಚೋರ್ ಸಿಪಾಹೀ' ಚಿತ್ರಗಳಲ್ಲಿ, ಅಮಿತಾ ಬಚ್ಚನ್ ಅವರೊಂದಿಗೆ 'ಹೆರ ಫೆರಿ', 'ಖೂನ್ ಪಸಿನಾ', ಅಮರ್ ಅಕ್ಬರ್ ಆಂಥೋನಿ', 'ಜಮೀರ್' ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ರಣಧಿರ್ ಕಪೂರ್, ಸುನಿಲ್ ದತ್, ಜಿತೇಂದ್ರ, ಧಮೇಂದ್ರ ಅವರೊಂದಿಗೆ ಅಭಿನಯಿಸಿದ್ದರು.

ವಿನೋದ್ ಖನ್ನಾ ಗೆ ಲಭಿಸಿದ ಪ್ರಶಸ್ತಿಗಳು

145 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ವಿನೋದ್ ಖನ್ನಾ ರವರಿಗೆ ಹಲವು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. 1975 ರಲ್ಲಿ 'ಹಾಥ್ ಕಿ ಸಫೈ' ಚಿತ್ರದ ಅಭಿನಯಕ್ಕೆ ಫಿಲ್ಮ್ ಫೇರ್ ಅತ್ಯುತ್ತಮ ಫೋಷಕ ನಟ ಪ್ರಶಸ್ತಿ, 1999 ರಲ್ಲಿ ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿವೆ. ಅಲ್ಲದೇ ಚಿತ್ರರಂಗದ ಜೀವಮಾನ ಸಾಧನೆಗೆ 2001 ರಲ್ಲಿ 'ಕಲಾಕಾರ್' ಪ್ರಶಸ್ತಿ ಮತ್ತು 2007 ರಲ್ಲಿ ಜೀ ಸಿನಿ ಪ್ರಶಸ್ತಿ ಲಭಿಸಿದ್ದವು.

English summary
Veteran bollywood actor Vinod Khanna passes away at 70, he was suffering from cancer.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X