ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ಉಸಿರಾಟದ ಸಮಸ್ಯೆಯಿಂದಾಗಿ ಕೆಲವು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಹಿಂದಿ ಚಿತ್ರರಂಗದ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (72) ನಸುಕಿನಲ್ಲಿ ನಿಧನರಾಗಿದ್ದಾರೆ.

Recommended Video

Saroj Khan no more,ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ|Bollywood|Filmibeat Kannada

ಉಸಿರಾಟದ ತೊಂದರೆಗೆ ಒಳಗಾಗಿದ್ದ ಸರೋಜ್ ಖಾನ್ ಅವರನ್ನು ಜೂನ್ 17ರಂದು ಮುಂಬೈನ ಬಾಂದ್ರಾದಲ್ಲಿನ ಗುರು ನಾನಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸತತ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದರು. ಆದರೆ, ಶುಕ್ರವಾರ ರಾತ್ರಿ 1.52ರ ವೇಳೆಗೆ ಹೃದಯಾಘಾತಕ್ಕೆ ಒಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ. ತೀವ್ರ ಮಧುಮೇಹ ಮತ್ತು ಇತರೆ ಅನಾರೋಗ್ಯದ ಸಮಸ್ಯೆಗಳು ಅವರನ್ನು ಕಾಡುತ್ತಿದ್ದವು.

ಸರೋಜ್ ಖಾನ್ ಅವರನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದಿತ್ತು. ಶೀತದ ಕಾರಣದಿಂದಾಗಿ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಸರೋಜ್ ಅವರನ್ನು ಇನ್ನು ಎರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಅದಕ್ಕೂ ಮೊದಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅವರ ಮಗಳು ಸುಖಿನಾ ಖಾನ್ ತಿಳಿಸಿದ್ದಾರೆ. ಮುಂದೆ ಓದಿ...

2,000 ಹಾಡುಗಳಿಗೆ ಸಂಯೋಜನೆ

2,000 ಹಾಡುಗಳಿಗೆ ಸಂಯೋಜನೆ

ಬಾಲಿವುಡ್‌ನಲ್ಲಿ ಸುಮಾರು ನಾಲ್ಲು ದಶಕಗಳ ಕಾಲ ನೃತ್ಯ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸರೋಜ್ ಖಾನ್, 2,000ಕ್ಕೂ ಅಧಿಕ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸರೋಜ್ ಅವರು ಪತಿ ಬಿ. ಸೋಹನ್‌ಲಾಲ್ ಮಗ ಹಮೀದ್ ಖಾನ್, ಹೆಣ್ಣುಮಕ್ಕಳಾದ ನಟಿ ಹೀನಾ ಖಾನ್ ಮತ್ತು ಸುಖಿನಾ ಖಾನ್ ಅವರನ್ನು ಅಗಲಿದ್ದಾರೆ.

ಗೀತಾ ಮೇರಾ ನಾಮ್

ಗೀತಾ ಮೇರಾ ನಾಮ್

ಮೂರು ವರ್ಷದವರಾಗಿದ್ದಾಗಿನಿಂದಲೇ ಹಿನ್ನೆಲೆ ನರ್ತಕಿಯಾಗಿ ಕೆಲಸ ಆರಂಭಿಸಿದ್ದ ಸರೋಜ್ ಖಾನ್, 1974ರಲ್ಲಿ 'ಗೀತಾ ಮೇರಾ ನಾಮ್' ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿದ್ದರು.

ಜನಪ್ರಿಯವಾಗಿದ್ದ ನೃತ್ಯಗಳು

ಜನಪ್ರಿಯವಾಗಿದ್ದ ನೃತ್ಯಗಳು

ಮಿ. ಇಂಡಿಯಾ ಚಿತ್ರದ 'ಹವಾ ಹವಾಯಿ', ತೇಜಬ್ ಚಿತ್ರದ 'ಏಕ್ ದೋ ತೀನ್', ಬೇಟಾ ಚಿತ್ರದ 'ಧಕ್ ಧಕ್ ಕರ್ನೆ ಲಗಾ', ದೇವದಾಸ್ ಚಿತ್ರದ 'ಡೋಲಾ ರೆ ಡೋಲಾ' ಮುಂತಾದ ಸೂಪರ್ ಹಿಟ್ ಹಾಡುಗಳಲ್ಲಿ ಬಹು ಜನಪ್ರಿಯವಾಗಿದ್ದ ನೃತ್ಯಗಳನ್ನು ಸಂಯೋಜಿಸಿದ್ದ ಸರೋಜ್ ಖಾನ್. 2019ರಲ್ಲಿ ಕರಣ್ ಜೋಹರ್ ನಿರ್ಮಾಣದ 'ಕಳಂಕ್' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರಿಗೆ 'ತಬಾಹ್ ಹೋ ಗಯೆ' ಹಾಡನ್ನು ಕೊನೆಯದಾಗಿ ಸಂಯೋಜಿಸಿದ್ದರು.

ಇಂದು ಅಂತ್ಯಸಂಸ್ಕಾರ

ಇಂದು ಅಂತ್ಯಸಂಸ್ಕಾರ

ಸರೋಜ್ ಖಾನ್ ಅವರ ಮೃತದೇಹವನ್ನು ಮಲಾಡ್‌ನ ಅಹ್ಲೆ ಸುನ್ನತ್ ಚಿತಾಗಾರಕ್ಕೆ ಕೊಂಡೊಯ್ಯಲಾಗಿದೆ. ಮಲಾಡ್ ಚೌಕಿಯಲ್ಲಿ ಶುಕ್ರವಾರ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

More from Filmibeat

English summary
Veteran bollywood choreographer Saroj Khan who was admitted to hospital in June 17, dies of cardiac arrest on Friday night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X