"ಸೀರೆಯ ಸೆರಗು ಜಾರುತ್ತೆ ಎಂದೆ.. ನನಗೂ ಅದೇ ಬೇಕು ಅಂದ": ಅಹಿತರಕರ ಆ ಘಟನೆ ನೆನೆದ ಹೇಮಾ ಮಾಲಿನಿ
ಭಾರತೀಯ ಚಿತ್ರರಂಗ ಕಂಡ ಅದ್ಭುತ ಹಾಗೂ ಯಶಸ್ಸು ಕಂಡ ನಟಿಯರಲ್ಲಿ ಹೇಮಾ ಮಾಲಿನಿ ಕೂಡ ಒಬ್ಬರು. ಒಂದು ಕಾಲದಲ್ಲಿ ಹೇಮಾ ಮಾಲಿನಿಗಿದ್ದ ಕ್ರೇಜ್‌ಗೆ ಬಾಲಿವುಡ್ ಬೇರಗಾಗಿದ್ದು ಇದೆ. ಈಗಲೂ ಹೇಮಾ ಮಾಲಿನಿಗೆ ಅವರದ್ದೇ ಆದ ಅಭಿಮಾನ ಬಳಗವಿದೆ. ಇಂದಿಗೂ ಹೇಮಾ ಮಾಲಿನಿ ಅದೆಷ್ಟೋ ಮಂದಿಗೆ ಡ್ರೀಮ್ ಗರ್ಲ್.
ಹೇಮಾ ಮಾಲಿನಿ ಇಂದಿಗೂ ಸಿನಿಮಾಗಳಲ್ಲಿ ನಟಿಸಬೇಕು ಅಂತ ಬಯಸುವ ಅದೆಷ್ಟೋ ಮಂದಿ ಸಿನಿಪ್ರೇಮಿಗಳು ಇದ್ದಾರೆ. ಆದರೆ, ಈ ಹಿರಿಯ ನಟಿ ಮಾತ್ರ ನಟನೆಯಿಂದ ದೂರವೇ ಉಳಿದಿದ್ದಾರೆ. ಹೀಗಿದ್ದರೂ, ಇತ್ತೀಚೆಗೆ ನೀಡಿದ ಸಂದರ್ಶನವೊಂದು ಸಿಕ್ಕಾ ಪಟ್ಟೆ ವೈರಲ್ ಆಗಿದೆ.

ಈ ಸಂದರ್ಶನದಲ್ಲಿ ಹೇಮಾ ಮಾಲಿನಿ, ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ನಿರ್ದೇಶಕನೊಬ್ಬ ಹೇಮಾ ಮಾಲಿನಿ ಸೀರೆ ಜಾರಿಸಲು ಯತ್ನಿಸಿದ ಪ್ರಸಂಗ ಬಗ್ಗೆ ಹೇಳಿದ ಮಾತು ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಅಂತಹದ್ದೇನಾಯ್ತು ಅಂತ ತಿಳಿಯೋಕೆ ಮುಂದೆ ಓದಿ.
"ಸೀರೆ ಕೆಳಗೆ ಬೀಳುತ್ತೆ"
ಇತ್ತೀಚೆಗೆ ಹೇಮಾ ಮಾಲಿನಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನಿರ್ದೇಶಕರೊಬ್ಬರು ಅವರೊಂದಿಗೆ ಶೂಟಿಂಗ್ ಸೆಟ್ಟಿನಲ್ಲಿ ನಡೆದುಕೊಂಡ ಘಟನೆ ಬಗ್ಗೆ ರಿವೀಲ್ ಮಾಡಿದ್ದಾರೆ. ನಿರ್ದೇಶಕರೊಬ್ಬರು ಸೀರೆಯ ಪಿನ್ ತೆಗೆಯುವಂತೆ ಹೇಮಾ ಮಾಲಿಗೆ ಹೇಳಿದ್ದರು. ಆ ಘಟನೆ ಆಸಹ್ಯ ಹುಟ್ಟಿಸಿತ್ತು ಎಂದಿದ್ದಾರೆ.
"ಅವರು ಬೇರೆ ತರಹದ್ದೇ ಸೀನ್‌ಗಳನ್ನು ಶೂಟಿಂಗ್ ಮಾಡಬೇಕಿತ್ತು. ನಾನು ಯಾವಾಗಲೂ ಸೀರೆಗೆ ಪಿನ್ ಹಾಕುತ್ತಿದ್ದೆ. ಆಗ ನಾನು ಸೀರೆ ಬಿದ್ದು ಹೋಗುತ್ತೆ ಎಂದೆ. ಆಗ ಅವರು, ನನಗೂ ಅದೇ ಬೇಕು ಅಂದರು" ಎಂದು ಹೇಮಾ ಮಾಲಿನಿ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಈ ಘಟನೆ ಅಂದು ಅಸಹ್ಯ ಹುಟ್ಟಿಸಿದ್ದಾಗಿ ಹೇಳಿಕೊಂಡಿದ್ದಾರೆ.

"ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲ"
ಹೇಮಾ ಮಾಲಿನಿ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದರಲ್ಲೂ ರಾಜಕೀಯದ ಕಡೆಗೆ ಒಲವು ತೋರಿದ ಬಳಿಕ ಸಿನಿಮಾದಿಂದ ಕೊಂಚ ಮಟ್ಟಿಗೆ ದೂರವೇ ಉಳಿದಿದ್ದಾರೆ. ಇದೇ ಸಂದರ್ಶನದಲ್ಲಿ ತನಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲ ಎಂದೂ ಕಾರಣವನ್ನೂ ತಿಳಿಸಿದ್ದಾರೆ.
ಈಗಿನ ಕಾಲದ ನಿರ್ದೇಶಕರು ನಟ-ನಟಿಯರನ್ನು ಸುಂದರವಾಗಿ ತೋರಿಸುವುದಕ್ಕೆ ಶ್ರಮ ಪಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿನಿಮಾಗಳಲ್ಲಿ ಮತ್ತೆ ನಟಿಸುವುದಕ್ಕೆ ಇಷ್ಟವಿಲ್ಲ. ಈಗ ಸಿನಿಮಾ ಮಾಡುವುದು ದೊಡ್ಡ ಸವಾಲಿನಂತಾಗಿದೆ ಎಂದು ಡ್ರೀಮ್ ಗರ್ಲ್ ಹೇಮಾ ಮಾಲಿನಿ ಹೇಳಿದ್ದಾರೆ.
"ರಾಜ್ ಕಪೂರ್ ಆಫರ್ ಕೊಟ್ಟಿದ್ರು"
ಬಾಲಿವುಡ್ ಶೋ ಮ್ಯಾನ್ ರಾಜ್ ಕಪೂರ್ 'ಸತ್ಯಂ ಶಿವಂ ಸುಂದರಂ' ಸಿನಿಮಾ ಮಾಡಲು ನಿರ್ಧರಿಸಿದ್ದರು. ಆಗ ಹೇಮಾ ಮಾಲಿನಿಗೆ ಆಫರ್ ಕೊಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಂತಹ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ ಅಂತ ಗೊತ್ತಿದ್ದರೂ, ಆಫರ್ ನೀಡಿದ್ದರೆಂದು ಹೇಮಾ ಮಾಲಿನಿ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
" ಇದು ಸಿನಿಮಾ.. ನೀನು ಇಂತಹ ಸಿನಿಮಾ ಮಾಡುವುದಿಲ್ಲ ಎಂದು ಗೊತ್ತಿದೆ. ಆದರೆ, ನನಗೆ ನೀನು ಈ ಸಿನಿಮಾದಲ್ಲಿ ನಟಿಸಬೇಕು" ಎಂದು ರಾಜ್ ಕಪೂರ್ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಭಾಷಣೆ ನಡೆಯುವಾಗ ಪಕ್ಕದಲ್ಲಿಯೇ ತನ್ನ ತಾಯಿ ಕೂತಿದ್ದರು ಎಂದು ಹೇಮಾ ಮಾಲಿನಿ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











