Chhaava Box Office Day 1: ರಶ್ಮಿಕಾ-ವಿಕ್ಕಿ ಕೌಶಲ್ 'ಛಾವಾ' ಬಾಕ್ಸಾಫೀಸ್‌ ಲೆಕ್ಕಾಚಾರವೇನು?

ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಛಾವಾ' ರಿಲೀಸ್ ಆಗಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನ ನಟನೆಯ ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮರಾಠಿಗರ ಹೆಮ್ಮೆ ಛತ್ರಪತಿ ಸಾಂಬಾಜಿ ಮಹಾರಾಜ್ ಹೋರಾಟದ ಬದುಕನ್ನು ತೆರೆಮೇಲೆ ತರಲಾಗಿದೆ. ವಿಕ್ಕಿ ಕೌಶಲ್ ಸಾಂಬಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಶಿವಾಜಿ ಸಾವಂತ್ ಬರೆದು ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಲಕ್ಷ್ಮಣ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಹಾಗೂ ಅಕ್ಷಯ್ ಖನ್ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಜೆಟ್ ಹಾಗೂ ಬಹು ದೊಡ್ಡ ತಾರಾಗಣದ 'ಛಾವಾ' ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಂದ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು.

Vicky Kaushal and Rashmika Mandanna film Chhaava Day 1 Box office prediction

ಇಂದು (ಫೆಬ್ರವರಿ 14) 'ಛಾವಾ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಐತಿಹಾಸಿಕ ಸಿನಿಮಾವನ್ನು ನೋಡಿ ಥಿಯೇಟರ್‌ನಿಂದ ಹೊರ ಬಂದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಂತ ಎಲ್ಲಾ ಕಡೆಯಲ್ಲೂ ಈ ಸಿನಿಮಾ ಹೀಗೆ ರೆಸ್ಪಾನ್ಸ್ ಸಿಕ್ಕಿದೆಯಾ? ಇಲ್ಲಾ ಮಹಾರಾಷ್ಟ್ರದಲ್ಲಿ ಮಾತ್ರ ಈ ಸಿನಿಮಾಗೆ ಬುಗ್ ಓಪನಿಂಗ್ ಸಿಕ್ಕಿದೆಯಾ? ಅನ್ನೋದನ್ನು ನೋಡುವುದಾರೇ.

ಕಣ್ಣುಗಳು ಒದ್ದೆಯಾದವು

ವಿಕ್ಕಿ ಕೌಶಲ್ 'ಛಾವಾ' ಸಿನಿಮಾ ನೋಡಿ ಮೂಕವಿಸ್ಮಿತರಾಗಿರುವ ಪ್ರೇಕ್ಷಕರೊಬ್ಬರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಈ ಸಿನಿಮಾ ನೋಡಿದ ಬಳಿಕ ಏನೂ ಹೇಳುವುದಕ್ಕೂ ತುಂಬಾನೇ ಕಷ್ಟವೆನಿಸುತ್ತಿದೆ. ಚಿತ್ರಮಂದಿರದಿಂದ ಹೊರ ಬರುವಾಗ ಕಣ್ಣುಗಳು ಒದ್ದೆಯಾಗಿದ್ದವು. ಹಾಗೇ ಹೆಮ್ಮೆಯಿಂದ ಥಿಯೇಟರ್‌ನಿಂದ ಆಚೆ ಬಂದೆ" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.

Vicky Kaushal and Rashmika Mandanna film Chhaava Day 1 Box office prediction

ಸಿನಿಮಾ ಬೋರಿಂಗ್ ಆಗಿದೆ

ಅದೇ ಇನ್ನೊಬ್ಬರು "ಮರಾಠಿ ಸಿನಿಮಾ ಮಂದಿಗೆ ಐತಿಹಾಸಿ ವಿಷಯಗಳ ಬಗ್ಗೆ ಸಿನಿಮಾ ಮಾಡುವುದಕ್ಕೆ ಬರುವುದಿಲ್ಲ. ಛಾವಾ ಅದಕ್ಕೆ ಸಾಕ್ಷಿ. ಅಕ್ಷಯ್ ಖನ್ನ ಹಾಗೂ ವಿಕ್ಕಿ ಕೌಶಲ್ ಅದ್ಭುತ ನಟನೆಯ ಹೊರತಾಗಿಯೂ ಛಾವಾ ಕೆಟ್ಟ ಸಿನಿಮ ಅಂತ ಅನಿಸುತ್ತೆ. ಮರಾಠಿ ಕಿಂಗ್ ಛತ್ರಪತಿ ಸಂಭಾಜಿ ಮಹಾರಾಜ್ ಅವರಿಗೆ ಗೌರವ ಕೊಡುತ್ತಾ ಈ ಸಿನಿಮಾ ಬೋರಿಂಗ್ ಆಗಿದೆ. ಕೇವಲ ಡೈಲಾಗ್‌ಗಳು ಕೇಳಿಸುತ್ತವೆ. ಸಿನಿಮ್ಯಾಟೋಗ್ರಫಿ ಕೆಟ್ಟದಾಗಿದೆ. ಹಿನ್ನೆಲೆ ಸಂಗೀತ, ಸಂಗೀತ ಹಾಗೂ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಧಮ್ ಇಲ್ಲ. ಥಿಯೇಟರ್‌ನಲ್ಲಿ ಸಿನಿಮಾ ನೋಡುವುದರಿಂದ ತಪ್ಪಿಸಿಕೊಳ್ಳಬಹುದು." ಎಂದು ನೆಟ್ಟಿಗರೊಬ್ಬರು ಕಿಡಿ ಕಾರಿದ್ದಾರೆ.

ಆದರೆ, ಬಹುತೇಕ ಮಂದಿ 'ಛಾವಾ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಅಕ್ಷಯ್ ಖನ್ನ ನಟನೆಯನ್ನು ಹಾಡಿ ಹೊಗಳಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದರಿಂದ ತೆಲುಗು ಹಾಗೂ ದಕ್ಷಿಣ ಭಾರತದಲ್ಲಿ ಸದ್ದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ಬೇರೆನೇ ಇದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ 'ಛಾವಾ' ಮೊದಲ ದಿನ ಬಾಕ್ಸಾಫೀಸ್‌ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಿಂದ 'ಛಾವಾ' ಸಿನಿಮಾ 13.78 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. 4.87 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದವು. ಹಾಗೇ ದೇಶಾದ್ಯಂತ 14,063 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.

ಟ್ರೇಡ್ ಎಕ್ಸ್‌ಪರ್ಟ್‌ಗಳ ಅಂದಾಜಿನ ಪ್ರಕಾರ ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಅನ್ನೂ ಸೇರಿಸಿ 23 ರಿಂದ 24 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಹಾಗೇ ಇನ್ನೊಂದು ಕಡೆ ವಿಕ್ಕಿ ಕೌಶಲ್ ವೃತ್ತಿ ಬದುಕಿನಲ್ಲೇ ಬಿಗ್ ಓಪನಿಂಗ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಹೀಗಾಗಿ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

More from Filmibeat

English summary
Vicky Kaushal and Rashmika Mandanna film Chhaava Day 1 Box office prediction;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X