ಕತ್ರಿನಾ ಜೊತೆ ಮದುವೆ ಬಳಿಕ ವಿಕ್ಕಿ ಕೌಶಲ್ ವಿರುದ್ಧ ಕೇಸ್: ದೂರು ದಾಖಲಿಸಿದ್ದು ಯಾರು? ಯಾಕೆ?

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ತಿಂಗಳು ಕೂಡ ಕಳೆದಿಲ್ಲ. ವಿವಾಹದ ಬಳಿಕ ಈ ಜೋಡಿ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳಲ್ಲಿ ಬ್ಯುಸಿಯಾಗಿತ್ತು. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಇಬ್ಬರು ಹನಿಮೂನ್‌ಗೆ ಬ್ರೇಕ್ ಹಾಕಿ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೂ ಬಿಡುವಿನ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದಾರೆ. ಇದೇ ಖುಷಿಯಲ್ಲಿರುವಾಗಲೇ ವಿಕ್ಕಿ ಕೌಶಲ್ ವಿರುದ್ಧ ಇಂದೋರ್‌ನಲ್ಲಿ ದೂರು ದಾಖಲಾಗಿದೆ.

ಒಂದೇ ಒಂದು ಫೋಟೊ ವಿಕ್ಕಿ ಕೌಶಲ್ ವಿರುದ್ಧ ದಾಖಲಾಗುವಂತೆ ಮಾಡಿದೆ. ಅದೂ ಸಿನಿಮಾದ ಶೂಟಿಂಗ್ ವೇಳೆ ತೆಗೆದ ಫೋಟೊ. ಕತ್ರಿನಾ ಕೈಫ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ವಿಕ್ಕಿ ಕೌಶಲ್‌ಗೆ ದಿಢೀರನೇ ಹೊಸ ಸಮಸ್ಯೆ ಎದುರಾಗಿದೆ. ಮಧ್ಯಪ್ರದೇಶದ ಸಾಮಾನ್ಯ ವ್ಯಕ್ತಿಯೊಬ್ಬ ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು ದಾಖಲಿಸಿದ್ದು ಎಲ್ಲಡೆ ಬಹಳಷ್ಟು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿಕ್ಕಿ ವಿರುದ್ಧ ದೂರು ದಾಖಲಾಗಿದ್ದು ಏಕೆ? ದೂರು ದಾಖಲಿಸಿದ ವ್ಯಕ್ತಿ ಯಾರು? ಪೊಲೀಸರು ಹೇಳಿದ್ದೇನು? ಎಂದು ತಿಳಿಯಲು ಮುಂದೆ ಓದಿ.

ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು

ಬಾಲಿವುಡ್ ನಟ ವಿಕ್ಕಿ ಕೌಶಲ್ ವಿರುದ್ಧ ದೂರು

ವಿಕ್ಕಿ ಕೌಶಲ್ ಹಾಗೂ ಬಾಲಿವುಡ್ ನಟಿ ಸಾರಾ ಅಲಿಖಾನ್ ಒಟ್ಟಿಗೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ವಿಕ್ಕಿ ಹಾಗೂ ಸಾರಾ ಇಬ್ಬರೂ ಡಿಕ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದು ವೈರಲ್ ಆಗಿತ್ತು. ವಿಕ್ಕಿ ಕೌಶಲ್ ನಟಿ ಸಾರಾ ಅಲಿಖಾನ್‌ರನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿರುವ ಫೋಟೊ. ಇದೇ ಫೋಟೊ ಈಗ ವಿಕ್ಕಿ ಕೌಶಲ್‌ ವಿರುದ್ಧ ದೂರು ದಾಖಲಾಗಲು ಪ್ರಮುಖ ಕಾರಣ.

ವಿಕ್ಕಿ ವಿರುದ್ಧ ದೂರು ದಾಖಲಾಗಿದ್ದು ಏಕೆ?

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಿನಿಮಾ ಶೂಟಿಂಗ್ ವೇಳೆ ತೆಗೆದ ಫೋಟೊ ನೋಡಿದ ಮಧ್ಯಪ್ರದೇಶ ಇಂದೋರ್‌ನ ವ್ಯಕ್ತಿ ಜೈ ಸಿಂಗ್ ಯಾದವ್ ಎಂಬುವವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನ್ನ ಅನುಮತಿ ಇಲ್ಲದೆ ನನ್ನ ವಾಹನದ ನಂ ಪ್ಲೇಟ್‌ನಲ್ಲಿರುವ ಸಂಖ್ಯೆಯನ್ನು ಸಿನಿಮಾದಲ್ಲಿ ಬಳಸಲಾಗಿದೆ. ಇದು ಸಿನಿಮಾ ತಂಡದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ." ಎಂದು ಜೈ ಸಿಂಗ್ ಯಾದವ್ ತಿಳಿದ್ದಾನೆ.

ಪೊಲೀಸರು ದೂರಿನ ಬಗ್ಗೆ ಏನಂತಾರೆ?

ಇಂದೋರ್ ಪ್ರಜೆ ಜೈ ಸಿಂಗ್ ಯಾದವ್ ದೂರು ದಾಖಲಿಸುತ್ತಿದ್ದಂತೆ ಇದು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಪೊಲೀಸರು ಜೈ ಸಿಂಗ್ ಯಾದವ್ ನೀಡಿದ ದೂರನ್ನು ದಾಖಲಿಸಿಕೊಂಡಿದ್ದಾರೆ. " ನಾವು ದೂರನ್ನು ಸ್ವೀಕರಿಸಿದ್ದು, ಸಿನಿಮಾದಲ್ಲಿ ನಂಬರ್ ಪ್ಲೇಟ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರಾ ಎಂದು ಪರಿಶೀಲನೆ ಮಾಡುತ್ತೇವೆ. ಮೋಟಾರ್ ಸೈಕಲ್ ಆಕ್ಟ್ ಪ್ರಕಾರ, ಕ್ರಮ ಕೈಗೊಳ್ಳಲಾಗುವುದು. ಸಿನಿಮಾ ತಂಡ ಇಂದೋರ್‌ನಲ್ಲಿ ಇದ್ದರೆ, ಅವರನ್ನು ವಿಚಾರಣೆ ಮಾಡಲಾಗುವುದು." ಎಂದು ಇಂದೋರ್‌ನ ಬಂಗಾಂಗ ವ್ಯಾಪ್ತಿಯ ಎಸ್‌ಐ ರಾಜೇಂದ್ರ ಸೋನಿ ಸ್ಪಷ್ಟಪಡಿಸಿದ್ದಾರೆ.

ವಿಕ್ಕಿಯನ್ನು ಅಪ್ಪಿ ಬೀಳ್ಕೊಟ್ಟ ಕತ್ರಿನಾ

ವಿಕ್ಕಿಯನ್ನು ಅಪ್ಪಿ ಬೀಳ್ಕೊಟ್ಟ ಕತ್ರಿನಾ

2021 ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರಿಗೂ ಆಶಾದಾಯಕವಾಗಿತ್ತು. ಒಂದು ಕಡೆ ಸಿನಿಮಾಗಳು ಯಶಸ್ಸು ಕಂಡಿದ್ದರೆ, ಇನ್ನೊಂದೆಡೆ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಬ್ರೇಕ್ ತೆಗೆದುಕೊಳ್ಳದೆ ಈ ಜೋಡಿ ಕೆಲಸ ಮಾಡುತ್ತಿದೆ. ಬಾಲಿವುಡ್‌ ಮೂಲಗಳ ಪ್ರಕಾರ ವಿಕ್ಕಿ ಪತ್ನಿ ಕತ್ರಿನಾ ಕೈಫ್ ಜೊತೆ ಹೊಸ ವರ್ಷ ಆಚರಣೆ ಮಾಡಲು ಒಂದು ದಿನ ಬ್ರೇಕ್ ತೆಗೆದುಕೊಂಡಿದ್ದರು. ಬಳಿಕ ಮತ್ತೆ ಸಿನಿಮಾ ಸೆಟ್ಟಿಗೆ ಮರಳಿದ್ದಾರೆ. ಈ ವೇಳೆ ವಿಕ್ಕಿಯನ್ನು ಏರ್‌ಪೋರ್ಟ್‌ಗೆ ಬಿಡಲು ಕತ್ರಿನಾ ಕೈಫ್ ಬಂದಿದ್ದರು. ಆಗ ವಿಕ್ಕಿಯನ್ನು ಅಪ್ಪಿಕೊಂಡು ಬೀಳ್ಕೊಟ್ಟ ವಿಡಿಯೋ ಕೂಡ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Vicky Kaushal in trouble for illegal use of motorcycle number plate in Indore. The complainant has files on illegal to use of motor cycle no plate without permission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X