Chhaava Box Office Day 2: 2ನೇ ದಿನ ರಶ್ಮಿಕಾ ಮಂದಣ್ಣ ನಟಿಸಿದ ಬಾಲಿವುಡ್ ಸಿನಿಮಾದ ಕಲೆಕ್ಷನ್ ಹೇಗಿದೆ?

ರಶ್ಮಿಕಾ ಮಂದಣ್ಣ ಕೆಲವೊಮ್ಮೆ ಬೇಡ ಹೇಳಿಕೆಗಳನ್ನು ಕೊಟ್ಟು ವಿವಾದ ಸಿಕ್ಕಿಕೊಂಡಿದ್ದು ಇದೆ. ಆಗಾಗ ಕನ್ನಡಿಗರ ಕಣ್ಣು ಕೆಂಪು ಮಾಡುತ್ತಿರುವ ರಶ್ಮಿಕಾ ವಿರುದ್ಧ ಟೀಕೆಗಳ ಸುರಿಮಳೆ ಹರಿದಿದ್ದೂ ಇದೆ. ಕೆಲವೊಮ್ಮೆ ರಶ್ಮಿಕಾ ಎಷ್ಟು ಎತ್ತರಕ್ಕೆ ಬೆಳೆದರೇನು ಮಾತಾಡುವುದನ್ನು ಕಲಿತಿಲ್ಲ ಅನ್ನುವವರೂ ಇದ್ದಾರೆ. ಇವೆಲ್ಲ ಏನೇ ಇದ್ದರೂ ರಶ್ಮಿಕಾ ನಟಿಸಿದ ಸಿನಿಮಾಗಳು ಗೆಲುವಿನ ನಾಗಾಲೋಟವನ್ನು ಮುಂದುವರೆಸಿವೆ.

ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' ಬ್ಲಾಕ್‌ ಬಸ್ಟರ್ ಹಿಟ್ ಆಯ್ತು. ಅಲ್ಲು ಅರ್ಜುನ್ ಜೊತೆ ನಟಿಸಿದ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಬರೀತು. ಈಗ ವಿಕ್ಕಿ ಕೌಶಲ್ ಜೊತೆ ನಟಿಸಿದ 'ಛಾವಾ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರುವಾಗಿದೆ. ಎರಡನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಏರಿಕೆಯಾಗಿದ್ದು, ಮೆಗಾ ಹಿಟ್ ಆಗುವ ಸೂಚನೆ ನೀಡಿದೆ.

Vicky Kaushal Rashmika Mandanna Akshay Khanna film Chhaava Box office collection Day 2 report

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಛಾವಾ' ಫೆಬ್ರವರಿ 14ರಂದು ವಿಶ್ವದಾದ್ಯಂತ ರಿವೀಲ್ ಆಗಿದೆ. ವಿಕ್ಕಿ ಕೌಶಲ್ ಹಾಗೂ ಅಕ್ಷಯ್ ಖನ್ನ ನಟನೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಛಾವಾ' ಮೊದಲನೇ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ. ಇನ್ನೆರಡು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಲಿದೆ. ಹಾಗಿದ್ದರೆ, ಎರಡನೇ ದಿನದ ಕಲೆಕ್ಷನ್ ಎಷ್ಟು?

'ಛಾವಾ'ಗೆ ಯಾಕಿಷ್ಟು ಕ್ರೇಜ್ ?

ಮರಾಠ ಸಾಮ್ರಾಜ್ಯದ ದೊರೆ ಛತ್ರಪತಿ ಸಾಂಭಾಜಿ ಮಹಾರಾಜ್ ಚರಿತ್ರೆಯನ್ನು ಆಧರಿಸಿದ ಸಿನಿಮಾ. ಮೊಘಲರ ದೊರೆ ಔರಂಗಜೇಬನ ವಿರುದ್ಧ ಸೆಣೆಸಾಡಿದ್ದ ಮರಾಠರ ಮಹಾರಾಜನ ವೀರಾವೇಶದ ಹೋರಾಟ ಹಾಗೂ ತ್ಯಾಗದ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಸಿನಿಮಾ ಹಿಂದಿ ಹಾಗೂ ಮರಾಠಿ ಭಾಷೆ ಪ್ರಾಬಲ್ಯದ ಏರಿಯಾಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮರಾಠರು ಈ ಸಿನಿಮಾ ನೋಡಿ ಹೆಮ್ಮೆ ಪಡುವುದರ ಜೊತೆಗೆ ಭಾವುಕರಾಗಿ ಹೊರ ಬರುತ್ತಿದ್ದಾರೆ.

Vicky Kaushal Rashmika Mandanna Akshay Khanna film Chhaava Box office collection Day 2 report

ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ?

'ಛಾವಾ' ಬಾಕ್ಸಾಫೀಸ್‌ ಕಲೆಕ್ಷನ್ ಪಾಸಿಟಿವ್ ಆಗಿದೆ. ಮೊದಲ ದಿನ ಭಾರತದಾದ್ಯಂತ ಈ ಸಿನಿಮಾ 31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದು ವಿಕ್ಕಿ ಕೌಶಲ್ ವೃತ್ತಿ ಬದುಕಿನಲ್ಲೇ ಬೆಸ್ಟ್ ಓಪನಿಂಗ್ ಪಡೆದುಕೊಂಡ ಸಿನಿಮಾ ಆಗಿದೆ. ಎರಡನೇ ದಿನವೂ ಈ ಸಿನಿಮಾ ಕ್ರೇಜ್ ಮುಂದುವರೆದಿದ್ದು 36.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡು ದಿನಗಳಲ್ಲಿ ಒಟ್ಟು 67.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

3 ದಿನಕ್ಕೆ 100 ಕೋಟಿ ಕ್ಲಬ್ ಸೇರುತ್ತಾ?

ವಿಕ್ಕಿ ಕೌಶಲ್ ಹಾಗೂ ಅಕ್ಷಯ್ ಖನ್ನ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. 'ಛಾವಾ' ಎರಡು ದಿನಗಳ ಕಲೆಕ್ಷನ್ ನೋಡಿದರೆ, ಮೂರನೇ ದಿನ 40 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ. ಇಂದು (ಫೆಬ್ರವರಿ 16) 'ಛಾವಾ' 33 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾದರೆ, 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಸಿನಿಮಾಗಳ ಸದ್ದೇ ಇಲ್ಲದ ಈ ಹೊತ್ತಲ್ಲಿ 'ಛಾವಾ' ಬಾಲಿವುಡ್‌ಗೆ ಹೊಸ ಹುರುಷು ನೀಡಿದೆ.

ಲಕ್ಕಿ ಲೇಡಿ ರಶ್ಮಿಕಾ ಮಂದಣ್ಣ

ಬಾಲಿವುಡ್ ಮಂದಿಗೆ ರಶ್ಮಿಕಾ ಮಂದಣ್ಣ ಮತ್ತೆ ಲಕ್ಕಿ ಲೇಡಿ ಅಂತ ಸಾಬೀತಾಗಿದ್ದಾರೆ. 'ಅನಿಮಲ್' ಹೆಚ್ಚು ಕಡಿಮೆ ಸಾವಿರ ಕೋಟಿ ಕಲೆಕ್ಷನ್ ಮಾಡಿತ್ತು. 'ಪುಷ್ಪ 2' 1800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ 'ಛಾವಾ' ಮೇಲೆ ಎಲ್ಲರೂ ಕಣ್ಣು ಬಿದ್ದಿದೆ. ಈ ಸಿನಿಮಾ 500 ಕೋಟಿ ರೂಪಾಯಿ ಗಳಿಸಿದರೂ ವಿಕ್ಕಿ ಕೌಶಲ್ ಪಾಲಿಗೆ ಲಕ್ಕಿ ಹೀರೋಯಿನ್ ಆಗುವುದರಲ್ಲಿ ಎರಡು ಮಾತಿಲ್ಲ.

More from Filmibeat

English summary
Vicky Kaushal, Rashmika Mandanna, Akshay Khanna film Chhaava Box office collection Day 2 report;
Read more about: box office rashmika mandanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X