Chhaava Box Office Day 3: 3ನೇ ದಿನ ಬಾಕ್ಸಾಫೀಸ್‌ನಲ್ಲಿ ಗುಡುಗಿದ ರಶ್ಮಿಕಾ ಸಿನಿಮಾ 'ಛಾವಾ'; ಕಲೆಕ್ಷನ್ ಎಷ್ಟು?
ವಿಕ್ಕಿ ಕೌಶಲ್, ಅಕ್ಷಯ್ ಖನ್ನ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ 'ಛಾವಾ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮರಾಠರ ಮಹಾರಾಜನ ಕುರಿತಾದ ಈ ಸಿನಿಮಾಗೆ ಹಿಂದಿ ಬೆಲ್ಟ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ಮೂರು ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾ ಯಶಸ್ಸಿ ಮೂಲಕ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಬಾಲಿವುಡ್ ಮಂದಿಗೆ ಲಕ್ಕಿ ಅಂತ ಸಾಬೀತಾಗಿದ್ದಾರೆ.
ಮೊದಲ ಮೂರು ದಿನಗಳಲ್ಲಿ 'ಛಾವಾ' ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಸಿಕ್ಕಿರುವ ರೆಸ್ಪಾನ್ಸ್‌ಗೆ ಬಾಲಿವುಡ್ ಮಂದಿ ಖುಷಿಯಾಗಿದ್ದಾರೆ. ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಆಗುವ ಎಲ್ಲಾ ಸಾಧ್ಯತೆಗಳಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಮೊದಲ ಎರಡು ದಿನಗಳಿಗಿಂತ ಮೂರನೇ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಛತ್ರಪತಿ ಸಾಂಬಾಜಿ ಮಹಾರಾಜನ ಐತಿಹಾಸ ಕತೆಯಾಗಿದ್ದರಿಂದ ಪ್ರೇಕ್ಷಕರು ಭಾವುಕರಾಗಿ ಈ ಸಿನಿಮಾವನ್ನು ನೋಡುತ್ತಿದ್ದಾರೆ.

ಛತ್ರಪತಿ ಸಾಂಬಾಜಿ ಮಹಾರಾಜನ ಪಾತ್ರದಲ್ಲಿ ವಿಕ್ಕಿ ಕೌಶಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಹಾಗೇ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಗೆ ಹೆಚ್ಚಿ ಮಾರ್ಕ್ಸ್ ಕೊಟ್ಟಿದ್ದಾರೆ. ಸಾಂಬಾಜಿ ಪತ್ನಿಯಾಗಿ ರಶ್ಮಿಕಾ ಮಂದಣ್ಣ ಕೂಡ ಜನರ ಮನಗೆದಿದ್ದಾರೆ. ಹಾಗಿದ್ದರೆ, ಮೂರನೇ ದಿನ 'ಛಾವಾ' ಕಲೆಕ್ಷನ್ ಹೇಗಿದೆ? ಈ ಮೂರು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿತಾ? ತಿಳಿಯಲು ಮುಂದೆ ಓದಿ.
ಹಿಂದಿ ಬೆಲ್ಟ್‌ನಲ್ಲಿ 'ಛಾವಾ' ದರ್ಬಾರ್
ಮುಂಬೈ, ಪೂನಾ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ 'ಛಾವಾ' ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮುಂಬೈನಲ್ಲಿ ಶೇ.87ರಷ್ಟು ಆಕ್ಯೂಪೆನ್ಸಿ, ಪೂನಾದಲ್ಲಿ ಶೇ.94.50, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಶೇ. 72ರಷ್ಟು ಆಕ್ಯೂಪೆನ್ಸಿ ದಾಖಲಾಗಿದೆ ಎಂದು ಸಿನಿಮಾ ಟ್ರೇಡ್‌ಗಳನ್ನು ವರದಿ ಮಾಡುವ ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಈ ಸಿನಿಮಾ ಶೇ.60 ಆಕ್ಯೂಪೆನ್ಸಿ ಇದೆ.

3ನೇ ದಿನ ಬಂಪರ್ ಕಲೆಕ್ಷನ್
'ಛಾವಾ' ಮೂರನೇ ದಿನ ನಿರೀಕ್ಷೆಯಂತೆ ಕಲೆಕ್ಷನ್‌ನಲ್ಲಿ ಏರಿಯಾಗಿದೆ. 3ನೇ ದಿನ ಹಿಂದಿ ಏರಿಯಾಗಳಿಂದ ಹೆಚ್ಚು ಕಲೆಕ್ಷನ್ ಬಂದಿದೆ. ಅದರಲ್ಲೂ ಮಹಾರಾಷ್ಟ್ರದಿಂದ 3ನೇ ದಿನ ಹೆಚ್ಚು ಕಲೆಕ್ಷನ್ ಆಗಿದೆ. ಮುಂಬೈ ಹಾಗೂ ಪೂನಾದಿಂದ ಬಾಕ್ಸಾಫೀಸ್‌ಗೆ ಹೆಚ್ಚು ಹಣ ಹರಿದು ಬಂದಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 3ನೇ ದಿನ ಅಂದರೆ, ಭಾನುವಾರದಂದು 48.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
3 ದಿನಗಳಲ್ಲಿ 100 ಕೋಟಿ
'ಛಾವಾ' ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿತ್ತು. ಇದು ವಿಕ್ಕಿ ಕೌಶಲ್ ವೃತ್ತಿ ಬದುಕಿನಲ್ಲೇ ಉತ್ತಮ ಓಪನಿಂಗ್ ಪಡೆದುಕೊಂಡ ಸಿನಿಮಾ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದರು. ಮೌತ್ ಪಬ್ಲಿಸಿಟಿಯಿಂದ ಮೊದಲನೇ ದಿನಕ್ಕಿಂತಲೂ ಎರಡನೇ ದಿನ ಏರಿಕೆ ಕಂಡಿತ್ತು. ಇನ್ನು ಮೂರನೇ ದಿನ ಸುಮಾರು 16 ಕೋಟಿ ಹೆಚ್ಚು ಕಲೆಕ್ಷನ್ ಮಾಡಿದೆ.
ಮೊದಲನೇ ದಿನ ₹31 ಕೋಟಿ
ಎರಡನೇ ದಿನ ₹37 ಕೋಟಿ
ಮೂರನೇ ದಿನ ₹48.5 ಕೋಟಿ
ಒಟ್ಟು ₹116.5 ಕೋಟಿ
ಸೋಮವಾರ ಪರೀಕ್ಷೆ ಗೆಲ್ಲುತ್ತಾ?
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಛಾವಾ' ಸೋಮವಾರದ ಪರೀಕ್ಷೆ ಗೆಲ್ಲಬೇಕಿದೆ. ಮುಂದಿನ ವೀಕೆಂಡ್‌ವರೆಗೂ ಈ ಸಿನಿಮಾದ ಕಲೆಕ್ಷನ್ ಸ್ಟಡಿಯಾಗಿಯೇ ಇದ್ದರೆ, ವಿಕ್ಕಿ ಕೌಶಲ್ ನಟಿಸಿದ್ದ 'ಉರಿ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಹಿಂದಕ್ಕೆ ಹಾಕಬಹುದು. 'ಉರಿ' ಬಾಕ್ಸಾಫೀಸ್‌ನಲ್ಲಿ ಸುಮಾರು 245 ಕೋಟಿ ರೂ ಕಲೆಕ್ಷನ್ ಮಾಡಿತ್ತು.


Click it and Unblock the Notifications











