Chhaava Box Office Day 6: 6ನೇ ಇನ್ನೂ ಹೆಚ್ಚಾಯ್ತು 'ಛಾವಾ' ಕಲೆಕ್ಷನ್: ಮತ್ತೆ ಗೆದ್ದ ರಶ್ಮಿಕಾ!
'ಉರಿ' ಸಿನಿಮಾ ಬಳಿಕ ವಿಕ್ಕಿ ಕೌಶಲ್‌ಗೆ ದೊಡ್ಡ ಸಕ್ಸಸ್ ಸಿಕ್ಕಿರಲಿಲ್ಲ. ಆದ್ರೀಗ 'ಛಾವಾ' ಈ ನಟನ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ ಆಗುವ ಲಕ್ಷಣಗಳು ಕಾಣುತ್ತಿವೆ. ವೀಕ್ ಡೇಸ್‌ನಲ್ಲೂ 'ಛಾವಾ' ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿದೆ. ಹಿಂದಿ ಪ್ರೇಕ್ಷಕರ ಮನಗೆದ್ದಿರುವ ಸಿನಿಮಾ ಆರನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
'ಛಾವಾ' ಸಿನಿಮಾ ಛತ್ರಪತಿ ಶಿವಾಜಿಯ ಪುತ್ರ ಸಾಂಭಾಜಿ ಮಹಾರಾಜ್ ಜೀವನದ ಕುರಿತಾದ ಕಥೆ. ನಿನ್ನೆ (ಫೆಬ್ರವರಿ 19) ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಇದ್ದಿದ್ದರಿಂದ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೂ ಕೂಡ ಏರಿಕೆ ಕಂಡಿತ್ತು. ವಿಕ್ಕಿ ಕೌಶಲ್ ಜೊತೆ ಬಾಲಿವುಡ್ ಮಂದಿಯ ಲಕ್ಕಿ ಲೇಡಿ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮರಾಠರ ದೊರೆ ಛತ್ರಪತಿ ಸಾಂಭಾಜಿ ಮಹಾರಾಜ್ ಪತ್ನಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರೆ, ಮೊಘಲ್ ದೊರೆ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನ ನಟಿಸಿದ್ದು, ಇವರ ಪಾತ್ರಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಕ್ಸಾಫೀಸ್‌ನಲ್ಲೂ 'ಛಾವಾ' ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹಾಗಿದ್ದರೆ, 6ನೇ ದಿನ 'ಛಾವಾ' ಸಿನಿಮಾದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ.
6ನೇ ದಿನ 'ಛಾವಾ' ಕಲೆಕ್ಷನ್ ಎಷ್ಟು?
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನ ಪರ್ಫಾಮೆನ್ಸ್ 'ಛಾವಾ' ಸಿನಿಮಾದ ಸಕಸ್ಸ್‌ನಲ್ಲಿ ಬಹುಪಾಲಿದೆ. ಐದನೇ ದಿನ ನಿರೀಕ್ಷೆ ಮಾಡಿದ್ದಕ್ಕಿಂತ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ. ಹಿಂದಿ ಏರಿಯಾಗಳಲ್ಲಿ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ, ದಕ್ಷಿಣ ಭಾರತದಲ್ಲಿ ಈ ಸಿನಿಮಾ ಪ್ರತಿಕ್ರಿಯೆ ಕಡಿಮೆ ಅಂತಾನೇ ಹೇಳಬಹುದು. ಇಂಡಸ್ಟ್ರಿ ಟ್ರೇಡ್ ಲೆಕ್ಕ ಹಾಕುವ ವೆಬ್ ಸೈಟ್ ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ ಆರನೇ ದಿನ 32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವೀಕ್‌ಡೇಸ್‌ನಲ್ಲಿ ಇದೊಂದು ದೊಡ್ಡ ಕಲೆಕ್ಷನ್ ಅಂತಲೇ ಹೇಳಬಹುದು.

₹200 ಕೋಟಿ ದಾಟಿತೇ?
'ಛಾವಾ' ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುವ ಲಕ್ಷಣಗಳು ಎದ್ದು ಕಾಣುತ್ತಿದೆ. ಕಳೆದ ಆರು ದಿನಗಳಲ್ಲಿ 'ಛಾವಾ' ಬಾಕ್ಸಾಫೀಸ್ ಕಲೆಕ್ಷನ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪ್ರತಿ ದಿನ ಉತ್ತಮ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಅದರಲ್ಲೂ 6ನೇ ದಿನ ಕಲೆಕ್ಷನ್ ಬಾಲಿವುಡ್ ಮಂದಿಗೆ ಸರ್ಪ್ರೈಸ್ ಕೊಟ್ಟಿದ್ದು, ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ ಆರು ದಿನಗಳಲ್ಲಿ ಈ ಸಿನಿಮಾ ₹197.75 ಕೋಟಿ ಕಲೆಕ್ಷನ್ ಮಾಡಿದೆ.
ಮೊದಲನೇ ದಿನ - ₹31 ಕೋಟಿ
ಎರಡನೇ ದಿನ - ₹37 ಕೋಟಿ
ಮೂರನೇ ದಿನ - ₹48.5 ಕೋಟಿ
ನಾಲ್ಕನೇ ದಿನ - ₹24 ಕೋಟಿ
ಐದನೇ ದಿನ - ₹25.25 ಕೋಟಿ
ಆರನೇ ದಿನ - ₹32 ಕೋಟಿ
ಒಟ್ಟು - ₹197.75 ಕೋಟಿ
ವಿಶ್ವದಾದ್ಯಂತ ಕಲೆಕ್ಷನ್ ಹೇಗಿದೆ?
ಮಹಾರಾಷ್ಟ್ರದಲ್ಲಿ ಮುಂಬೈ, ಪೂನಾದಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತಿದೆ. ಅದು ಬಿಟ್ಟರೆ ಹೈದರಾಬಾದ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಉಳಿದ ಕಡೆಗಳಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಸಾಧಾರಣವಿದೆ. ಆದರೆ, ಓವರ್‌ಸೀನ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಓವರ್ ಸೀಸ್ ರಿಪೋರ್ಟ್ ಹೊರಬೀಳಬೇಕಿದೆ. ಆದರೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ 250 ಕೋಟಿ ರೂ. ರೀಚ್ ಆಗಬಹುದೆಂದು ನಿರೀಕ್ಷೆ ಮಾಡಿದ್ದಾರೆ.
'ಉರಿ' ಸಿನಿಮಾ ಮೀರಿಸಬಹುದೇ?
ವಿಕ್ಕಿ ಕೌಶಲ್ ನಟಿಸಿದ 'ಉರಿ' ಸಿನಿಮಾ ಭಾರತದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ 244 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ವಿಕ್ಕಿ ಕೌಶಲ್‌ಗೆ ಮೊದಲ ಸೂಪರ್ ಹಿಟ್ ಸಿನಿಮಾ ಕೊಟ್ಟಿತ್ತು. ಅಲ್ಲಿಂದ ವಿಕ್ಕಿ ಕೌಶಲ್ ಸಿನಿಮಾ ಅದ್ಭುತ ಕಲೆಕ್ಷನ್ ಅಂತೇನು ಮಾಡಿರಲಿಲ್ಲ. ಆದ್ರೀಗ 'ಛಾವಾ' ಅವರ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗುತ್ತೆ ಎಂದು ಸಿನಿಮಾ ಮಂದಿ ಭವಿಷ್ಯ ನುಡಿಯುತ್ತಿದ್ದಾರೆ.


Click it and Unblock the Notifications











