Chhaava Box Office Day 4:ಸೋಮವಾರದ ಪರೀಕ್ಷೆ ಗೆದ್ದಿತೇ ರಶ್ಮಿಕಾ ಸಿನಿಮಾ? 4ನೇ ದಿನ 'ಛಾವಾ' ಗಳಿಕೆ ಎಷ್ಟು?
ಮರಾಠರ ಹೆಮ್ಮೆಯ ಸಿನಿಮಾ 'ಛಾವಾ' ವಿಶ್ವದಾದ್ಯಂತ ರಿಲೀಸ್ ಆಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಫಸ್ಟ್ ಡೇ ಫಸ್ಟ್ ಶೋದಲ್ಲೇ ಈ ಸಿನಿಮಾಗೆ ಸಿಕ್ಕಿದ್ದ ರೆಸ್ಪಾನ್ಸ್ ನೋಡಿ ಬಾಕ್ಸಾಫೀಸ್ ಲೆಕ್ಕಾಚಾರ ಶುರುವಾಗಿತ್ತು. ಛತ್ರಪತಿ ಸಾಂಭಾಜಿ ಮಹಾರಾಜ್ ಚರಿತ್ರೆಯನ್ನು ಈ ಸಿನಿಮಾ ಮೂಲಕ ಹೇಳಲಾಗಿದ್ದು, ಪ್ರೇಕ್ಷಕರು ಭಾವುಕರಾಗಿ ವೀಕ್ಷಣೆ ಮಾಡುತ್ತಿದ್ದಾರೆ.
ಮೊಘಲ್ ದೊರೆ ಔರಂಗಜೇಬನ ವಿರುದ್ಧ ಸೆಟೆದು ನಿಂತಿದ್ದ ಸಾಂಬಾಜಿ ಮಹಾರಾಜ್ ಛತ್ರಪತಿ ಶಿವಾಜಿಯ ಪುತ್ರ. ಶಿವಾಜಿ ಕಾಲವಾದ ಬಳಿಕ ಸಂಭಾಜಿ ರಾಜ್ಯಭಾರ ಶುರುವಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಔರಂಗಜೇಬನ ಕಣ್ಣು ಸಾಂಬಾಜಿಯ ಮೇಲೆ ಬಿದ್ದಿತ್ತು. ಮೊಘಲ್ ದೊರೆಯ ವಿರುದ್ಧ ತಿರುಗಿನಿಂತಿದ್ದ ಸಾಂಭಾಜಿ ಹೋರಾಟದ ಕಥೆಗೆ ಪ್ರೇಕ್ಷಕರು ಮನ ಸೋತಿದ್ದಾರೆ.

ಛತ್ರಪತಿ ಸಾಂಬಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. 'ಛಾವಾ' ರಿಲೀಸ್ ಆದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಮೊದಲ ಮೂರು ದಿನಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ನಾಲ್ಕನೇ ದಿನ ಅಂದರೆ ಮೊದಲ ಸೋಮವಾರದ ಕಲೆಕ್ಷನ್ ಮೇಲೆ ಸಿನಿಮಾದ ಭವಿಷ್ಯ ನಿಂತಿತ್ತು. ಹಾಗಿದ್ದರೆ 'ಛಾವಾ' ಸೋಮವಾರದ ಪರೀಕ್ಷೆಯನ್ನು ಗೆದ್ದಿತೇ? ನಾಲ್ಕನೇ ದಿನದ ಕಲೆಕ್ಷನ್ ಎಷ್ಟು?
ಸೋಮವಾರ ಪರೀಕ್ಷೆ ಗೆದ್ದಿತೇ?
'ಛಾವಾ' ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಮೊದಲ ಮೂರು ದಿನಗಳಿಗಿಂತ ನಾಲ್ಕನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದ್ದರೂ, ತೀರಾ ಹಿನ್ನಡೆಯಾಗಿಲ್ಲ. ಸಹಜವಾಗಿ ವಾರದ ಆರಂಭದಲ್ಲಿ ಸಿನಿಮಾದ ಕಲೆಕ್ಷನ್ ಡ್ರಾಪ್ ಆದಂತೆ ಈ ಸಿನಿಮಾ ಕೂಡ ಆಗಿದೆ. ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ 140 ಕೋಟಿ ರೂಪಾಯಿ ಗಳಿಸಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿಯಲ್ಲಿ ಹೇಳಿದೆ.

4ನೇ ದಿನದ ಕಲೆಕ್ಷನ್ ಎಷ್ಟು?
ವಾರದ ಆರಂಭದ ದಿನ 'ಛಾವಾ' ಕಲೆಕ್ಷನ್ ಡ್ರಾಪ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಲ್ಲಿ ಕಲೆಕ್ಷನ್‌ನಲ್ಲಿ ಕುಸಿತವನ್ನೂ ಕಂಡಿದೆ. ನಾಲ್ಕನೇ ದಿನ ಈ ಸಿನಿಮಾ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಭಾನುವಾರದ ಕಲೆಕ್ಷನ್‌ಗೆ ಹೋಲಿಕೆ ಮಾಡಿದರೆ, ಅರ್ಧದಷ್ಟು ಕುಸಿದಿದೆ. ಆದರೂ, ಇದು ಉತ್ತಮ ಕಲೆಕ್ಷನ್ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ 4 ದಿನಗಳ ಕಲೆಕ್ಷನ್ ಹೇಗಿದೆ?
'ಛಾವಾ' ಸಿನಿಮಾ ವಿಕ್ಕಿ ಕೌಶಲ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಹಾಗೇ ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಬಾಲಿವುಡ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವ ಎಲ್ಲಾ ಸಾಧ್ಯತೆಯಿದೆ. ಮೊದಲ ನಾಲ್ಕು ದಿನಗಳ ಕಲೆಕ್ಷನ್ ನೋಡಿದರೆ ಇನ್ನೂ ಒಂದು ವಾರ ಇದೇ ಕ್ರೇಜ್ ಮುಂದುವರೆಯುವ ಸಾಧ್ಯತೆಯಿದೆ. ಸ್ಯಾಕ್ನಿಲ್ಕ್.ಕಾಮ್ ನೀಡಿದ ಮೊದಲ ನಾಲ್ಕು ದಿನಗಳ ಕಲೆಕ್ಷನ್ ರಿಪೋರ್ಟ್ ಹೀಗಿದೆ.
ಮೊದಲನೇ ದಿನ - ₹31 ಕೋಟಿ
ಎರಡನೇ ದಿನ - ₹37 ಕೋಟಿ
ಮೂರನೇ ದಿನ - ₹48.5 ಕೋಟಿ
ನಾಲ್ಕನೇ ದಿನ - ₹24 ಕೋಟಿ
ಒಟ್ಟು - ₹140.5 ಕೋಟಿ
ಲಕ್ಕಿ ಗರ್ಲ್ ರಶ್ಮಿಕಾ
ಬಾಲಿವುಡ್ ಮಂದಿಗೆ ರಶ್ಮಿಕಾ ಮಂದಣ್ಣ ಲಕ್ಕಿ ಗರ್ಲ್ ಅಂತ ಸಾಬೀತಾಗಿದ್ದಾರೆ. ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' ಮೆಗಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ವಿಕ್ಕಿ ಕೌಶಲ್ ಜೊತೆ ನಟಿಸಿದ 'ಛಾವಾ' ಕೂಡ ಹಿಟ್ ಲಿಸ್ಟ್ ಸೇರಿಕೊಂಡಿದೆ. ಲೈಫ್ ಟೈಮ್‌ನಲ್ಲಿ ಈ ಸಿನಿಮಾ 350 ರಿಂದ 400 ಕೋಟಿ ಕಲೆಕ್ಷನ್ ಮಾಡಬಹುದು ಎಂಬುವುದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ.
Disclaimer: 'ಛಾವಾ' ಸಿನಿಮಾದ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಚಿತ್ರತಂಡ ಅಧಿಕೃತ ಮಾಹಿತನ್ನು ನೀಡಬೇಕಿದೆ.


Click it and Unblock the Notifications











