Chhaava Box Office Day 5: ರಶ್ಮಿಕಾ ಸಿನಿಮಾನಾ ತಡೆಯೋರು ಯಾರು? 5ನೇ ದಿನವೂ ಧೂಳೆಬ್ಬಿಸಿದ 'ಛಾವಾ'

Chhaava Box Office Collection Day 5: ಬಾಲಿವುಡ್‌ ಬಾಕ್ಸಾಫೀಸ್ ಮತ್ತೆ ಚಿಗುರಿಕೊಂಡಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನ ನಟನೆಯ ಐತಿಹಾಸಿಕ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಫೆಬ್ರವರಿ 14ರಂದು ರಿಲೀಸ್ ಆಗಿದ್ದ ಈ ಸಿನಿಮಾ ಮೊದಲ ದಿನದಿಂದಲೇ ಗಳಿಕೆಯಲ್ಲಿ ಜಾದು ಮಾಡುತ್ತಿದೆ. 5ನೇ ದಿನ ಕೂಡ 'ಛಾವಾ' ಕಲೆಕ್ಷನ್ ಉತ್ತಮವಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಕೊಟ್ಟಿದ್ದಾರೆ.

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಜೋಡಿಯನ್ನು ಹಿಂದಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಔರಂಗಜೇಬನ ಪಾತ್ರದಲ್ಲಿ ಅಬ್ಬರಿಸಿರುವ ಅಕ್ಷಯ್ ಖನ್ನ ಪರ್ಫಾಮೆನ್ಸ್‌ ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದಾರೆ. 4ನೇ ದಿನಕ್ಕೆ ಹೋಲಿಕೆ ಮಾಡಿದರೆ, 5ನೇ ದಿನ ಅಂದರೆ (ಫೆಬ್ರವರಿ 18) ಈ ಸಿನಿಮಾ ಶೇ.6.50ರಷ್ಟು ಏರಿಕೆಯಾಗಿದೆ ಎಂದು ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ.

Vicky Kaushal Rashmika Mandanna film Chhaava Box office collection Day 5 report

'ಛಾವಾ' ಸಿನಿಮಾವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಐದನೇ ದಿನ ಕಲೆಕ್ಷನ್ ನೋಡಿದ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ಕೂಡ ಬದಲಾಗಿದೆ. ಈ ಸಿನಿಮಾ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಾಣುವ ಸಿನಿಮಾಗಳ ಪಟ್ಟಿ ಸೇರಲಿದೆ ಎನ್ನುತ್ತಿದ್ದಾರೆ. ಹಾಗಿದ್ದರೆ, ಐದನೇ ದಿನ 'ಛಾವಾ' ಸಿನಿಮಾದ ಕಲೆಕ್ಷನ್ ಎಷ್ಟು? 150 ಕೋಟಿ ರೂ. ಕ್ಲಬ್ ಸೇರಿತೇ?

'ಛಾವಾ' 5ನೇ ದಿನ ಕಲೆಕ್ಷನ್ ಎಷ್ಟು?

'ಛಾವಾ' ಮರಾಠರ ಮಹಾರಾಜ ಛತ್ರಪತಿ ಸಂಬಾಜಿ ಹೋರಾಟ ಬದುಕಿನ ಕುರಿತ ಸಿನಿಮಾ ಆಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರು ಭಾವುಕರಾಗಿ ಹೊರಬರುತ್ತಿರುವ ಸನ್ನಿವೇಶಗಳು ವೈರಲ್ ಆಗುತ್ತಿವೆ. ಇನ್ನು ಸಿನಿಮಾ ಐದನೇ ದಿನ ಅಂದರೆ, ಫೆಬ್ರವರಿ 18ರಂದು ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ 24.50 ಕೋಟಿ ಕಲೆಕ್ಷನ್ ಮಾಡುವ ಮೂಲಕ ಶೇ.6.5ರಷ್ಟು ಏರಿಕೆ ಆಗಿದೆ ಎಂದು ಫಿಲ್ಮ್ ಇಂಡಸ್ಟ್ರೀ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ.

5 ದಿನಗಳ ಬಾಕ್ಸಾಫೀಸ್ ಕಲೆಕ್ಷನ್

ಬಾಲಿವುಡ್‌ಗೆ ವರ್ಷದ ಆರಂಭದಲ್ಲಿಯೇ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಐತಿಹಾಸಿಕ ಸಿನಿಮಾ ಬಾಲಿವುಡ್‌ ಮಂದಿಗೆ ಖುಷಿ ಕೊಟ್ಟಿದ್ದು, ಈ ವಾರ ಪೂರ್ತಿ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಒಟ್ಟು ಐದು ದಿನಗಳಲ್ಲಿ 150 ಕೋಟಿ ಕ್ಲಬ್ ಅನ್ನು ಸೇರಿದೆ. ಇದೂವರೆಗೂ ₹167.06 ಕೋಟಿ ಕಲೆಕ್ಷನ್ ಮಾಡಿದೆ.

ಮೊದಲನೇ ದಿನ - ₹31 ಕೋಟಿ
ಎರಡನೇ ದಿನ - ₹37 ಕೋಟಿ
ಮೂರನೇ ದಿನ - ₹48.5 ಕೋಟಿ
ನಾಲ್ಕನೇ ದಿನ - ₹24 ಕೋಟಿ
ಐದನೇ ದಿನ - ₹24.50 ಕೋಟಿ
ಒಟ್ಟು - ₹165.00 ಕೋಟಿ

Vicky Kaushal Rashmika Mandanna film Chhaava Box office collection Day 5 report

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?

ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಸಿನಿಮಾ ಕೇವಲ ಭಾರತದಲ್ಲಷ್ಟೇ ವಿಶ್ವದಾದ್ಯಂತ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ವಾರದ ಆರಂಭದಲ್ಲಿ ಸಿನಿಮಾ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದ್ದರೂ, ಈಗ ಆಗುತ್ತಿರುವ ಕಲೆಕ್ಷನ್ ಅದ್ಭುತ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ. ಮೊದಲ ನಾಲ್ಕು ದಿನಗಳಲ್ಲಿ ಓವರ್‌ಸೀನ್‌ನಿಂದ ಸುಮಾರು 27 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದ್ದು, ವಿಶ್ವದಾದ್ಯಂತ 195.60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಯಾಕಿಷ್ಟು ಕ್ರೇಜ್?

ಮರಾಠರ ದೊರೆ ಛತ್ರಪತಿ ಶಿವಾಜಿ ಮಹಾರಾಜ್ ಕಾಲವಾದ ಬಳಿಕ ಪುತ್ರ ಛತ್ರಪತಿ ಸಾಂಭಾಜಿ ಅಧಿಕಾರಕ್ಕೆ ಬರುತ್ತಾನೆ. ಮೊಘಲ್ ದೊರೆ ಔರಂಗಜೇಬ ಹಾಗೂ ಸಾಂಭಾಜಿ ನಡುವಿನ ಕಾದಾಟ, ಮೊಘಲ್ ದೊರೆಯ ವಿರುದ್ಧ ಸೆಟೆದು ನಿಂತ ಸಂಭಾಜಿಯ ಪ್ರರಾಕ್ರಮ, ಅಂತ್ಯವನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ. ಹೀಗಾಗಿ ಮುಂಬೈ, ಪೂನಾ ಸೇರಿದಂತೆ ಮಹಾರಾಷ್ಟ್ರ ಹಾಗೂ ಹಿಂದಿ ಬೆಲ್ಟ್‌ಗಳಲ್ಲಿ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ.

More from Filmibeat

English summary
Vicky Kaushal, Rashmika Mandanna, Akshay Khanna film Chhaava Box office collection Day 5 report;
Read more about: box office rashmika mandanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X