ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳದ್ದೇ ದರ್ಬಾರ್; 'ಛಾವ' ಕರ್ನಾಟಕದ ಕಲೆಕ್ಷನ್ ಎಷ್ಟು ಗೊತ್ತೇ?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾ 'ಛಾವ' ಕೇವಲ ಹಿಂದಿ ಬೆಲ್ಟ್‌ಗಳಲ್ಲಿ ಅಷ್ಟೇ ಅಲ್ಲ. ದಕ್ಷಿಣ ಭಾರತದಲ್ಲೂ ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಕಳೆದ ಹನ್ನೊಂದು ದಿನಗಳಲ್ಲಿ ಈ ಚಿತ್ರದ ಬಾಕ್ಸಾಪೀಸ್‌ ಕಲೆಕ್ಷನ್ ನೋಡಿ ಸಿನಿಮಾ ಮಂದಿನೇ ದಂಗಾಗಿ ಹೋಗಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ವಾರ ತೆರೆಕಂಡಿರುವ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಫೆಬ್ರವರಿ 21ರಂದು ತೆರೆಕಂಡ ಕನ್ನಡದ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿವೆ. ಆದರೆ, ಪರಭಾಷೆಗಳು ಸಿನಿಮಾಗಳು ಮಾತ್ರ ಗಲ್ಲಾ ಪಟ್ಟಿಗೆಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ.

Vicky Kaushal Rashmika Mandanna film Chhaava Karnataka Box office collection repeort

ಕರ್ನಾಟಕದಲ್ಲಿ ಇತ್ತೀಚೆಗೆ ತೆರೆಕಂಡ ಬಾಲಿವುಡ್ ಸಿನಿಮಾ 'ಛಾವ' ಹಾಗೂ ತಮಿಳು ಸಿನಿಮಾ 'ಡ್ರ್ಯಾಗನ್' ಒಳ್ಳೆಯ ಕಲೆಕ್ಷನ್ ಮಾಡಿದೆ. ಅದರಲ್ಲೂ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ನಟಿಸಿರುವ 'ಛಾವ' ಕಲೆಕ್ಷನ್ ಕರ್ನಾಟಕದಲ್ಲಿ ಕಮ್ಮಿಯೇನು ಇಲ್ಲ. ಕಳೆದ 10 ದಿನಗಳಲ್ಲಿ ಕರ್ನಾಟಕದ ಬಾಕ್ಸಾಫೀಸ್‌ನಿಂದ ಎಷ್ಟು ಕೋಟಿ ದೋಚಿದೆ ಅನ್ನೋ ರಿಟೈಲ್ಸ್ ತಿಳಿಯಲು ಮುಂದೆ ಓದಿ.

ಕನ್ನಡ ಸಿನಿಮಾಗಳಿಗೆ ರೆಸ್ಪಾನ್ಸ್ ಇಲ್ಲ

ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿದ ಬಳಿಕ ಕನ್ನಡ ಸಿನಿಮಾಗಳ್ಯಾವುವೂ ಆ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಇದೆ ಪರಿಸ್ಥಿತಿಯಿದ್ದರೂ, ತಿಂಗಳಿಗೋ? ಎರಡು ತಿಂಗಳಿಗೋ ಒಂದು ಸ್ಟಾರ್ ಸಿನಿಮಾ ರಿಲೀಸ್ ಆಗಿ ಬ್ಯಾಲೆನ್ಸ್ ಆಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಪರಿಸ್ಥಿತಿ ಗಂಭೀರವಿದೆ. ಥಿಯೇಟರ್‌ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲಿಗೆ ಬೀಗ ಹಾಕುತ್ತಿದ್ದಾರೆ. ಆದರೆ, ಪರಭಾಷೆ ಸಿನಿಮಾಗಳು ಮಾತ್ರ ಸದ್ದು ಮಾಡುತ್ತಿವೆ.

ಕರ್ನಾಟಕದಲ್ಲಿ 'ಛಾವ' ದರ್ಬಾರ್

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ 'ಛಾವ' ಗೆ ಹಿಂದಿ ಏರಿಯಾಗಳಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ವಾರವೂ ಈ ಸಿನಿಮಾ ಕಲೆಕ್ಷನ್ ನೋಡಿ ಬಾಲಿವುಡ್ ಮಂದಿ ಹೌಹಾರಿದ್ದಾರೆ. ಆದರೆ. ಕರ್ನಾಟಕದಲ್ಲೂ ಕಲೆಕ್ಷನ್ ಏನೂ ಕಮ್ಮಿಯಾಗಿಲ್ಲ. ಮೊದಲ ವೀಕೆಂಡ್‌ ಸ್ವಲ್ಪ ಡಲ್ ಇದ್ದ ಕಲೆಕ್ಷನ್ ಎರಡನೇ ವಾರದ ಹೊತ್ತಿಗೆ ಭರ್ಜರಿ ಕಲೆಕ್ಷನ್ ಮಾಡಿದೆ. 2ನೇ ವೀಕೆಂಡ್‌ನಲ್ಲಿ ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ 2.8 ಕೋಟಿ ರೂಪಾಯಿ ಎನ್ನುತ್ತಿದೆ ವಿತರಕರ ವಲಯ. ವಿಪರ್ಯಾಸ ಅಂದ್ರೆ, ಕನ್ನಡದ ಸಿನಿಮಾಗಳೇ ಈ ಮಟ್ಟಿಗೆ ಸದ್ದು ಮಾಡುತ್ತಿಲ್ಲ.

Vicky Kaushal Rashmika Mandanna film Chhaava Karnataka Box office collection repeort

10 ದಿನಗಳ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಕರ್ನಾಟಕದಲ್ಲಿ 'ಛಾವ' ಸಿನಿಮಾ 10 ದಿನಗಳಲ್ಲಿ ಲಕ್ಷ ಹಾಗೂ ಕೋಟಿಗಳಲ್ಲಿಯೇ ಕಲೆಕ್ಷನ್ ಮಾಡಿದೆ. ಮೊದಲ ವಾರ 'ಛಾವ' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ. ಆದರೆ, ಎರಡನೇ ವೀಕೆಂಡ್‌ನಲ್ಲಿ ಆದ ಕಲೆಕ್ಷನ್ ಕನ್ನಡ ಸಿನಿಮಾ ಮಂದಿಯ ನಿದ್ದೆ ಕೆಡಿಸಿದೆ. ಎರಡನೇ ಶುಕ್ರವಾರ 87 ಲಕ್ಷ ರೂ. ಶನಿವಾರ 1.4 ಕೋಟಿ ರೂ. ಹಾಗೂ ಭಾನುವಾರ 1.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬುದು ವಿತರಕರ ವಲಯದ ರಿಪೂರ್ಟ್.

ದೇಶಾದ್ಯಂತ ಮೂರು ದಿನಕ್ಕೆ ₹100 ಕೋಟಿ

'ಛಾವ' ಎರಡನೇ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ ಟ್ವೀಟ್ (ಎಕ್ಸ್) ಪ್ರಕಾರ 2ನೇ ಶುಕ್ರವಾರ ₹24.03 ಕೋಟಿ, 2ನೇ ಶನಿವಾರ ₹44.10 ಕೋಟಿ, 2ನೇ ಭಾನುವಾರ ₹41.10 ಕೋಟಿ ಕಲೆಕ್ಷನ್ ಆಗಿದೆ. ಒಟ್ಟು ಮೂರು ದಿನಗಳಲ್ಲಿ ಈ ಸಿನಿಮಾ ₹109.23 ಕೋಟಿ ಕಲೆಕ್ಷನ್ ಮಾಡಿದ್ದು, ₹ 334.51 ಕೋಟಿ ಕಲೆಕ್ಷನ್ ಮಾಡಿದೆ.

More from Filmibeat

English summary
Vicky Kaushal, Rashmika Mandanna film Chhaava Karnataka Box office collection repeort
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X