ಕತ್ರಿನಾ ಕೈಫ್‌ಗೆ ವಿಚ್ಛೇದನ ನೀಡುತ್ತಾರಾ ವಿಕ್ಕಿ ಕೌಶಲ್? 'ಉರಿ' ನಟನಿಗೆ ನೇರ ಪ್ರಶ್ನೆ
ಬಾಲಿವುಡ್‌ನ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೆಲವೇ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕತ್ರಿನಾ ಕೈಫ್ ಸಿನಿಮಾಗಳಿಗೆ ಬ್ರೇಕ್ ಕೊಟ್ಟು, ಮಗುವಿನ ಬಗ್ಗೆ ಗಮನ ಹರಿಸುತ್ತಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು.
ಕತ್ರಿನಾ ಹಾಗೂ ವಿಕ್ಕಿ ಕೌಶಲ್ ರಿಯಲ್ ಲೈಫ್ ಹೀಗಿರುವಾಗ, ದಿಢೀರನೇ ವಿಕ್ಕಿ ಕೌಶಲ್‌ಗೆ "ನೀವು ಕತ್ರಿನಾ ಕೈಫ್‌ಗೆ ವಿಚ್ಛೇದನ ನೀಡುತ್ತೀರಾ? ಬೇರಯವರನ್ನು ಮದುವೆ ಆಗುತ್ತಿರಾ?" ಅನ್ನೋ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ವಿಕ್ಕಿ ಕೌಶಾಲ್ ಶಾಕ್ ಆಗಿದ್ದಾರೆ.

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಜೋಡಿಯಾಗಿ ಸಿನಿಮಾವೊಂದರಲ್ಲಿ ನಟಿಸುತ್ತಾರೆ. ಆ ಸಿನಿಮಾನೇ 'ಝರಾ ಹಟ್ಕೆ.. ಝರಾ ಬಚ್ಕೆ'. ಇದೇ ಸಿನಿಮಾದ ಟ್ರೈಲರ್ ಲಾಂಚ್ ಮಾಡುವುದಕ್ಕೆ ಇಬ್ಬರೂ ಒಟ್ಟಿಗೆ ಸೇರಿದ್ದರು. ಈ ವೇಳೆ ವಿಕ್ಕಿ ಕೌಶಲ್‌ಗೆ ವಿಚ್ಛೇದನದ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು. ಇದನ್ನು ವಿಕ್ಕಿ ಕೌಶಾಲ್ ಶಾಕ್ ಆಗಿದ್ದಾರೆ.
ವಿಕ್ಕಿ ಕೌಶಲ್‌ಗೆ ಕೇಳಿದ ಪ್ರಶ್ನೆ ಏನು?
ವಿಕ್ಕಿ ಕೌಶಲ್ ನಟಿಸಿದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿತ್ತು. ಇಲ್ಲಿಂದ ವಿಕ್ಕಿ ಕರಿಯರ್ ಬದಲಾಗಿತ್ತು. ಕತ್ರಿನಾ ಕೈಫ್ ಕೂಡ ವಿಕ್ಕಿ ಕೌಶಲ್ ಏಳಿಗೆ ಬಗ್ಗೆ ಮುಕ್ತವಾಗಿ ಮಾತಾಡಿದ್ದರು. ಅಲ್ಲಿಂದ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರು ಮದುವೆನೂ ಆಗಿದ್ದಾರೆ. ಹೀಗಿರುವಾಗಲೇ ವಿಚ್ಛೇದನದ ಬಗ್ಗೆ ಪ್ರಶ್ನೆ ಮಾಡಲಾಗಿದೆ.

"ನಮ್ಮ ದೇಶದಲ್ಲಿ ಮದುವೆ ಅನ್ನೋದು ಜನ್ಮ ಜನ್ಮದ ಅನುಬಂಧ. ಇದು ಸರಿಯಾಗಿದೆಯಾ? ಇಲ್ಲಾ ನೀವು ಕತ್ರಿನಾ ಕೈಫ್‌ಗೆ ವಿಚ್ಛೇದನ ನೀಡಿ, ಮತ್ತೊಬ್ಬರನ್ನು ಮದುವೆಯಾಗುತ್ತಿರಾ? ಎಂದು ನೇರವಾಗಿ ವಿಕ್ಕಿ ಕೌಶಲ್‌ಗೆ ಪ್ರಶ್ನೆ ಮಾಡಲಾಗಿತ್ತು.
ವಿಕ್ಕಿ ಕೌಶಲ್ ಉತ್ತರವೇನು?
ಸಿನಿಮಾ ಪ್ರಮೋಷನ್‌ಗೆ ಅಂತ ಹೋಗಿದ್ದ ವಿಕ್ಕಿ ಕೌಶಲ್‌ಗೆ ಇಂತಹದ್ದೊಂದು ಪ್ರಶ್ನೆ ದಿಢೀರನೇ ಎದುರಾದಾಗ, ಹೇಗೆ ಉತ್ತರಿಸಬೇಕು ಅಂತಾನೇ ಗೊತ್ತಾಗಿಲ್ಲ. ಒಂದು ಕ್ಷಣ ವಿಕ್ಕಿ ಕೌಶಲ್ ವಿಚಲಿತರಾದಂತೆ ಅನಿಸಿದರೂ, ನಗುತ್ತಲೇ ಉತ್ತರ ಕೊಟ್ಟಿದ್ದಾರೆ.
" ಸಂಜೆ ಮನೆಗೆ ಹೋಗಬೇಕು. ಇಂತಹ ಟ್ವಿಸ್ಟ್ ಕೊಡುವ ಪ್ರಶ್ನೆ ಕೇಳಿದರೆ ಹೇಗೆ? ನಾನಿನ್ನೂ ಚಿಕ್ಕವನು. ಸ್ವಲ್ಪ ಬೆಳೆಯುವುದಕ್ಕಾದರೂ ಬಿಡಿ. ಈ ಪ್ರಶ್ನೆಗೆ ಹೇಗೆ ಉತ್ತರ ಕೊಡಲಿ? ಇದೊಂದು ಅಪಾಯಕಾರಿ ಪ್ರಶ್ನೆ. ಜನ್ಮ ಜನ್ಮದವರೆಗೂ ಪ್ರೀತಿ ಇರುತ್ತೆ" ಎಂದು ವಿಕ್ಕಿ ಕೌಶಲ್ ಉತ್ತರ ಕೊಟ್ಟು ತಪ್ಪಿಸಿಕೊಂಡಿದ್ದಾರೆ.
ಸಿನಿಮಾದಲ್ಲೂ ವಿಚ್ಚೇನದಕ್ಕೆ ಒದ್ದಾಟ
ಇತ್ತೀಚೆಗೆ ವಿಕ್ಕಿ ಕೌಶಲ್ ಹೊಸ ಸಿನಿಮಾ 'ಝರಾ ಬಚ್ಕೆ ಝರಾ ಹಟ್ಕೆ' ಟ್ರೈಲರ್ ಲಾಂಚ್ ಆಗಿದೆ. ಈ ವೇಳೆ ವಿಕ್ಕಿ ಕೌಶಲ್‌ಗೆ ಪತ್ರಕರ್ತರೊಬ್ಬರು ಇಂತಹ ಟ್ರಿಕ್ಕಿ ಪ್ರಶ್ನೆಯನ್ನು ಹೇಳಿದ್ದರು. ಹೀಗೆ ಪ್ರಶ್ನೆ ಮಾಡುವುದಕ್ಕೆ ಕಾರಣ ವಿಕ್ಕಿ ಕೌಶಾಲ್ ಹೊಸ ಸಿನಿಮಾ.
'ಝರಾ ಬಚ್ಕೆ ಝರಾ ಹಟ್ಕೆ' ಸಿನಿಮಾದ ಟ್ರೈಲರ್‌ನಲ್ಲೂ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ನವ ವಿವಾಹಿತರು. ಇಬ್ಬರ ಸಂಸಾರದಲ್ಲಿ ಗಲಾಟೆ ಶುರುವಾಗುತ್ತೆ. ಬಳಿಕ ವಿಚ್ಛೇನದಕ್ಕೆ ಮುಂದಾಗುತ್ತಾರೆ. ಈ ಕಾರಣಕ್ಕಾಗಿ ಪತ್ರಕರ್ತರು ಟ್ರಿಕ್ಕಿ ಪ್ರಶ್ನೆ ಕೇಳಿದ್ದರು. ಅದೇ ಈಗ ವೈರಲ್ ಆಗುತ್ತಿದೆ.


Click it and Unblock the Notifications











