"ನಾನು ಸೀರಿಯಲ್ ಡೇಟರ್ ಅಲ್ಲ.. ಆದರೆ, ಹಲವರು ಪುರುಷರನ್ನು ಡೇಟಿಂಗ್ ಮಾಡಿದ್ದೇನೆ"; ನಟಿ ವಿದ್ಯಾ ಬಾಲನ್
ವಿದ್ಯಾ ಬಾಲನ್, ಬಾಲಿವುಡ್ ಕಂಡ ಅದ್ಭುತ ನಟಿಯಲ್ಲಿ ಒಬ್ಬರು. ಪಾತ್ರಗಳು ಎಂತಹದ್ದೇ ಇರಲಿ. ಅದಕ್ಕೆ ಹೊಂದಿಕೊಳ್ಳುವ ನಟಿಯೀಕೆ. ಇದೂವರೆಗೂ ವಿದ್ಯಾ ಬಾಲನ್ ನಟಿಸಿದ ಸೋತ ಸಿನಿಮಾಗಳ ಪಾತ್ರಗಳು ಕೂಡ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಈ ನಟಿಯ ಬಣ್ಣದ ಬದುಕು ರಂಗು ರಂಗಾಗಿದೆಯೋ. ವೈಯಕ್ತಿಕ ಬದುಕು ಕೂಡ ಅಷ್ಟೇ ವರ್ಣರಂಜಿತವಾಗಿದೆ.
'ಕಹಾನಿ', 'ಪಾ', 'ಡರ್ಟಿ ಪಿಕ್ಚರ್', 'ಪರಿಣಿತಾ', 'ತುಮಾರಿ ಸುಲು', 'ಇಷ್ಕಿಯಾ'ದಂತಹ ಇನ್ನೂ ಹಲವು ಸಿನಿಮಾಗಳು ವಿದ್ಯಾ ಬಾಲನ್ ಅನ್ನು ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ. ಸದ್ಯ ವಿದ್ಯಾ ಬಾಲನ್ ಹೊಸ ಸಿನಿಮಾ 'ದೊ ಔರ್ ದೊ ಪ್ಯಾರ್' ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ವಿದ್ಯಾ ಬಾಲನ್ ಸಿನಿಮಾ ಜರ್ನಿ ಒಪನ್ ಬುಕ್ ಇದ್ದಂತೆ. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಮಾತಾಡಿದ್ದು ತೀರ ವಿರಳ. ಕೆಲವೇ ಕೆಲವು ಸಂದರ್ಭಗಳಲ್ಲಿ ವಿದ್ಯಾ ಬಾಲನ್ ತನ್ನ ಪರ್ಸನಲ್ ಲೈಫ್ ಬಗ್ಗೆ ಮಾತಾಡಿದ್ದಾರೆ. ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಸೀಕ್ರೆಟ್ ಆಗಿ ಇಟ್ಟಿದ್ದರು. ಈ ವಿಷಯ ಬಾಲಿವುಡ್ ಮಂದಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ವಿದ್ಯಾ ಬಾಲನ್ ತನ್ನ ಬಾಯ್‌ಫ್ರೆಂಡ್, ಹಾಗೂ ಡೇಟಿಂಗ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿದ್ಯಾ ಬಾಲನ್ ತನ್ನ ಮೊದಲ ಬಾಯ್‌ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ ಮೊದಲ ಬಾಯ್‌ಫ್ರೆಂಡ್ ಮೋಸ ಮಾಡಿದ್ದರ ಬಗ್ಗೆ ರಿವೀಲ್ ಮಾಡಿದ್ದಾರೆ. "ನಾನು ಡೇಟ್ ಮಾಡಿದ ಮೊದಲ ಹುಡುಗ ನನಗೆ ಮೋಸ ಮಾಡಿ ಬಿಟ್ಟ. ನನಗೆ ಇನ್ನೂ ನೆನಪಿದೆ. ಆಗ ತಾನೇ ನಾವು ಬ್ರೇಕಪ್ ಮಾಡಿಕೊಂಡಿದ್ದೆವು. ಪ್ರೇಮಿಗಳ ದಿನದಂದು ಆತ ಕಾಲೇಜ್‌ಗೆ ಬಂದಿದ್ದ. ಆಗ ನಾನು ನನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆ ಡೇಟಿಂಗ್ ಹೋಗುತ್ತಿದ್ದೇನೆ ಎಂದು ಹೇಳಿ ನನ್ನನ್ನು ಕುಗ್ಗುವಂತೆ ಮಾಡಿದ್ದ. ಆದರೆ, ನನ್ನ ಜೀವನದಲ್ಲಿ ಅದಕ್ಕಿಂತ ಉತ್ತಮವಾಗಿದ್ದೇನೆ." ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ವಿದ್ಯಾ ಬಾಲನ್ ತಾನು 'ಸೀರಿಯಲ್ ಡೇಟರ್' ಅಲ್ಲ. ಆದರೆ, ನಾನು ಕೆಲವು ಪುರುಷರೊಂದಿಗೆ ಡೇಟಿಂಗ್ ಹೋಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ನಾನು ಸೀರಿಯಲ್ ಡೇಟರ್ ಅಲ್ಲ. ಆದರೆ, ನಾನು ಕೆಲವು ಪುರುಷರನ್ನು ಡೇಟ್ ಮಾಡಿದ್ದೇನೆ. ನನ್ನ ಮೊದಲ ದೀರ್ಘಕಾಲದ ರಿಲೇಷನ್‌ಶಿಪ್ ಇಟ್ಟುಕೊಂಡಿದ್ದವನ್ನೇ ನಾನು ಮದುವೆ ಆಗಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
ತನ್ನ ಪತಿ ಕಮ್ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಜೊತೆ ಸೀಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದರು. ಈ ವಿಷಯ ಬಾಲಿವುಡ್ ಮಂದಿಗೂ ಹಬ್ಬದಂತೆ ನೋಡಿಕೊಂಡಿದ್ದರು. ಬಾಲಿವುಡ್‌ನಲ್ಲಿ ಆಗತಾನೇ ಪಾಪರಾಜಿ ಸಂಸ್ಕೃತಿ ಆರಂಭ ಆಗಿತ್ತು. ಹೀಗಾಗಿ ಇವರಿಬ್ಬರ ಮೊದಲೆರಡು ಡೇಟಿಂಗ್ ಕಾರಿನಲ್ಲಿ ಬಾಂದ್ರಾ ಸುತ್ತುವುದಷ್ಟಕ್ಕೆ ಸೀಮಿತವಾಗಿತ್ತು. ಅದನ್ನು ತಾನು ಎಂಜಾಯ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ವಿದ್ಯಾ ಬಾಲನ್ ಹೊಸ ಸಿನಿಮಾ 'ದೊ ಔರ್ ದೊ ಪ್ಯಾರ್'ನಲ್ಲಿ ನಟಿಸಿದ್ದಾರೆ. ಇದೊಂದು ರೊಮ್‌ಕಾಮ್ ಸಿನಿಮಾ ಆಗಿದ್ದು, ಏಪ್ರಿಲ್ 19, 2024ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ವಿದ್ಯಾ ಬಾಲನ್ ಜೊತೆ ಪ್ರತೀಕ್ ಗಾಂಧಿ, ಇಲಿಯಾನಾ, ಸೆಂದಿಲ್ ರಾಮಮೂರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ 'ಭೂಲ್ ಭುಲಯ್ಯಾ 3' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











