"ಆ ನಟ ಬಾಯಿಯಿಂದ ಬೆಳ್ಳುಳ್ಳಿ ವಾಸನೆ ಬರುತ್ತಿತ್ತು"; ಹಸಿಬಿಸಿ ದೃಶ್ಯದ ಕಥೆ ಬಿಚ್ಚಿಟ್ಟ ನಟಿ
ಸಿನಿಮಾಗಳಲ್ಲಿ ಕೆಲವು ಘಟನೆಗಳು ಗೊತ್ತಿದ್ದೋ.. ಗೊತ್ತಿಲ್ಲದೆಯೋ ನಡೆದು ಬಿಡುತ್ತವೆ. ಅವುಗಳಲ್ಲಿ ಕೆಲವು ಅಪಹಾಸ್ಯಕ್ಕೂ ಒಳಗಾಗುತ್ತವೆ. ಇಂತಹ ಹಲವು ಘಟನೆಗಳು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಮುಂದೊಂದು ದಿನ ನಟ-ನಟಿಯರು ಇಂತಹ ವಿಷಯಗಳ ಬಗ್ಗೆ ಸಂದರ್ಶನ ನೀಡುವಾಗ ಆ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದು ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿಬಿಡುತ್ತೆ.
ಇಂತಹ ವಿಷಯಗಳನ್ನು ಬಾಲಿವುಡ್ ನಟಿಯರು ಓಪನ್ ಆಗಿ ಹಂಚಿಕೊಂಡಂತೆ ಬೇರೆ ಚಿತ್ರರಂಗದ ನಟಿಯರು ಹಂಚಿಕೊಳ್ಳುವುದಿಲ್ಲ. ಹಿಂದಿ ಚಿತ್ರರಂಗದಲ್ಲಿರುವ ನಟಿಯರು ಇಂತಹ ಹಲವು ಸಂಗತಿಗಳನ್ನು ಅವರು ಇದೂವರೆಗೂ ನೀಡಿದ ಸಂದರ್ಶನಗಳಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ಅದರಲ್ಲೂ ಬಾಲಿವುಡ್‌ನ ಬಿಂದಾಸ್ ನಟಿ ವಿದ್ಯಾ ಬಾಲನ್ ಏನಾದರೂ ಸಂದರ್ಶನ ಕೊಟ್ಟಿದ್ದಾರೆಂದರೆ, ಅಲ್ಲೊಂದು ಹಸಿಬಿಸಿ ಇಂಟ್ರೆಸ್ಟಿಂಗ್ ಸ್ಟೋರಿ ಇದ್ದೇ ಇರುತ್ತೆ.

ವಿದ್ಯಾ ಬಾಲನ್ ದಕ್ಷಿಣ ಭಾರತದವರೇ ಆಗಿದ್ದರೂ, ಬಾಲಿವುಡ್‌ನಲ್ಲಿ ನೆಲೆಕಂಡುಕೊಂಡವರು. ಅಲ್ಲಿನ ನಾಯಕಿಯರೊಂದಿಗೆ ಪೈಪೋಟಿಗೆ ಬಿದ್ದು ಗೆದ್ದವರು. ಅದಕ್ಕೆ ಅವರಲ್ಲಿರುವ ಬಿಂದಾಸ್ ಸ್ವಭಾವ ಕೂಡ ಮುಖ್ಯ ಕಾರಣ. ಇದೂವರೆಗೂ ಅವರು ನಟಿಸಿದ ಸಾಕಷ್ಟು ಸಿನಿಮಾಗಳಲ್ಲಿ ದಿಟ್ಟ ಪಾತ್ರಗಳನ್ನು ಮಾಡಿ ಜಯಿಸಿದ್ದಾರೆ. ಕ್ಯಾಮರಾ ಮುಂದೆ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಆ ಪಾತ್ರಗಳು ಜನರ ಮನಸ್ಸನ್ನು ಕೂಡ ಗೆದ್ದಿವೆ. ಇಂತಹ ಪಾತ್ರಗಳನ್ನು ಮಾಡುವಾಗ ಅವರಿಗೆ ಆದ ಅನುಭವಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂತಹದ್ದೇ ಒಂದು ಘಟನೆಯನ್ನು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್ ನಟಿ ಸದಾ ಜೋಷ್‌ನಲ್ಲಿ ಇರುತ್ತಾರೆ. ಕ್ಯಾಮರಾ ಮುಂದೆ ಆಗಲಿ, ಹಿಂದೆ ಆಗಲಿ ನಗು ನಗುತ್ತಾ ಇರುವ ಪಾಸಿಟಿವ್ ವ್ಯಕ್ತಿತ್ವ. ಈ ನಟಿ ಕ್ಯಾಮರಾ ಮುಂದೆ ರೇಗಾಡಿದ್ದು, ಕೂಗಾಡಿದ್ದು ತೀರಾ ವಿರಳ ಎನ್ನಬಹುದು. ಇವರ ವೃತ್ತಿ ಜೀವನದ ಆರಂಭದ ಒಂದು ಸಿನಿಮಾದ ಹಸಿಬಿಸಿ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಸೆಟ್‌ನಲ್ಲಿ ಕ್ಯಾಮರಾ, ಲೈಟಿಂಗ್ ಎಲ್ಲವೂ ರೆಡಿಯಾಗಿದ್ದವು. ಇಡೀ ಸೆಟ್ ಆ ದೃಶ್ಯವನ್ನು ಚಿತ್ರೀಕರಿಸುವುದಕ್ಕಾಗಿ ರೆಡಿಯಾಗಿತ್ತು. ಆ ವೇಳೆ ಒಂದು ತಮಾಷೆಯ ಘಟನೆ ನಡೆದಿತ್ತು. ಅದನ್ನು ಸಂದರ್ಶನದಲ್ಲಿ ಹೇಳಿಕೊಂಡು ನಗೆಗಡಲಲ್ಲಿ ತೇಲಿಸಿದ್ದಾರೆ.

ಆ ಪ್ರಮುಖ ದೃಶ್ಯವನ್ನು ಚಿತ್ರೀಕರಣ ಮಾಡುವುದಕ್ಕೂ ಮುನ್ನ ಆ ಸಿನಿಮಾದ ಹೀರೋ ಆಗ ಊಟ ಮುಗಿಸಿದ್ದರು. ಅದರಲ್ಲೂ ಚೈನೀಸ್ ಫುಡ್ ಅನ್ನು ಸೇವಿಸಿ ಸೆಟ್ಟಿಗೆ ಬಂದಿದ್ದರು. " ಆ ನಟನ ಬಾಯಿಯಿಂದ ಬೆಳ್ಳುಳ್ಳಿ ಹಾಗೂ ಸೋಯಾ ಸಾಸ್ ವಾಸನೆ ಬರುತ್ತಿತ್ತು. ಈ ವ್ಯಕ್ತಿಗೆ ಅಂದು ಯಾರೂ ಬ್ರಷ್ ಮಾಡುವುದಕ್ಕೆ ನೆನಪು ಮಾಡಲಿಲ್ಲವೇ ಅಂತ ನಾನು ಒಮ್ಮೆ ಯೋಚಿಸಿದೆ. ಆ ವೇಳೆ ನಾನು ಹೊಸಬಳಾಗಿದ್ದರಿಂದ ಆ ನಟನಿಗೆ ಒಂದು ಮಿಂಟ್ ಅನ್ನು ಸಹ ಕೊಡುವುದಕ್ಕೆ ನನಗೆ ಆಗಲಿಲ್ಲ" ಎಂದು ವಿದ್ಯಾ ಬಾಲನ್ ಹೇಳಿಕೊಂಡು ತಮಾಷೆ ಮಾಡಿದ್ದಾರೆ.
ವಿದ್ಯಾ ಬಾಲನ್ ಇದೂವರೆಗೂ ಸಾಕಷ್ಟು ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಕ್ಯಾಮರಾ ಮುಂದೆ ರೊಮ್ಯಾನ್ಸ್ ಮಾಡುವ ದೃಶ್ಯಗಳಲ್ಲಿ ನಟಿಸುವುದಕ್ಕೆ ಕಷ್ಟ. ಆದರೆ, ವಿದ್ಯಾ ಬಾಲನ್ ಇಂತಹ ಪಾತ್ರಗಳಲ್ಲೂ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ವಿದ್ಯಾ ಬಾಲನ್ 2005ರಲ್ಲಿ 'ಪರಿಣಿತಾ' ಎನ್ನುವ ಸಿನಿಮಾದಲ್ಲಿ ಸಂಜಯ್ ದತ್ ಜೊತೆ ಅನ್ನೋನ್ಯವಾದ ದೃಶ್ಯಗಳಲ್ಲಿ ನಟಿಸಿದ್ದಾಗಿ ಹೇಳಿಕೊಂಡಿದ್ದರು.
ಸಂಜಯ್ ದತ್ ಜೊತೆ ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸುವಾಗ ಅವರು ಭಯಬಿದ್ದಿದ್ದರಂತೆ. ಪರಿಸ್ಥಿತಿಯನ್ನು ಅರಿತ ಸಂಜಯ್ ದತ್ ನಟಿ ವಿದ್ಯಾ ಬಾಲನ್ ಅವರ ಬಳಿ ಬಂದು ತಿಳಿಗೊಳಿಸಿದ್ದರೆಂದು ಹೇಳಿಕೊಂಡಿದ್ದಾರೆ. ವಿದ್ಯಾ ಬಾಲನ್ ಬಳಿಕ ಸಂಜಯ್ ದತ್ ಬಂದು "ವಿದ್ಯಾ, ಸೀನ್ ಮಾಡುವುದಕ್ಕೆ ನಾನೇ ನರ್ವಸ್ ಆಗಿದ್ದೇನೆ. ಈಗ ಈ ದೃಶ್ಯವನ್ನು ಹೇಗೆ ಮಾಡೋದು?" ಎಂದು ತಮಾಷೆ ಮಾಡಿ ಆತಂಕವನ್ನು ಕಡಿಮೆ ಮಾಡಿದ್ದರಂತೆ. ಸಂಜಯ್ ದತ್ ಮಾತುಗಳು ಅವರ ಆತಂಕವನ್ನು ದೂರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ವಿದ್ಯಾ ಬಾಲನ್ ಬಳಿ ಬಂದು ಸಂಜಯ್ ದತ್ ಯೋಗ ಕ್ಷೇಮ ವಿಚಾರಿಸಿಕೊಂಡು, ಹಣೆಗೊಂದು ಮುತ್ತಿಟ್ಟು ಹೋದರಂತೆ.


Click it and Unblock the Notifications











