ವಿಶೇಷ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ ವಿದ್ಯುತ್

ತಮ್ಮ ವಿಶಿಷ್ಟ ಆಕ್ಷನ್ ಕೌಶಲಗಳಿಂದಾಗಿ ಮೆಚ್ಚುಗೆಗೆ ಪಡೆದಿರುವವರು ನಟ ವಿದ್ಯುತ್ ಜಮ್ವಾಲ್. ಸಿನಿಮಾಗಳಲ್ಲಿನ ಅವರ ಆಕ್ಷನ್ ಸನ್ನಿವೇಶಗಳು ಜಗತ್ತಿನ ಸಾಹಸ ಪ್ರೇಮಿಗಳಲ್ಲಿ ಬೆರಗು ಮೂಡಿಸಿದೆ. ಈಗ ಜಾಮ್ವಾಲ್ ಭಾರತ ಮತ್ತೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

Recommended Video

Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

ಪ್ರತಿಷ್ಠಿತ ಮನರಂಜನಾ ಜಾಲತಾಣ ದಿ ರಿಚೆಸ್ಟ್ ಪಟ್ಟಿ ಮಾಡಿರುವ ಜಗತ್ತಿನ 10 ಸಾಹಸ ಕೌಶಲಿಗಳ ಪಟ್ಟಿಯಲ್ಲಿ ವಿದ್ಯುತ್ ಸ್ಥಾನ ಪಡೆದಿದ್ದಾರೆ. 'ನೀವು ಕಿರಿಕ್ ಮಾಡಲು ಬಯಸದೆ ಇರುವ 10 ವ್ಯಕ್ತಿಗಳು' ಎಂಬ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಆ ವ್ಯಕ್ತಿಗಳ ಸಾಮರ್ಥ್ಯ ಮತ್ತು ಕೌಶಲಗಳನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಅವರಲ್ಲಿ ಕಟ್ಟುಮಸ್ತಾದ ದೇಹವನ್ನು ಎತ್ತರಕ್ಕೆ ಏಕಾಏಕಿ ಚಿಮ್ಮುವಂತಹದ ಸಾಮರ್ಥ್ಯವುಳ್ಳ ವಿದ್ಯುತ್ ಜಾಮ್ವಾಲ್ ಕೂಡ ಸೇರಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಸಾಹಸಮಯ ಚಟುವಟಿಕೆಗಳಿಗೆ ಹೆಸರಾದ ಬಿಯರ್ ಗ್ರಿಲ್ಸ್ ಸೇರಿದಂತೆ ಜಗತ್ತಿನ ವಿವಿಧ ಭಾಗಗಳ ವ್ಯಕ್ತಿಗಳು ಇದರಲ್ಲಿ ಇದ್ದಾರೆ. ಮಾರ್ಷಿಯಲ್ ಆರ್ಟ್ಸ್‌ ಮಾದರಿಯಾದ ಕಳರಿಪಯಟ್ಟನ್ನು ಕರಗತ ಮಾಡಿಕೊಂಡಿರುವ ವಿದ್ಯುತ್, ದೇಶದ ಅತ್ಯಂತ ರೋಮಾಂಚಕ ವೃತ್ತಿಪರ ಸ್ಟಂಟ್ ಪರಿಣತ ಎಂದು ಕರೆಯಲಾಗಿದೆ. ಸಿನಿಮಾಗಳಲ್ಲಿನ ಅವರ ಮೈನವಿರೇಳಿಸುವ ಆಕ್ಷನ್ ದೃಶ್ಯಗಳನ್ನು ಇದರಲ್ಲಿ ಶ್ಲಾಘಿಸಲಾಗಿದೆ.

Vidyut Jammawal Listed Among The Top 10 People You Dont Want To Mess With

2018ರಲ್ಲಿ ನಡೆದ ಜಾಕಿ ಚಾನ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಆರು ಮುಂಚೂಣಿ ಮಾರ್ಷಿಯಲ್ ಆರ್ಟ್ಸ್ ಪರಿಣತರ ಪಟ್ಟಿಯಲ್ಲಿ ಜಾಗ ಪಡೆದಿದ್ದ ವಿದ್ಯುತ್, ಅದಕ್ಕಾಗಿ ಪ್ರಶಸ್ತಿ ಕೂಡ ಪಡೆದಿದ್ದರು.

More from Filmibeat

English summary
Bollywood actor Vidyut Jammawal only Indian actor to feature in the list of 10 people you don't want to mess with in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X