ಹಿಮಾಲಯದಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿರುವ ಬಾಲಿವುಡ್ ಸ್ಟಾರ್ ಹೀರೋ; ಯಾಕೀ ಜೀವನ? ಇನ್ನೆಷ್ಟು ದಿನ?

ಬಾಲಿವುಡ್‌ನ ಫಿಟೆಸ್ಟ್ ಹೀರೊಗಳಲ್ಲಿ ಒಬ್ಬರು ವಿದ್ಯುತ್ ಜಮ್ವಾಲ್. ಸಿನಿಮಾ ಬಿಟ್ಟು ಮಾರ್ಷಲ್ ಆರ್ಟ್ಸ್‌ನಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿರುವ ನಟ. ದಕ್ಷಿಣ ಭಾರತದ ಕೆಲವು ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಖಳನಾಯಕನಾಗಿಯೂ ನಟಿಸಿದ್ದಾರೆ. ಈ ನಟ ಹಿಮಾಲಯದಲ್ಲಿ ಸನ್ಯಾಸಿಯಂತೆ ಮೈ ಮೇಲೆ ಬಟ್ಟೆ ಧರಿಸದೆ ತಿರುಗಾಡುತ್ತಿದ್ದಾರೆ.

ವಿದ್ಯುತ್ ಜಮ್ವಾಲ್ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೂ ಮುನ್ನ ದಕ್ಷಿಣ ಭಾರತದ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ದಳಪತಿ ವಿಜಯ್ ನಟಿಸಿದ ತುಪಾಕಿ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಗಮನ ಸೆಳೆದಿದ್ದರು.

Vidyut jammwal leaving without clothes in Himalayas photos goes viral

ಇಷ್ಟೇ ಅಲ್ಲದೆ, 'ಶಕ್ತಿ', 'ಊಸರವೆಲ್ಲಿ', 'ತುಪಾಕಿ', 'ಬಿಲ್ಲಾ 2', 'ಅಂಜಾನ್' ಅಂತಹ ಸಿನಿಮಾಗಳ ಮೂಲಕ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಪರಿಚಿತ. ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ ಬಳಿಕ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಬಹುತೇಕ ಆಕ್ಷನ್ ಸಿನಿಮಾಗಳ ಮೂಲಕವೇ ಅಭಿಮಾನಿಗಳನ್ನು ಸಂಪಾಧಿಸಿರೋ ವಿದ್ಯುತ್ ಜಮ್ವಾಲ್ ಬೆತ್ತಲೆಯಾಗಿ ಪೋಸ್ ಕೊಟ್ಟ ಫೋಟೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ವಿದ್ಯುತ್ ಜಮ್ವಾಲ್ ಇಂದು (ಡಿಸೆಂಬರ್ 10) 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಿಮಾಲಯದ ತಪ್ಪಲಿನಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬೆತ್ತಲೆಯಾಗಿಯೇ ಅಡುಗೆ ಹಾಗೂ ಝರಿಯ ನೀರಿನಲ್ಲಿ ಸ್ನಾನ ಮಾಡುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ವಿದ್ಯುತ್ ಡಿಸೆಂಬರ್ 10, 1980 ರಂದು ಜಮ್ಮು - ಕಾಶ್ಮೀರದಲ್ಲಿ ಜನಿಸಿದರು. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಸಂತನಂತೆ ಹಿಮಾಲಯದ ಕಾಡು ಮತ್ತು ನದಿಗಳಲ್ಲಿ ಆದಿವಾಸಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಲ್ಲೇ ಸುಮಾರು 10 ದಿನಗಳ ಕಾಲ ಹೀಗೆ ಜೀವನ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

ತನ್ನ ಐ‍ಷಾರಾಮಿ ಜೀವನವನ್ನು ಬದಿಗಿಟ್ಟು ಕಳೆದ 14 ವರ್ಷಗಳಿಂದ ಹೀಗೆ 7 ರಿಂದ 10 ದಿನ ಒಂಟಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಂಡಿರುವುದಾಗಿ ವಿದ್ಯುತ್ ಜಮ್ವಾಲ್ ಫೋಟೊಗಳನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ. "ದೈವಿಕ ವಾಸಸ್ಥಾನ.. 14 ವರ್ಷಗಳ ಹಿಂದೆ ಈ ಅಭ್ಯಾಸ ಶುರುವಾಯ್ತು. ನನಗಿದು ಅರಿವಿಗೆ ಬರುವ ಮೊದಲೇ ಪ್ರತಿ ವರ್ಷ 7-10 ದಿನಗಳನ್ನು ಏಕಾಂಗಿಯಾಗಿ ಕಳೆಯುವುದು ನನ್ನ ಜೀವನದ ಅವಿಭಾಜ್ಯ ಅಂಗವಾಯಿತು." ಎಂದು ವಿದ್ಯುತ್ ಹೇಳಿದ್ದಾರೆ.

ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕಮಾಂಡೋ 2' ಹಾಗೂ 'ಕಾಮಾಂಡೋ 3' ಅಂತಹ ಸೂಪರ್ ಆಕ್ಷನ್ ಸಿನಿಮಾಗಳನ್ನು ನೀಡಿದ ಬಳಿಕ ಇತ್ತೀಚೆಗಷ್ಟೇ 'IB71' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ನಿರ್ಮಾಪಕ ಕೂಡ ಆಗಿದ್ದರು. ಈ ಸಿನಿಮಾಗೆ ಬಹುತೇಕ ಪಾಸಿಟಿವ್ ರಿವ್ಯೂ ಸಿಕ್ಕಿತ್ತು.

ಸದ್ಯ ವಿದ್ಯುತ್ ಜಮ್ವಾಲ್ ಕೈಯಲ್ಲಿ ಎರಡು ಸಿನಿಮಾಗಳಿವೆ. ಬಾಲಿವುಡ್ ಸಿನಿಮಾ 'ಶೇರ್ ಸಿಂಗ್ ರಾಣಾ' ಹಾಗೂ 'ಕ್ರ್ಯಾಕ್' ಚಿತ್ರೀಕರಣ ನಡೆಯಿತ್ತಿದೆ. ಸದ್ಯ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಹಿಮಾಲಯದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇದೇ ವೇಳೆ ವಿದ್ಯುತ್ ಜಮ್ವಾಲ್ ನಡಿಸುತ್ತಿರುವ 'ಕ್ರ್ಯಾಕ್' ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. 2022, ಅಕ್ಟೋಬರ್‌ನಲ್ಲಿ ಈ ಸಿನಿಮಾ ಅನೌನ್ಸ್ ಆಗಿತ್ತು. ಇದೊಂದು ಸ್ಪೋರ್ಟ್ ಡ್ರಾಮ ಶೈಲಿಯ ಸಿನಿಮಾ ಆಗಿದ್ದು, 2024, ಫೆಬ್ರವರಿ, 23ರಂದು ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಲಾಗಿದೆ.

More from Filmibeat

English summary
Bollywood actor Vidyut Jammwal no cloths photos goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X